ಮಹೀಂದ್ರ ಸಂಸ್ಥೆಯ ಬಹುನಿರೀಕ್ಷಿತ ಸಬ್‌ಕಾಂಪಾಕ್ಟ್ SUV ಕಾರು ಶೀಘ್ರದಲ್ಲೇ ಮಾರಾಟ ಆರಂಭಿಸಲಿದೆ. ಈ ಕಾರಿಗೆ XUV 300 ಹೆಸರಿಡಲಾಗಿದ್ದು, ಮಾರುತಿ ಬ್ರಿಜಾ , ಫೋರ್ಡ್ ಇಕೋಸ್ಪೋರ್ಟ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ನವದೆಹಲಿ(ಡಿ.19): ಮಹೀಂದ್ರ ಹೊಸದಾಗಿ ಬಿಡುಗಡೆ ಮಾಡಲಿರುವ ಸಬ್‌ಕಾಂಪಾಕ್ಟ್ SUV ಕಾರಿಗೆ ಮಹೀಂದ್ರ XUV 300 ಹೆಸರಿಡಲಾಗಿದೆ. ಮಾರುತಿ ಬ್ರಿಜಾ, ಫೋರ್ಡ್ ಇಕೋಸ್ಪೋರ್ಟ್‌ಗೆ ಪ್ರತಿಸ್ಪರ್ಧಿಯಾಗಿ ನೂತನ ಕಾರನ್ನ ಮಹೀಂದ್ರ ಬಿಡುಗಡೆ ಮಾಡಲಿದೆ. 2019ರ ಫೆಬ್ರವರಿಯಲ್ಲಿ ನೂತನ ಕಾರು ಗ್ರಾಹಕರ ಕೈಸೇರಲಿದೆ.
undefined
ಆಕರ್ಷಕ ವಿನ್ಯಾಸ, ಹೆಡ್‌ಲ್ಯಾಂಪ್ಸ್, ಫಾಗ್ ಲ್ಯಾಂಪ್ಸ್‌ಗಳಲ್ಲಿ ಹೊಸತನ ತರಲಾಗಿದೆ. 17 ಇಂಚಿನ ಅಲೋಯ್ ವೀಲ್ಹ್ಸ್, ರೂಫ್ ಮೌಂಟೆಡ್ ಸ್ಪಾಯ್ಲರ್, ಬೀಫಿ ರೇರ್ ಬಂಪರ್, ಜೊತೆಗೆ ಸನ್‌ರೂಫ್ ಕೂಡ ನೂತನ ಮಹೀಂದ್ರ XUV 300 ಕಾರಿನಲ್ಲಿ ಲಭ್ಯವಿದೆ.
ಒಳಭಾಗದ ಕ್ಯಾಬಿನ್, ಡ್ಯಾಶ್‌ಬೋರ್ಡ್ ಹೆಚ್ಚು ಕಡಿಮೆ ಮಹೀಂದ್ರ XUV 500 ಕಾರಿನ್ನೇ ಹೋಲುತ್ತಿದೆ. ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪಾರ್ಕಿಂಗ್ ಕ್ಯಾಮರ ಹಾಗೂ ಸೆನ್ಸಾರ್ ಸೇರಿದಂತೆ ಹಲವು ಫೀಚರ್ಸ್‌ಗಳು ನೂತನ ಕಾರಿನಲ್ಲಿದೆ.
1.5 ಲೀಟರ್ ಡೀಸೆಲ್ ಹಾಗೂ 1.2 ಲೀಟರ್ ಪೆಟ್ರೋಲ್ ಎಂಜಿನ್‌ಗಳಲ್ಲಿ ನೂತನ ಕಾರು ಲಭ್ಯವಿದೆ. ಮಾರತಿ ಬ್ರಿಜಾ ಕಾರಿಗೆ ತೀವ್ರ ಪೈಪೋಟಿ ನೀಡಬಲ್ಲ ಎಲ್ಲಾ ಲಕ್ಷಣಗಳು ಈ ಕಾರಿನಲ್ಲಿದೆ. ಇದರ ಬೆಲೆ 8 ರಿಂದ 11 ಲಕ್ಷ ರೂಪಾಯಿ ಇರಲಿದೆ ಎಂದು ಅಂದಾಜಿಸಲಾಗಿದೆ.