ಮಾರುತಿ ಸುಜುಕಿ ಸಂಸ್ಥೆ ಹೊಸ ಎರಡು ಕಾರುಗಳನ್ನ ಬಿಡುಗಡೆ ಮಾಡಲು ಮುಂದಾಗಿದೆ. 2019ರಲ್ಲಿ ನೂತನ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಇಲ್ಲಿದೆ ಹೆಚ್ಚಿನ ವಿವರ.
ಬೆಂಗಳೂರು(ಡಿ.19): ಭಾರತದ ಆಟೋಮೊಬೈಲ್ ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಮಾರುತಿ ಸುಜುಕಿ ಸಂಸ್ಥೆ 2019ರಲ್ಲಿ ಹೊಸ ಮಾಡೆಲ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ. ನೂತನ 2 ಕಾರುಗಳು ಸಂಪೂರ್ಣ ಹೊಸ ಮಾಡೆಲ್‌ಗಳಾಗಿವೆ ಎಂದು ಮಾರುತಿ ಸುಜುಕಿ ಸಂಸ್ಥೆ ಹೇಳಿದೆ.
ಇದನ್ನೂ ಓದಿ: 2018ರಲ್ಲಿ ಬಿಡುಗಡೆಯಾದ ಗರಿಷ್ಠ ಮೈಲೇಜ್ ಬೈಕ್!
undefined
ಸದ್ಯ ಮಾರುಕಟ್ಟೆಯಲ್ಲಿರುವ ಮಾಡೆಲ್‌ಗಳ ಫೇಸ್‌ಲಿಫ್ಟ್ ಅಥವಾ ಹಳೇ ಮಾಡೆಲ್ ಕಾರುಗಳ ಹೊಸ ಅವತಾರದಲ್ಲಿ ಬಿಡುಗಡೆ ಮಾಡುತ್ತಿಲ್ಲ. ನೂತನ ಎಮಿಶನ್ ನಿಯಮದ ಬಿಎಸ್ IV ತಂತ್ರಜ್ಞಾನ ಹೊಂದಿರುವ ಎಂಜಿನ್ ಈ ನೂತನ ಕಾರಿನಲ್ಲಿರಲಿದೆ ಎಂದು ಸಂಸ್ಥೆ ಹೇಳಿದೆ.
ಇದನ್ನೂ ಓದಿ: 5 ಲಕ್ಷ ರೂಪಾಯಿ ಒಳಗಿನ 10 ಕಾರು ಇಲ್ಲಿದೆ-ಕಡಿಮೆ ಬೆಲೆ ಗರಿಷ್ಠ ಮೈಲೇಜ್!
2019ರ ಆರಂಭದಲ್ಲೇ ವಿಟಾರ ಬ್ರಿಜಾ ಹಾಗೂ ಮಾರುತಿ ಬಲೆನೋ ಕಾರುಗಳು ಫೇಸ್‌ಲಿಫ್ಟ್ ವರ್ಶನ್ ಬಿಡುಗಡೆಯಾಗಲಿದೆ. ಇದರ ಬೆನ್ನಲ್ಲೇ ಹೊಸ ಮಾಡೆಲ್ ಕಾರುಗಳು ಮಾರುಕಟ್ಟೆ ಪ್ರವೇಶಿಸಲಿದೆ. ಈ ಮೂಲಕ 2019ರಲ್ಲಿ ಭಾರತೀಯ ಗ್ರಾಹಕರನ್ನ ಸೆಳೆಯಲು ಎಲ್ಲಾ ತಯಾರಿ ಮಾಡಿಕೊಂಡಿದೆ.