ಟಾಟಾ ಏಸ್ ಟ್ರಕ್‌ಗಿಂತ ದೊಡ್ಡದು, ಕಡಿಮೆ ಬೆಲೆಗೆ ಟಾಟಾ ನೂತನ ಮಿನಿ ಟ್ರಕ್ ಅನಾವರಣ ಮಾಡಿದೆ. ಟಾಟಾ ಇಂಟ್ರಾ ಕಾಂಪಾಕ್ಟ್ ಟ್ರಕ್ ಬೆಲೆ, ವಿಶೇಷತೆ ಏನು? ಇಲ್ಲಿದೆ ವಿವರ
ನವದೆಹಲಿ(ಮೇ.08): ಟಾಟಾ ಕಂಪನಿ ಇತ್ತೀಚೆಗೆ ಹೊಸ ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇದರ ಬೆನ್ನಲ್ಲೇ ಟಾಟಾ ಮೋಟಾರ್ಸ್ ಮಿನಿ ಟ್ರಕ್ ಅನಾವರಣ ಮಾಡಿದೆ. ಟಾಟಾ ಇಂಟ್ರಾ ಕಾಂಪಾಕ್ಟ್ ಟ್ರಕ್ ಅನಾವರಣ ಮಾಡಲಾಗಿದೆ. ಮೇ 22 ರಂದು ಬಿಡುಗಡೆಯಾಗಲಿರುವ ಈ ಟ್ರಕ್ ಭಾರತದ ಎಲ್ಲಾ ಡೀಲರ್‌ಗಳ ಬಳಿಕ ಲಭ್ಯವಾಗಲಿದೆ.
ಇದನ್ನೂ ಓದಿ: ಲ್ಯಾಂಬೋರ್ಗಿನಿ ಕಾರಿಗೆ ಬೆಂಝ್ ಬೆಂಗಾವಲು- ಅಂಬಾನಿ ಅಲ್ಲ, ಹೈದರಾಬಾದಿ!
ನೂತನ ಟಾಟಾ ಮಿನಿ ಟ್ರಕ್ 4316 mm ಉದ್ದ, 1639 mm ಅಗಲ ಹಾಗೂ 1919 mm ಎತ್ತರ ಹೊಂದಿರುವ ಈ ಟ್ರಕ್, ಸದ್ಯ ಮಾರುಕಟ್ಟೆಯಲ್ಲಿ ಟಾಟಾ ಏಸ್‌ಗಿಂತ ಬಲಿಷ್ಠ ಹಾಗೂ ದೊಡ್ಡದಾಗಿದೆ. ನೂತನ ಮಿನಿ ಟ್ರಕ್ ಟಾಟಾ ಏಸ್‌ಗೆ ಬದಲಾಗಿ ಬಿಡುಗಡೆ ಮಾಡಿಲ್ಲ. ಟಾಟಾ ಏಸ್ ಶೀಘ್ರದಲ್ಲೇ BS-VI ಎಮಿಶನ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಎಂದು ಟಾಟಾ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಹ್ಯುಂಡೈ ಗ್ರ್ಯಾಂಡ್ i10 CNG ವೇರಿಯೆಂಟ್ ಕಾರು ಬಿಡುಗಡೆ- ಬೆಲೆ ಎಷ್ಟು?
ನೂತನ ಟಾಟ್ ಇಂಟ್ರಾ ಕಾಂಪಾಕ್ಟ್ ಟ್ರಕ್ ಭಾರತ ಸ್ಟೇಜ್ VI(BS-6) ಎಂಜಿನ್ ಹೊಂದಿದೆ. 1.4 ಲೀಟರ್ ಡೈರೆಕ್ಟ್ ಇಂಜೆಕ್ಷನ್ ಡೀಸೆಲ್ ಎಂಜಿನ್, 1396 CC ಹೊಂದಿದ್ದು, 69 bhp (@ 4000) ಪವರ್ ಹಾಗೂ 140 Nm (@1800-3000 rpm) ಪೀಕ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಗೇರ್ ಟ್ರಾನ್ಸ್‌ಮಿಶನ್ ಹೊಂದಿದೆ. ನೂತನ ಟಾಟಾ ಇಂಟ್ರಾ ಕಾಂಪಾಕ್ಟ್ ಟ್ರಕ್ ಬೆಲೆ 4.73 ಲಕ್ಷ ರೂಪಾಯಿಯಿಂದ ಆರಂಭಗೊಳ್ಳಲಿದೆ.