2018ರಲ್ಲಿ ಭಾರತದ ಆಟೋಮೊಬೈಲ್ ಕ್ಷೇತ್ರ ಹಲವು ಏರಿಳಿತಕ್ಕೂ ಸಾಕ್ಷಿಯಾಗಿದೆ. ಆದರೆ ಪ್ರಸಕ್ತ ವರ್ಷದಲ್ಲಿ ಬಿಡುಗಡೆಯಾದ ಬೈಕ್ ಹಾಗೂ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ಗರಿಷ್ಠ ಮಾರಾಟದ ದಾಖಲೆ ಹೊಂದಿದೆ. ಪೈಕಿ ಗರಿಷ್ಠ ಮೈಲೇಜ್ ನೀಡಬಲ್ಲ ದ್ವಿಚಕ್ರ ವಾಹನ ವಿವರ ಇಲ್ಲಿದೆ.
ಬೆಂಗಳೂರು(ಡಿ.19): ಹೊಸ ವರ್ಷ ಬರಮಾಡಿಕೊಳ್ಳಲು ಇನ್ನು ಕೆಲದಿನಗಳು ಮಾತ್ರ ಬಾಕಿ. 2018ನೇ ವರ್ಷದಲ್ಲಿ ಹಲವು ಹೊಸ ಕಾರು-ಬೈಕ್‌ಗಳು ಮಾರುಕಟ್ಟೆ ಪ್ರವೇಶಿಸಿದೆ. ನೂತನ ನಿಯಮ, ಹೊಸ ಆವಿಷ್ಕಾರಕ್ಕೂ 2018 ಸಾಕ್ಷಿಯಾಗಿದೆ. 2018ರಲ್ಲಿ ಬಿಡುಗಡೆಯಾದ ಕೆಲ ಬೈಕ್‌ಗಳು ಭಾರತೀಯರ ಮನಗೆದ್ದಿದೆ.
ಇದನ್ನೂ ಓದಿ: ಮಾರುತಿ ಬ್ರಿಜಾ ಪ್ರತಿಸ್ಪರ್ಧಿ ಮಹೀಂದ್ರ XUV 300 ಮಾರುಕಟ್ಟೆಗೆ ಲಗ್ಗೆ!
undefined
ಟಿವಿಎಸ್, ಸುಜುಕಿ, ಬಜಾಜ್ ಸೇರಿದಂತೆ ಹಲವು ಕಂಪೆನಿಗಳು ಬೈಕ್‌ಗಳು 2018ರಲ್ಲಿ ಸದ್ದು ಮಾಡಿದೆ. ಹೀಗೆ ಭಾರತದ ಮಾರುಕಟ್ಟೆ ಪ್ರವೇಶಿಸಿದ ಬೈಕ್‌ಗಳಲ್ಲಿ ಗರಿಷ್ಠ ಮೈಲೇಜ್ ನೀಡಬಲ್ಲ ಬೈಕ್‌ಗಳ ಲಿಸ್ಟ್ ಇಲ್ಲಿದೆ.
ಇದನ್ನೂ ಓದಿ: ನೂತನ ಬಜಾಜ್ ಪ್ಲಾಟಿನ 110 ಬೈಕ್ ಬಿಡುಗಡೆ-ಬೆಲೆ ಎಷ್ಟು?
ಟಿವಿಎಸ್ ಅಪಾಚೆ RTR 1604V
ಎಂಜಿನ್: 159.5 ಸಿಸಿ
ಮೈಲೇಜ್ : 50.94 kmph
ಸುಜುಕಿ ಜಿಕ್ಸರ್ FI(ABS)
ಎಂಜಿನ್: 155 ಸಿಸಿ
ಮೈಲೇಜ್ : 51 kmph
ಸುಜುಕಿ ಇಂಟ್ರುಡರ್
ಎಂಜಿನ್: 150 ಸಿಸಿ
ಮೈಲೇಜ್ : 54 kmph
ಸುಜುಕಿ ಬರ್ಗಮನ್
ಎಂಜಿನ್: 125 ಸಿಸಿ
ಮೈಲೇಜ್ : 54.7 kmph
ಟಿವಿಎಸ್ ಜುಪಿಟರ್
ಎಂಜಿನ್: 110 ಸಿಸಿ
ಮೈಲೇಜ್ : 60 kmph
ಟಿವಿಎಸ್ ರೆಡಾನ್
ಎಂಜಿನ್: 109.7 ಸಿಸಿ
ಮೈಲೇಜ್ : 66 kmph