ಲ್ಯಾಂಬೋರ್ಗಿನಿ ಕಾರಿಗೆ ಬೆಂಝ್ ಬೆಂಗಾವಲು- ಅಂಬಾನಿ ಅಲ್ಲ, ಹೈದರಾಬಾದಿ!

By Web Desk  |  First Published May 7, 2019, 8:28 PM IST

ಅಂಬಾನಿ ಹಾಗೂ ಕುಟಂಬಸ್ಥರು ಮಾತ್ರವಲ್ಲ ಹಲವು ಉದ್ಯಮಿಗಳು ತಮ್ಮ ಬೆಂಗಾವಲು ಪಡೆಗೆ ದುಬಾರಿ ಕಾರು ಇಟ್ಟುಕೊಂಡಿದ್ದಾರೆ. ಇದೀಗ ಹೈದರಾಬಾದಿಯ ಬೆಂಗಾವಲು ಪಡೆ ಭಾರಿ ಸುದ್ದಿಯಾಗುತ್ತಿದೆ.


ಹೈದರಾಬಾದ್(ಮೇ.07): ವಿಶ್ವದ  ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಹಾಗೂ ಕುಟಂಬಸ್ಥರು ಪ್ರಯಾಣಿಸುವಾಗಿ ಬೆಂಗಾವಲು ಪಡೆ ರಕ್ಷಣೆ ನೀಡುತ್ತೆ. ಅಂಬಾನಿ ದುಬಾರಿ ಬೆಂಟ್ಲಿ ಬೆಂಟೆಯಾಗ ಕಾರಿನಲ್ಲಿ ಪ್ರಯಾಣಸಿದರೆ, ಬೆಂಗಾವಲು ಪಡೆ ರೇಂಜ್ ರೋವರ್ ಲ್ಯಾಂಡ್ ರೋವರ್ ಮೂಲಕ ಭದ್ರತೆ ನೀಡುತ್ತದೆ. ಬೆಂಗಾವಲು ಪಡಗೆ ದುಬಾರಿ ವಾಹನ ನೀಡಿದ ಕೀರ್ತಿ ಅಂಬಾನಿಗೆ ಸಲ್ಲುತ್ತೆ. ಇದೀಗ ಹೈದರಾಬಾದ್‌ನಲ್ಲಿ ಬೆಂಗಾವಲು ಪಡೆಗೆ ದುಬಾರಿ ಕಾರು ನೀಡಿ ಸುದ್ದಿಯಾಗಿದೆ.

ಇದನ್ನೂ ಓದಿ: ಹ್ಯುಂಡೈ ಗ್ರ್ಯಾಂಡ್ i10 CNG ವೇರಿಯೆಂಟ್ ಕಾರು ಬಿಡುಗಡೆ- ಬೆಲೆ ಎಷ್ಟು?

Tap to resize

Latest Videos

ಹೈದರಾಬಾದ್‌ನ ಗದ್ದಾಫಿ ಮಲಿಕ್ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಇದರಲ್ಲಿ ಪ್ರಮುಖವಾಗಿ ಲ್ಯಾಂಬೋರ್ಗೀನಿ ಅವೆಂಟಡೂರ್ SVJ ಕಾರು ಮಲಿಕ್ ನೆಚ್ಚಿನ ಕಾರು. ಸರಿಸುಮಾರು 6 ಕೋಟಿ ರೂಪಾಯಿಯ ಈ ಕಾರಿನಲ್ಲಿ ಮಲಿಕ್ ತೆರಳುತ್ತಿದ್ದರೆ, ಮಲಿಕ್ ಬೆಂಗಾವಲು ಪಡೆ ಮರ್ಸಡೀಸ್ ಬೆಂಝ್ AMG G63 ಹಾಗೂ ಟೊಯೊಟಾ ಫಾರ್ಚುನರ್ ಕಾರು ಭದ್ರತೆ ನೀಡುತ್ತಿದೆ.

ಇದನ್ನೂ ಓದಿ: ಅಂಬಾನಿ ಕಾರು ಕಲೆಕ್ಷನ್ ಕಂಡು ದಂಗಾದ ಮುಂಬೈ ಇಂಡಿಯನ್ಸ್!

ಬೆಂಗಾವಲು ಪಡೆಯಲ್ಲಿರುವ ಮರ್ಸಡೀಸ್ ಬೆಂಝ್ AMG G63 ಕಾರಿನ ಬೆಲೆ 2.19 ಕೋಟಿ, ಇನ್ನು ಟೊಯೊಟಾ ಫಾರ್ಚುನರ್ ಬೆಲೆ ಸರಿಸುಮಾರ್ 30 ಲಕ್ಷ ರೂಪಾಯಿ.  ಬೆಂಗಾವಲು ಭದ್ರತೆಗೆ ದುಬಾರಿ ಕಾರು ಇಟ್ಟುಕೊಂಡಿರುವ ಗದ್ದಾಫಿ ಮಲಿಕ್ ಇದೀಗ ದಕ್ಷಿಣ ಭಾರತದಲ್ಲಿ ಸುದ್ದು ಮಾಡುತ್ತಿದ್ದಾರೆ.

click me!