ಗುಡ್ ಬೈ ಹೇಳಿದ ಮಾರುತಿ ಸುಜುಕಿ ಡಿಸೈರ್ ಡೀಸೆಲ್ ಕಾರು!

By Suvarna NewsFirst Published Mar 21, 2020, 9:41 PM IST
Highlights

ಸೆಡಾನ್ ಕಾರುಗಳ ಪೈಕಿ ಮಾರುತಿ ಸುಜುಕಿ ಡಿಸೈರ್ ಹೆಚ್ಚು ಜನಪ್ರಿಯ. ಹೆಚ್ಚು ಸ್ಥಳಾವಕಾಶ, ಮೈಲೇಜ್, ಬೆಲೆ ಸೇರಿದಂತೆ ಎಲ್ಲಾ ವಿದದಲ್ಲೂ ಡಿಸೈರ್ ಹಲವರ ಮೊದಲ ಆಯ್ಕೆ. ಇದೀಗ ಡಿಸೈರ್ ಡೀಸೆಲ್ ಕಾರು ಭಾರತಕ್ಕೆ ಗುಡ್ ಬೈ ಹೇಳುತ್ತಿದೆ. ಡಿಸೈರ್ ಡೀಸೆಲ್ ಕಾರು ನಿರ್ಮಾಣ ಸ್ಥಗಿತಗೊಂಡಿದೆ.

ನವದೆಹಲಿ(ಮಾ.21): ಭಾರತದ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಗೆ ಮೊದಲ ಸ್ಥಾನ. ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶದವರೆಗೂ ಮಾರುತಿ ಸುಜುಕಿ ಜನಪ್ರಿಯವಾಗಿದೆ. ಇತರ ಕಾರುಗಳಿಗಿಂತ ಕಡಿಮೆ ಬೆಲೆ, ಗರಿಷ್ಠ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚಾ ಹಾಗೂ ಆಕರ್ಷಕ ವಿನ್ಯಾಸ ಈ ಕಾರಿನ ವಿಶೇಷತೆ ಹೀಗಾಗಿ ಹೆಚ್ಚಿನವರು ಮಾರುತಿ ಸುಜುಕಿ ಕಾರಿನ ಮೊರೆ ಹೋಗತ್ತಾರೆ. ಸೆಡಾನ್ ಕಾರುಗಳಲ್ಲಿ ಮಾರುತಿ ಸುಜುಕಿ ಡಿಸೈರ್ ಹೆಚ್ಚು ಜನಪ್ರಿಯವಾಗಿದೆ. ಇದೀಗ ಡಿಸೈರ್ ಡೀಸೆರ್ ಕಾರು ನಿರ್ಮಾಣ ಸ್ಥಗಿತಗೊಂಡಿದೆ.

ಮಾರುತಿ ಬ್ರೆಜ್ಜಾ ಪೆಟ್ರೋಲ್ ಕಾರು ಬಿಡುಗಡೆ, ಇಲ್ಲಿದೆ ಬೆಲೆ, ವಿಶೇಷತೆ!

ಎಪ್ರಿಲ್ 1, 2020ರಿಂದ ಎಲ್ಲಾ ನೂತನ ವಾಹನಗಳು BS6 ಎಮಿಶನ್ ಎಂಜಿನ್ ಹೊಂದಿರಬೇಕು. ಹೀಗಾಗಿ ಬಹುತೇಕ ಎಲ್ಲಾ ಆಟೋ ಕಂಪನಿಗಳು ಡಡೀಸೆಲ್ ಕಾರನ್ನು ಸ್ಥಗಿತಗೊಳಿಸುತ್ತಿದೆ. ಮಾರುತಿ ಸುಜುಕಿ ಬ್ರೆಜ್ಜಾ ಡೀಸೆಲ್ ಕಾರು ಸ್ಥಗಿತಗೊಂಡು ಇದೀಗ ಪೆಟ್ರೋಲ್ ಕಾರು ಬಿಡುಗಡೆಯಾಗಿದೆ. ಇನ್ನು ಎಸ್ ಕ್ರಾಸ್ ಡೀಸೆಲ್ ಕಾರು ಸ್ಥಗಿತಗೊಂಡಿದ್ದು, ಪೆಟ್ರೋಲ್ ವೇರಿಯೆಂಟ್‌ಗೆ ಪರಿವರ್ತನೆಗೊಂಡಿದೆ. ಇದೀಗ ಡಿಸೈರ್ ಡೀಸೆಲ್ ಸರದಿ.

BS6 ಮಾರುತಿ ವ್ಯಾಗನರ್ CNG ಕಾರು ಬಿಡುಗಡೆ!

ಮಾರುತಿ ಸುಜುಕಿ ಡಿಸೈರ ಫೇಸ್‌ಲಿಫ್ಟ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಈ ಕಾರು ಕೇವಲ ಪೆಟ್ರೋಲ್ ವೇರಿಯೆಂಟ್ ಮಾತ್ರ ಬಿಡುಗಡೆಯಾಗುತ್ತಿದೆ. ಡೀಸೆಲ್ ಕಾರನ್ನು ಸ್ಥಗಿತಗೊಳಿಸಲಾಗಿದೆ. ಈ ಮೂಲಕ ಮಾರುತಿ ಸುಜಿಕಿ ಬಹುತೇಕ ಎಲ್ಲಾ ಡೀಸೆಲ್ ಕಾರುಗಳು ಸ್ಥಗಿತಗೊಂಡಿದ್ದು, ಕೇವಲ ಪೆಟ್ರೋಲ್ ವೇರಿಯೆಂಟ್‌ನಲ್ಲಿ ಲಭ್ಯವಿದೆ.
 

click me!