ಯೇ ಥಾರ್ ಮುಜೆ ದೇದೆ ಠಾಕೂರ್; ಮೆಮೆ ಮೆಚ್ಚಿದ ಆನಂದ್ ಮಹೀಂದ್ರ!

By Suvarna News  |  First Published Aug 22, 2020, 3:40 PM IST

ಮಹೀಂದ್ರ ಈಗಾಗಲೇ ಹೊಚ್ಚ ಹೊಸ ಥಾರ್ ಕಾರು ಅನಾವರಣ ಮಾಡಿದೆ. ಹೊಸ ಡಿಸೈನ್, ಪವರ್‌ಫುಲ್ ಎಂಜಿನ್ ಸೇರಿದಂತೆ ಹಲವು ವಿಶೇಷತೆಗಳನ್ನೊಳಗೊಂಡ ಥಾರ್ ಕಾರು ಇದೀಗ ದೇಶದಲ್ಲಿ ಸಂಚಲನ ಮೂಡಿಸಿದೆ. ಥಾರ್ ಕುರುತು ಟ್ರೋಲ್‌ಗಳು, ಮೆಮೆಗಳು ಸಾಮಾಜಿ ಜಾಲತಾಣದಲ್ಲಿ ಹರಿದಾಡುತ್ತಿದೆ. ಶೋಲೆ ಚಿತ್ರದ ಡೈಲಾಗ್‌ನ್ನು ಥಾರ್ ಕಾರಿಗೆ ಪರಿವರ್ತಿಸಿರುವ ಮೆಮೆಯನ್ನು ಮಹೀಂದ್ರ ಮುಖ್ಯಸ್ಥ ಆನಂದ್ ಮಹೀಂದ್ರ ಮೆಚ್ಚಿಕೊಂಡಿದ್ದಾರೆ.


ಮುಂಬೈ(ಆ.22): ನ್ಯೂ ಜನರೇಶನ್ ಮಹೀಂದ್ರ ಥಾರ್ ಕಾರು ಅನಾವರಣ ಮಾಡಲಾಗಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಕಾರು ಅನಾವರಣಗೊಂಡಿದೆ. ಗಾಂಧಿ ಜಯಂತಿ(ಅಕ್ಟೋಬರ್ 2) ರಂದು ಥಾರ್ ವಾಹನ ಬಿಡುಗಡೆಯಾಗುತ್ತಿದೆ. ಅನಾವರಣ ಬೆನ್ನಲ್ಲೇ ಥಾರ್ ವಾಹನ ಜನರನ್ನು ಆಕರ್ಷಿಸಿದೆ. ಸೆಲೆಬ್ರೆಟಿಗಳು ಸೇರಿದಂತೆ ಹಲವರು ಥಾರ್ ವಾಹನ ಖರೀದಿಗೆ ಮುಂದಾಗಿದ್ದಾರೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಥಾರ್ ಸಂಚಲನ ಮೂಡಿಸಿದೆ. ಇದರಲ್ಲಿ ಥಾರ್ ಹಾಗೂ ಆನಂದ್ ಮಹೀಂದ್ರ ಕುರಿತ ಮೆಮೆ ಭಾರಿ ಸದ್ದು ಮಾಡುತ್ತಿದೆ.

ಆತ್ಮನಿರ್ಭರ್‌ ಭಾರತಕ್ಕೆ ಪುಷ್ಠಿ ನೀಡಿದ ನೂತನ ಮಹೀಂದ್ರ ಥಾರ್!

Tap to resize

Latest Videos

undefined

ಥಾರ್ ವಾಹನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವು ಟ್ರೋಲ್ ಹಾಗೂ ಮೆಮೆ ಹರಿದಾಡುತ್ತಿದೆ. ಇದರಲ್ಲಿ ಬಾಲಿವುಡ್ ಜನಪ್ರಿಯ ಚಿತ್ರ ಶೋಲೆ ಡೈಲಾಗ್ ಪರಿವರ್ತಿಸಿ ಥಾರ್ ವಾಹನಕ್ಕೆ ಅನ್ವಯಿಸಲಾಗಿದೆ. ಈ ಮೆಮೆಯನ್ನು ಆನಂದ್ ಮಹೀಂದ್ರ ಮೆಚ್ಚಿಕೊಂಡಿದ್ದಾರೆ. ಯೇ ಥಾರ್ ಮುಜೆ ದೇದೆ ಠಾಕೂರ್ ಅನ್ನೋ ಮೆಮೆಯನ್ನು ಆನಂದ್ ಮಹೀಂದ್ರ ಮೆಚ್ಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಈ ಡೈಲಾಗ್ ಕುರಿತು ವಿಡಿಯೋ ಹಾಗೂ ಧ್ವನಿ ನೀಡಲು ಸಾಧ್ಯವೇ ಎಂದು ಮೆಮೆ ಕರ್ತರಲ್ಲಿ ಕೇಳಿಕೊಂಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಹೊಚ್ಚ ಹೊಸ ಮಹೀಂದ್ರ ಥಾರ್ ಅನಾವರಣ!.

ಆನಂದ್ ಮಹೀಂದ್ರ ಮನವಿ ಬೆನ್ನಲ್ಲೇ ಹಲವು ವಿಡಿಯೋ ಮೆಮೆಗಳು ಬರಲಾರಂಭಿಸಿದೆ. ಇದರಲ್ಲಿ ಗಬ್ಬರ್ ಸಿಂಗ್ ಮೆಮೆಯನ್ನ ತಾವು ಸೇವ್ ಮಾಡಿ ಇಟ್ಟುಕೊಳ್ಳುವುದಾಗಿ ಆನಂದದ್ ಮಹೀಂದ್ರ ಹೇಳಿದ್ದಾರೆ.

ಥಾರ್ ವಾಹನ ಅನಾವರಣಗೊಂಡ ಬೆನ್ನಲ್ಲೇ, ಹೊಚ್ಚ ಹೊಸ ವಾಹನಕ್ಕಾಗಿ ಅಕ್ಟೋಬರ್ 2 ವರೆಗೆ ಕಾಯವುದು ಕಷ್ಟ. ತನಗೆ ಏನಾದರು ಮಾಡಿ ಹೊಚ್ಚ ಹೊಸ ಥಾರ್ ವಾಹನ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದರು.

click me!