ಮಿನಿ ರಾಯಲ್ ಎನ್‌ಫೀಲ್ಡ್ ಬೈಕ್ ನಿರ್ಮಿಸಿ ಮಗನಿಗೆ ಗಿಫ್ಟ್!

By Web DeskFirst Published Sep 23, 2019, 7:51 PM IST
Highlights

ತನ್ನ 6 ವರ್ಷದ ಮಗನಿಗೆ ರಾಯಲ್ ಎನ್‌ಫೀಲ್ಡ್ ಬೈಕ್ ಸವಾರಿ ಮಾಡುವ ಆಸೆ. ಮಗನ ಆಸೆಯನ್ನು ಪೂರೈಸಲು ಪುಟ್ಟ ರಾಯಲ್ ಎನ್‌ಫೀಲ್ಡ್ ನಿರ್ಮಿಸಿ ಗಿಫ್ಟ್ ನೀಡಲಾಗಿದೆ. 

ಕೊಲ್ಲಂ(ಸೆ.23): ರಾಯಲ್ ಎನ್‌ಫೀಲ್ಡ್ ಬೈಕ್ ರೈಡ್ ಮಾಡಬೇಕು ಅನ್ನೋದು ಬಹುತೇಕ ಯುವ ಜನತೆಯ  ಕನಸು. ಎನ್‌ಫೀಲ್ಡ್ ಬೈಕ್‌ನಲ್ಲಿ ಸವಾರಿ ಮಾಡುವುದು ಎಂದರೆ ಖುಷಿ ಮಾತ್ರವಲ್ಲ, ಘನತೆ ಕೂಡ ಹೌದು. ಹೀಗಾಗಿ ಕಾಲೇಜು ವಿದ್ಯಾರ್ಥಿಗಳು, ಯುವಕ ಯುವತಿರು ಹೆಚ್ಚಾಗಿ ರಾಯಲ್ ಎನ್‌ಫೀಲ್ಡ್ ಮೊರೆ ಹೋಗುತ್ತಾರೆ. ಆದರೆ ತನ್ನ 6 ವರ್ಷದ ಮಗ ಎನ್‌ಫೀಲ್ಡ್ ಬೈಕ್ ಸವಾರಿ ಮಾಡಲು ಆಗ್ರಹಿಸಿದರೆ  ಏನು ಮಾಡುವುದು? ಧೃತಿಗೆಡದ ತಂದೆ ಮಗನಿಗಾಗಿ ಪುಟ್ಟ ಎನ್‌ಫೀಲ್ಡ್ ಬೈಕ್ ನಿರ್ಮಿಸಿದ್ದಾರೆ.

ಇದನ್ನು ಓದಿ: ಮಕ್ಕಳಿಗಾಗಿ ಪುಟ್ಟ ಆಟೋ ರಿಕ್ಷಾ ನಿರ್ಮಿಸಿದ ತಂದೆ!

ಮಿನಿ ರಾಯಲ್ ಎನ್‌ಫೀಲ್ಡ್ ಬೈಕ್‌ಗೂ ಅಸಲಿ ಬೈಕ್‌ಗೂ ಯಾವುದೇ ವ್ಯತ್ಯಾಸವಿಲ್ಲ. ಮಿರರ್, ಟ್ಯಾಂಕ್, ಹ್ಯಾಂಡಲ್ ಬಾರ್, ಸೀಟ್, ಡಿಸೈನ್ ಸೇರಿದಂತೆ ಎಲ್ಲವೂ ಪ್ರತಿರೂಪ. ಈ ಅದ್ಭುತ ಹಾಗೂ ಪುಟಾಣಿ ಬೈಕ್ ನಿರ್ಮಾಣವಾಗಿರುವುದು ಕೇರಳದ ಕೊಲ್ಲಂನಲ್ಲಿ. ವಿಶೇಷ ಅಂದರೆ ಈ ಮಿನಿ ರಾಯಲ್ ಎನ್‌ಫೀಲ್ಡ್  ಎಲೆಕ್ಟ್ರಿಕ್ ಬೈಕ್.

ಇದನ್ನು ಓದಿ: ಹಾರ್ಲೆ ಡೇವಿಡ್‌ಸನ್‌ ಲೈವ್‌ ವೈರ್‌ ಹಾಗೂ ಸ್ಟ್ರೀಟ್‌ 750 ಬೈಕ್‌ಗಳ ಖದರ್‌ ನೋಡಿ!

ಫೈಬರ್ ಹಾಗೂ ಮೆಟಲ್‌ನಿಂದ  ಮಿನಿ ರಾಯಲ್ ಎನ್‌ಫೀಲ್ಡ್ ಬೈಕ್ ನಿರ್ಮಿಸಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಕನಿಷ್ಠ 3 ಗಂಟೆ ಪ್ರಯಾಣ ಮಾಡಬಹುದು. ಇದೀಗ ತಂದೆ ಬಳಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಇದ್ದರೆ, ಮಗನಿಗೆ ಪುಟ್ಟ ಬೈಕ್ ಗಿಫ್ಟ್ ನೀಡಲಾಗಿದೆ.


 

click me!