ಮಾರ್ಚ್‌ನಲ್ಲಿ ಮಾರುತಿಗೆ ಹೊಡೆತ- ಪ್ರಗತಿಯತ್ತ ಹೊಂಡಾ, ಮಹೀಂದ್ರ, ಟೊಯೊಟ!

By Web DeskFirst Published Apr 18, 2019, 6:17 PM IST
Highlights

ಮಾರ್ಚ್ ತಿಂಗಳ ಕಾರು ಮಾರಾಟದ ಅಂಕಿ ಅಂಶ ಬಿಡುಗಡೆಯಾಗಿದೆ. ಮಾರುತಿ ಸುಜುಕಿ ಮಾರಾಟದಲ್ಲಿ ಇಳಿಮುಖವಾಗಿದ್ದರೆ, ಹೊಂಡಾ ಮಹೀಂದ್ರ ಹಾಗೂ ಟೊಯೊಟಾ ಏರಿಕೆಯಾಗಿದೆ. ಇಲ್ಲಿದೆ ಮಾರ್ಚ್ ತಿಂಗಳ ಮಾರಾಟದ ವಿವರ.

ನವದೆಹಲಿ(ಏ.18): ಭಾರತದ ಕಾರು ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಮಾರುತಿ ಸುಜುಕಿ ಇದೀಗ ಆತಂಕ ಎದುರಿಸುತ್ತಿದೆ. ಕಳೆದ ಕೆಲ ತಿಂಗಳುಗಳಿಂದ ಮಾರುತಿ ಸುಜುಕಿ  ಕಾರುಗಳ ಮಾರಾಟದಲ್ಲಿ ಇಳಿಕೆಯಾಗಿದೆ. ಇದೀಗ ಮಾರ್ಚ್ ತಿಂಗಳ ಮಾರಾಟ ಅೆಂಕಿ ಅಂಶ ಬಹಿರಂಗವಾಗಿದ್ದು, ಮತ್ತೆ ಮಾರುತಿ ಸುಜುಕಿ ಕಾರು ಮಾರಾಟ ಇಳಿಮುಖವಾಗಿದೆ.

2018-19ರ ಆರ್ಥಿಕ ವರ್ಷ ಭಾರತೀಯ ಆಟೋ ಕಂಪನಿಗಳಿಗೆ ಸಮಾಧಾನ ತಂದಿತ್ತು. ಆದರೆ ಮಾರ್ಚ್ ತಿಂಗಳು ಮಾರುತಿ ಸುಜುಕಿಗೆ ಹೊಡೆತ ನೀಡಿದೆ. ಮಾರ್ಚ್ ತಿಂಗಳಲ್ಲಿ ಮಾರುತಿ ಸುಜುಕಿ ಕಾರು ಮಾರಾಟದಲ್ಲಿ 1.6 % ಇಳಿಕೆಯಾಗಿದೆ.  ಇತ್ತ ಹೊಂಡಾ, ಮಹೀಂದ್ರ ಹಾಗೂ ಟೊಯೊಟಾ ಕಾರುಗಳು ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿದೆ.  

ಮಾರ್ಚ್ ತಿಂಗಳಲ್ಲಿ ಟೊಯೊಟಾ ಮಾರಾಟ ಶೇಕಡಾ 0.9 ರಷ್ಟು ಏರಿಕೆ ಕಂಡಿದ್ದೆರ, ಮಹೀಂದ್ರ 1% ಹಾಗೂ ಹೊಂಡಾ ಬರೋಬ್ಬಿರ 27% ಏರಿಕೆ ಕಂಡಿದೆ. ಹೊಂಡಾ  2018-19ರ ಆರ್ಥಿಕ ವರ್ಷದಲ್ಲಿ ಒಟ್ಟು ಶೇಕಾಡ 8 ರಷ್ಟು ಏರಿಕೆ ಕಂಡಿದೆ.

ಮಾರ್ಚ್ ತಿಂಗಳ ಮಾರಾಟ ವಿವರ:

ಕಾರು ಮಾರಾಟ(2019) ಮಾರಾಟ(2018)
ಮಾರುತಿ 1,58,076 1,60,598
ಮಹೀಂದ್ರ 62,952 62,076
ಹೊಂಡಾ 17,202 13,574 
ಟೊಯೊಟಾ 13,662 13,537
click me!