ಮೋಟಾರ್ ಕಾಯ್ದೆ ತಿದ್ದುಪಡಿ, ಕಾರಿನ ಫಸ್ಟ್‌ಏಯ್ಡ್ ಬಾಕ್ಸಲ್ಲಿ ಕಾಂಡೋಮ್ ಇಲ್ದಿದ್ರೆ ದಂಡ!| ಲೈಂಗಿಕ ಸುರಕ್ಷತೆಗಗಿ ಮಾತ್ರವಲ್ಲ..., ಕಾಂಡೋಮ್ ಇಡಲು ಹೇಳಲು ಬೆರೆಯೇ ಕಾರಣವಿದೆ!
ನವದೆಹಲಿ[ಸೆ.22]: ರಸ್ತೆ ಅಪಘಾತಗಳ ತಡೆಗಾಗಿ ರಸ್ತೆ ಸುರಕ್ಷತಾ ಕ್ರಮ ಉಲ್ಲಂಘಿಸುವ ವಾಹನ ಸವಾರರಿಗೆ ಹೆಚ್ಚು ದಂಡ ವಿಧಿಸುವ ಮೋಟಾರ್ ಕಾಯ್ದೆ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದ ಬೆನ್ನಲ್ಲೇ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕ್ಯಾಬ್‌ಗಳ ಪ್ರಥಮ ಚಿಕಿತ್ಸೆಯ ಬಾಕ್ಸ್‌ನಲ್ಲಿ ಕಾಂಡೋಮ್ ಹೊಂದಿಲ್ಲದ್ದಕ್ಕೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಕ್ಯಾಬ್ ಚಾಲಕರು ತಮ್ಮ ವಾಹನಗಳ ಪ್ರಥಮ ಚಿಕಿತ್ಸೆಯ ಬಾಕ್ಸ್‌ಗಳಲ್ಲಿ ಕಾಂಡೋಮ್‌ಗಳನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.
ಕಾಂಡೋಮ್ ಅನ್ನು ಲೈಂಗಿಕ ಸುರಕ್ಷತೆಗಾಗಿ ಬಳಸಲಾಗುವ ಸಾಧನವೆಂದು ತಿಳಿಯಲಾಗಿದೆ. ಆದರೆ, ಕಾರಿನಲ್ಲಿರುವ ಒತ್ತಡದ ಪೈಪ್ ಸ್ಫೋಟಿಸಿದಾಗ, ಅದರಲ್ಲಿನ ಸೋರಿಕೆಯನ್ನು ಕೆಲವೊತ್ತು ಕಾಂಡೋಮ್ ತಡೆಯಲಿದೆ. ಮಳೆಯಾದಾಗ, ಶೂಗಳನ್ನು ಇದು ಮರೆಮಾಚುತ್ತದೆ. ಗಾಯವಾದಾಗ ಟರ್ನಕೋಟ್ ಆಗಿಯೂ ಕಾಂಡೋಮ್ ಅನ್ನು ಬಳಸಬಹುದಾಗಿದೆ ಎಂದು ಹಲವು ಕ್ಯಾಬ್ ಚಾಲಕರು ಹೇಳಿದ್ದಾರೆ.
1993ರ ಮೋಟಾರ್ ವಾಹನ ನಿಯಮಗಳು ಹಾಗೂ 1989ರ ಕೇಂದ್ರೀಯ ಮೋಟಾರ್ ವಾಹನಗಳ ಕಾಯ್ದೆ ಪ್ರಕಾರ, ವಾಹನಗಳಲ್ಲಿ ಕಡ್ಡಾಯವಾಗಿ ಪ್ರಥಮ ಚಿಕಿತ್ಸೆಯ ಬಾಕ್ಸ್‌ಗಳಿರಬೇಕು. ಆದರೆ, ಅವುಗಳಲ್ಲಿ ಕಾಂಡೋಮ್ ಇಡಬೇಕು ಎಂಬುದು ಕಡ್ಡಾಯವಲ್ಲ.