ಬಜಾಜ್ ಕಂಪನಿಯ ಕ್ಯೂಟ್ ಕ್ವಾರ್ಡ್ರಿಸೈಕಲ್ ಕಾರು ಬಿಡುಗಡೆಯಾಗಿದೆ. ನೂತನ ಕಾರು 2 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಎರಡು ಕಾರುಗಳ ಬೆಲೆ ಎಷ್ಟು? ಇಲ್ಲಿದೆ ಹೆಚ್ಚಿನ ವಿವರ.
ನವದೆಹಲಿ(ಏ.18): ಬಜಾಜ್ ಆಟೋ ಸಣ್ಣ ಕಾರು ನ್ಯಾನೋ ಸ್ಥಗಿತಗೊಂಡಿಜದೆ. ಇದೀಗ ನೂತನ ಕ್ವಾಡ್ರಿಸೈಕಲ್ ಬಿಡುಗಡೆ ಮಾಡಿದೆ. ಸಣ್ಣ ಕಾರಿನ ರೂಪದಲ್ಲಿರುವ ಬಜಾಜ್ ಕ್ಯೂಟ್ ಇದೀಗ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. 2018ರ ನವೆಂಬರ್‌ನಲ್ಲಿ ಕೇಂದ್ರ ರಸ್ತೆ ಮತ್ತು ಸಾರಿಗೆ ಇಲಾಖೆಯಿಂದ ಪರವಾನಗಿ ಪಡೆದಿರುವ ಬಜಾಜ್ ಕ್ಯೂಟ್ ಕ್ವಾರ್ಡ್ರಿಸೈಕಲ್ ಕಾರು ಬಿಡಡುಗಡೆ ಮಾಡಿದೆ.
undefined
ಇದನ್ನೂ ಓದಿ: HDK ರೇಂಜ್ ರೋವರ್ ಬದಲು ಲೆಕ್ಸಸ್ ಕಾರು ಬಳಕೆ- ಇಲ್ಲಿದೆ 3 ಕೋಟಿ ಕಾರಿನ ವಿಶೇಷತೆ?
ನೂತನ ಬಜಾಜ್ ಕ್ಯೂಟ್ ಬೆಲೆ 2.63 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದರಲ್ಲಿ CNG ವೇರಿಯೆಂಟ್ ಕೂಡ ಲಭ್ಯವಿದೆ. ಬಜಾಜ್ ಕ್ಯೂಟ್ ಬೆಲೆ 2.48 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಇನ್ನು CNG ಕ್ಯೂಟ್ ಕಾರಿನ ಬೆಲೆ 2.78 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಇದನ್ನೂ ಓದಿ: ಬಾಲಿವುಡ್ ನಟನ ಬೈಕ್ ಸೀಝ್ ಮಾಡಿದ ಪೊಲೀಸ್!
ಭಾರತದ 20 ರಾಜ್ಯಗಳಲ್ಲಿ ಬಜಾಜ್ ಕ್ಯೂಟ್ ಕಮರ್ಶಿಯಲ್ ಬಳಕೆ ಮಾಡಲು ಅನುಮತಿ ಸಿಕ್ಕಿದೆ. ಇನ್ನ 15 ರಾಜ್ಯಗಳಲ್ಲಿ ಖಾಸಗಿ ಬಳಕೆಗೆ ಬಜಾಜ್ ಕ್ಯೂಟ್ ಬಳಕೆ ಮಾಡಲು ಅನುಮತಿ ಸಿಕ್ಕಿದೆ. ಈ ಕಾರಿನ ತೂಕ 425 kg. 216cc, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ DTSi ಎಂಜಿನ್ ಹೊಂದಿದೆ. s 13.2 hp ಪವರ್(@ 5,500 rpm)ಹಾಗೂ 18.9 Nm ಟಾರ್ಕ್(@4,000 rpm) ಉತ್ಪಾದಿಸಲಿದೆ.