ಶೀಘ್ರದಲ್ಲೇ ಪೆಟ್ರೋಲ್ ಮಾರುತಿ ಬ್ರೆಜಾ ಬಿಡುಗಡೆ- ಡೀಸೆಲ್ ಕಾರಿಗಿಂತ ಕಡಿಮೆ ಬೆಲೆ!

By Web DeskFirst Published May 8, 2019, 5:50 PM IST
Highlights

ಮಾರುತಿ ಬ್ರೆಜಾ ಕಾರು ಇದೀಗ ಪೆಟ್ರೋಲ್ ಎಂಜಿನ್‌ನಲ್ಲಿ ಬಿಡುಗಡೆಯಾಗುತ್ತಿದೆ. ಇಷ್ಟು ದಿನ ಡೀಸೆಲ್ ಎಂಜಿನ್ ಮಾತ್ರ ಲಭ್ಯವಿತ್ತು. ಇದೀಗ ಪೆಟ್ರೋಲ್ ಕೂಡ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಈ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ

ನವದೆಹಲಿ(ಮೇ.08): ಮಾರುತಿ ಬ್ರೆಜಾ ಕಾರು ಭಾರತದಲ್ಲಿ ಗರಿಷ್ಠ ಮಾರಾಟವಾಗುತ್ತಿರುವ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ರೆಜಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಮಹೀಂದ್ರ, ಟಾಟಾ, ಹ್ಯುಂಡೈ ಸೇರಿದಂತೆ ಹಲವು ಕಂಪನಿಗಳು ಸಬ್‌ಕಾಂಪಾಕ್ಟ್ ಕಾರು ಬಿಡುಗಡೆ ಮಾಡಿದೆ. ಆದರೆ ಮಾರುತಿ ಬ್ರೆಜಾ ಹಿಂದಿಕ್ಕಿಲು ಸಾಧ್ಯವಾಗಿಲ್ಲ. ಇದೀಗ ಮಾರುತಿ ಬ್ರೆಜಾ ಪೆಟ್ರೋಲ್ ಕಾರು ಬಿಡುಗಡೆ ಮಾಡುತ್ತಿದೆ.

ಇದನ್ನೂ ಓದಿ: ದುಬಾರಿ ಸುಜುಕಿ ಸ್ವಿಫ್ಟ್ ಕಾರು ಬಿಡುಗಡೆ-ಬೆಲೆ ಎಷ್ಟು?

ಮಾರುತಿ ಬ್ರೆಜಾ ಸದ್ಯ ಡೀಸೆಲ್ ವೇರಿಯೆಂಟ್ ಮಾತ್ರ ಲಭ್ಯವಿದೆ. ಇದೀಗ ಪೆಟ್ರೋಲ್ ಎಂಜಿನ್ ಕಾರು ಬಿಡುಗಡೆಗೆ ಮುಂದಾಗಿದೆ. ನೂತನ ಪೆಟ್ರೋ ಎಂಜಿನ್ ಮಾರುತಿ ಬ್ರೆಜಾ ಕಾರಿಗೆ K12M ಎಂಜಿನ್ ಬಳಸಲಾಗುತ್ತೆ.  ಸದ್ಯ ನೂತನ ವ್ಯಾಗನ್ಆರ್ ಹಾಗೂ ಇಗ್ನಿಸ್ ಕಾರಿನಲ್ಲಿ ಇದೇ ಎಂಜಿನ್ ಬಳಸಲಾಗಿದೆ. 1.2 ಲೀಟರ್ K ಸೀರಿಸ್ ಎಂಜಿನ್, 82 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಸಿಲಿದೆ.

ಇದನ್ನೂ ಓದಿ: ಕಡಿಮೆ ಬೆಲೆಯಲ್ಲಿ ಸುಜುಕಿ ಕ್ಯಾರಿ ಟೆಂಪೋ ಟ್ರಾವಲರ್ ಬಿಡುಗಡೆ!

ನೂತನ ಮಾರುತಿ ಬ್ರೆಜಾ ಪೆಟ್ರೋಲ್ ಕಾರು  BS-VI ಎಮಿಶನ್ ಎಂಜಿನ್ ಹೊಂದಿರಲಿದೆ. ಹೀಗಾಗಿ bhp ಪವರ್ ಹಾಗೂ   Nm ಟಾರ್ಕ್ ಬದಲಾವಣೆಯಾಗೋ ಸಾಧ್ಯತೆಗಳಿವೆ. ಸದ್ಯ ನೂತನ ಮಾರುತಿ ಬ್ರೆಜಾ ಪೆಟ್ರೋಲ್ ಕಾರಿನ ಬೆಲೆ ಬಹಿರಂಗವಾಗಿಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ ಬ್ರೆಜಾ ಡೀಸೆಲ್ ಕಾರಿನ ಬೆಲೆ 7.85 ಲಕ್ಷ ರೂಪಾಯಿಯಿಂದ, 9.13 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 2020ರ ಆರಂಭದಲ್ಲಿ ಈ ಕಾರು ಬಿಡುಗಡೆಯಾಗಲಿದೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!