ಮಾರುತಿ ಬಳಿ ಡೀಸೆಲ್‌ ಕಾರುಗಳಿಗೆ ಟಾಟಾ ಕಂಪನಿ ಗುಡ್‌ಬೈ?

By Web DeskFirst Published May 6, 2019, 8:48 AM IST
Highlights

ಮಾರುತಿ ಬಳಿಕ ಟಾಟಾ ಕಂಪನಿ ಡೀಸೆಲ್‌ ಕಾರುಗಳಿಗೆ ಗುಡ್‌ಬೈ ಹೇಳುತ್ತಾ ಎಂಬ ಅನುಮಾನ ವ್ಯಕ್ತವಾಗಿದೆ. ಇದಕ್ಕೇನು ಕಾರಣ? ಇಲ್ಲಿದೆ ನೋಡಿ ವಿವರ

ನವದೆಹಲಿ[ಮೇ.06]: ಭಾರತ್‌ ಸ್ಟೇಜ್‌- 6 ಮಾಲಿನ್ಯ ನಿಯಂತ್ರಣ ಮಾನದಂಡ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ, ಟಾಟಾ ಮೋಟರ್ಸ್ಸ್ ಸಣ್ಣ ಡೀಸೆಲ್‌ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ.

ಬಿಎಸ್‌- 6 ಮಾನದಂಡ ಜಾರಿಯಾದರೆ ವಾಹನಗಳ ಉತ್ಪಾದನಾ ವೆಚ್ಚ ಅಧಿಕವಾಗಲಿದ್ದು, ಗ್ರಾಹಕರ ಸಂಖ್ಯೆಯಲ್ಲೂ ಇಳಿಕೆ ಆಗಲಿದೆ. ಈ ಕಾರಣಕ್ಕಾಗಿ ಈಗಾಗಲೇ ಮಾರುತಿ ಸುಝಕಿ ಇಂಡಿಯಾ ಡೀಸೆಲ್‌ ಕಾರುಗಳ ಉತ್ಪಾದನೆಯನ್ನು 2020ರ ಏ.1ರಿಂದ ಕಡಿತಗೊಳಿಸುತ್ತಿರುವುದಾಗಿ ಪ್ರಕಟಿಸಿದೆ.

ಟಾಟಾ ಮೋಟ​ರ್ಸ್ಸ್ ತನ್ನ ಆರಂಭಿಕ ವಾಹನಗಳಾದ 1 ಲಿಟರ್‌ ಡೀಸೆಲ್‌ ಎಂಜಿನ್‌ನ ಟಿಯಾಗೋ, 1.05 ಲೀಟರ್‌ನ ಟೈಗರ್‌ ಸೆಡಾನ್‌ ಮತ್ತು 1.3 ಲೀಟರ್‌ ಡೀಸೆಲ್‌ ಎಂಜಿನ್‌ನ ಬೋಲ್ಟ್‌ ಮತ್ತು ಜೆಸ್ಟ್‌ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಇವುಗಳ ಅಧಿಕ ವೆಚ್ಚದ ಹಿನ್ನೆಲೆಯಲ್ಲಿ ಈ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ.

click me!