ಎಪ್ರಿಲಿಯಾ ಸ್ಟ್ರೋಮ್ 125 ಆಟೋಮ್ಯಾಟಿಕ್ ಸ್ಕೂಟರ್ ಲಾಂಚ್!

By Web Desk  |  First Published Apr 18, 2019, 5:19 PM IST

VS Ntorq 125, ಸುಜುಕಿ ಆಕ್ಸೆಸ್ 125 ಸೇರಿದಂತೆ 125cc ರೇಂಜ್ ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಿ ಎಪ್ರಿಲಿಯಾ ಸ್ಟ್ರೋಮ್ 125 ಸ್ಕೂಟರ್ ಬಿಡುಗಡೆಯಾಗಿದೆ. ನೂತನ ಸ್ಕೂಟರ್ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ. 


ನವದೆಹಲಿ(ಏ.18): ಭಾರತದಲ್ಲಿ 125cc ಸ್ಕೂಟರ್‍‌ಗೆ ಭಾರಿ ಬೇಡಿಕೆ ಇದೆ. ಇದೀಗ ಎಪ್ರಿಲಿಯಾ ಸ್ಕೂಟರ್ 125cc ಸ್ಕೂಟರ್ ಬಿಡುಗಡೆ ಮಾಡಿದೆ. ಬಹುನಿರೀಕ್ಷಿತ ಎಪ್ರಿಲಿಯಾ ಸ್ಟ್ರೋಮ್ 125cc ಅಟೋಮ್ಯಾಟಿಕ್ ಸ್ಕೂಟರ್ ಬಿಡುಗಡೆ ಮಾಡಲಾಗಿದೆ. 2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಲಾಗಿದ್ದ ಈ ಸ್ಕೂಟರ್ ಇದೀಗ ಒಂದು ವರ್ಷಗಳ ಬಳಿಕ ಬಿಡುಗಡೆಯಾಗಿದೆ.

ಇದನ್ನೂ ಓದಿ: ಮತದಾನ ಮಾಡುವ ಗ್ರಾಹಕರಿಗೆ ಹೀರೋ ಮೋಟಾರ್‌ನಿಂದ ಭರ್ಜರಿ ಗಿಫ್ಟ್!

Tap to resize

Latest Videos

undefined

ನೂತನ ಎಪ್ರಿಲಿಯಾ ಸ್ಟ್ರೋಮ್ 125 ಆಟೋಮ್ಯಾಟಿಕ್ ಸ್ಕೂಟರ್ ಬೆಲೆ 68,000 ರೂಪಾಯಿ(ಎಕ್ಸ್ ಶೋ ರೂಂ ದೆಹಲಿ). ಆಫ್ ಟೈಯರ್, 12 ಇಂಚಿನ್ ಆಲೋಯ್ ವೀಲ್ಹ್ ಹೊಂದಿರು ನೂತನ ಎಪ್ರಿಲಿಯಾ ಸ್ಟ್ರೋಮ್ 125 ಆಟೋಮ್ಯಾಟಿಕ್ 7 ಲೀಟರ್ ಇಂಧನ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: ಬಾಲಿವುಡ್ ನಟನ ಬೈಕ್ ಸೀಝ್ ಮಾಡಿದ ಪೊಲೀಸ್!

ಎಪ್ರಿಲಿಯಾ ಸ್ಟ್ರೋಮ್ 125 ಆಟೋಮ್ಯಾಟಿಕ್ ಸ್ಕೂಟರ್  124.49cc, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ.  9.51 bhp ಪವರ್ (@7,250 rpm) ಹಾಗೂ 9.9 Nm (@6,250 rpm) ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.   TVS Ntorq 125, ಸುಜುಕಿ ಆಕ್ಸೆಸ್ 125 ಸೇರಿದಂತೆ 125cc ರೇಂಜ್ ಸ್ಕೂಟರ್‌ಗೆ ಪೈಪೋಟಿ ನೀಡಲಿದೆ. 

click me!