ಇನೋವಾಗೆ ಪೈಪೋಟಿ- ಬಿಡುಗಡೆಯಾಗುತ್ತಿದೆ 7 ಸೀಟರ್ ಮಾರುತಿ ವ್ಯಾಗನ್ಆರ್!

Published : May 06, 2019, 04:56 PM IST
ಇನೋವಾಗೆ ಪೈಪೋಟಿ- ಬಿಡುಗಡೆಯಾಗುತ್ತಿದೆ 7 ಸೀಟರ್ ಮಾರುತಿ ವ್ಯಾಗನ್ಆರ್!

ಸಾರಾಂಶ

ಇನೋವಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಇದೀಗ ಮಾರುತಿ ಸುಜುಕಿ ನೂತನ ಕಾರು ಬಿಡುಗಡೆ ಮಾಡುತ್ತಿದೆ. ಕಡಿಮೆ ಬೆಲೆಯಲ್ಲಿ 7 ಸೀಟಿನ ವ್ಯಾಗನ್ಆರ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಈ ಕಾರಿನ ವಿಶೇಷತೆ ಇಲ್ಲಿದೆ.

ನವದೆಹಲಿ(ಮೇ.06): ಮಾರುತಿ ಸುಜುಕಿಯ ನೂತನ ವ್ಯಾಗನ್ಆರ್ ಕಾರು ಹೊಸ ಅವತಾರದಲ್ಲಿ ಬಿಡುಗಡೆಯಾಗಿ ದಾಖಲೆ ಬರೆದಿದೆ. ಹೊಸ ಲುಕ್, ಬಲಿಷ್ಠ ಎಂಜಿನ್ ಹಾಗೂ ಹಳೇ ವ್ಯಾಗನ್ಆರ್ ಕಾರಿಗಿಂತ ದೊಡ್ಡ ಗಾತ್ರದಲ್ಲಿರುವ ನೂತನ ವ್ಯಾಗನ್ಆರ್ ಕಾರು ಕಾರು ಪ್ರಿಯರನ್ನು ಮೋಡಿ ಮಾಡಿತ್ತು. ಇದೀಗ ಮಾರುತಿ ವ್ಯಾಗನ್ಆರ್ ಕಾರು 7 ಸೀಟರ್ MPV ಕಾರು ಬಿಡುಗಡೆ ಮಾಡುತ್ತಿದೆ.

ಇದನ್ನೂ ಓದಿ: ಕಡಿಮೆ ಬೆಲೆಯಲ್ಲಿ ಸುಜುಕಿ ಕ್ಯಾರಿ ಟೆಂಪೋ ಟ್ರಾವಲರ್ ಬಿಡುಗಡೆ!

ಜೂನ್ ತಿಂಗಳಲ್ಲಿ ನೂತನ ಮಾರುತಿ ವ್ಯಾಗನ್ಆರ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಆದರೆ ಹೊಸ ವರ್ಷದ ಆರಂಭದಲ್ಲಿ ಹೊಸ ಅವತಾರದಲ್ಲಿ ಮಾರುತಿ ವ್ಯಾಗನ್ಆರ್ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ 7 ಸೀಟರ್ ವ್ಯಾಗನ್ಆರ್ ಕಾರು ಬಿಡುಗಡೆ ಮಾಡಿದರೆ ಮಾರಾಟದಲ್ಲಿ ಹಿನ್ನಡೆಯಾಗಬಹುದು ಅನ್ನೋ ಕಾರಣಕ್ಕೆ ಇದೀಗ ಬಿಡುಗಡೆ ವಿಳಂಭ ಮಾಡೋ ಸಾಧ್ಯತೆ ಇದೆ.

ಇದನ್ನೂ ಓದಿ: ಸೌತ್ ಆಫ್ರಿಕಾದಲ್ಲಿ ಭಾರತದ ಕಾರಿಗೆ ಭಾರೀ ಬೇಡಿಕೆ!

7 ಸೀಟರ್ ವ್ಯಾಗನ್ಆರ್ ಕಾರು  K12M 1.2 ಪೆಟ್ರೋಲ್ ಎಂಜಿನ್ ಹೊಂದಿದೆ. 82 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.   5 ಸ್ಪೀಡ್ AMT/AGS ವೇರಿಯೆಂಟ್ ಕೂಡ ಲಬ್ಯವಿದೆ. ನೂತನ 7 ಸೀಟರ್ ವ್ಯಾಗನ್ಆರ್ ಕಾರಿನ ಬೆಲೆ ಬಹಿರಂಗ ಪಡಿಸಿಲ್ಲ. ಈ ಕಾರು ಸದ್ಯದಲ್ಲಿ ಬಿಡುಗಡೆಯಾಗಲಿರುವ ರೆನಾಲ್ಟ್ ಟ್ರೈಬರ್ ಸೇರಿದಂತೆ MPV ಕಾರುಗಳಿಗೆ ಪೈಪೋಟಿ ನೀಡಲಿದೆ.
 

PREV
click me!

Recommended Stories

ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?
Virat Kohli to KL Rahul: ವಿರಾಟ್ ಕೊಹ್ಲಿ to ಕೆಎಲ್ ರಾಹುಲ್, ಭಾರತೀಯ ಕ್ರಿಕೆಟಿಗರಲ್ಲಿದೆ ಅತೀ ದುಬಾರಿ ಕಾರು