ಲಾಕ್‌ಡೌನ್ ಅಂತ್ಯದಲ್ಲಿ ದಾಖಲೆ ಬರೆದ ಮಾರುತಿ ಬಲೆನೊ!

By Suvarna NewsFirst Published Jun 7, 2020, 3:01 PM IST
Highlights

ಲಾಕ್‌ಡೌನ್ ಆರಂಭವಾಗುವ ಮೊದಲೇ ಭಾರತದ ಆಟೋಮೊಬೈಲ್ ಕಂಪನಿಗಳು ಬಹುತೇಕ ಬಾಗಿಲು ಮುಚ್ಚಿತ್ತು. ಸರಿಸುಮಾರು 2 ತಿಂಗಳ ಬಳಿಕ ಅಂದರೆ ಮೇ ಅಂತ್ಯದಲ್ಲಿ ಆಟೋಮೊಬೈಲ್ ಘಟಕಗಳು ಪುನರ್ ಆರಂಭಗೊಂಡಿತು.. ಮೇ ತಿಂಗಳಲ್ಲಿ ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರುಗಳ ಪೈಕಿ ಮಾರುತಿ ಸುಜುಕಿ ಬಲೆನೋ ದಾಖಲೆ ಬರೆದಿದೆ.

ನವದೆಹಲಿ(ಜೂ.07): ಮಾರ್ಚ್ ಆರಂಭದಿಂದಲೇ ಭಾರತೀಯ ಆಟೋಮೊಬೈಲ್ ಕಂಪನಿಗಳಿಗೆ ತೀವ್ರ ಹೊಡೆತ ಬಿದ್ದಿತ್ತು. ಚೀನಾದಲ್ಲಿನ ಕೊರೋನಾ ವೈರಸ್‌ನಿಂದ ಕಾರಿನ ಬಿಡಿ ಭಾಗಗಳು ಆಮದು ಸಂಪೂರ್ಣ ಬಂದ್ ಆಗಿತ್ತು. ಮಾರ್ಚ್ 25 ರಿಂದ ಹೇರಲಾಗಿದ್ದ ಲಾಕ್‌ಡೌನ್  ಮೇ ಅಂತ್ಯದಲ್ಲಿ ಸಡಿಲಿಕೆ ಮಾಡಲಾಯಿತು. ಇದರ ನಡುವೆ ಆನ್‌ಲೈನ್ ಬುಕಿಂಗ್, ಡೋರ್ ಸ್ಟೆಪ್ ಡೆಲಿವರಿ ಮೂಲಕ ಆಟೋಮೊಬೈಲ್ ಕಂಪನಿಗಳು ಮಾರಾಟ ನಡೆಸಿತ್ತು. ಈ ಪೈಕಿ ಮೇ ತಿಂಗಳ ಮಾರಾಟ ವಿವರ ಬಹಿರಂಗ ಗೊಂಡಿದ್ದು, ಮಾರುತಿ ಬಲೆನೋ ಕಾರು ಮೊದಲ ಸ್ಥಾನಕ್ಕೇರಿದೆ.

ಬೆಂಗಳೂರಿಗರಿಗೆ ಟಾಟಾ ಮೋಟಾರ್ಸ್ ಭರ್ಜರಿ ಆಫರ್, ಕಾರು ಖರೀದಿ ಈಗ ಸುಲಭ!

ಹ್ಯಾಚ್‌ಬ್ಯಾಗ್ ವಿಭಾಗದಲ್ಲಿ ಮಾರುತಿ ಸುಜುಕಿ ಬಲೆನೋ ಕಾರು ಮೇ ತಿಂಗಳಲ್ಲಿ 1587 ಕಾರುಗಳನ್ನು ಮಾರಾಟ ಮಾಡಿದೆ. ಇನ್ನು ಹ್ಯಾಚ್‌ಬ್ಯಾಗ್ ವಿಭಾಗದಲ್ಲಿ 2ನೇ ಸ್ಥಾನವನ್ನು ಟಾಟಾ ಅಲ್ಟ್ರೋಜ್ ಬಾಚಿಕೊಂಡಿದೆ. ಟಾಟಾ ಮೋಟಾರ್ಸ್ ಇದೀಗ ಭಾರತದಲ್ಲಿ ಮಾರಾಟ ಏರಿಕೆ ಕಂಡಿದೆ. ಭಾರತೀಯರು ಹೆಚ್ಚು ಭಾರತದ ಕಾರುಗಳ ಮೊರೆ ಹೋಗತ್ತಿದ್ದಾರೆ. ಇಷ್ಟೇ ಅಲ್ಲ ಕೊರೋನಾ ಸಮಯದಲ್ಲಿ ಟಾಟಾ ಗ್ರೂಪ್ 1500 ಕೋಟಿ ರೂಪಾಯಿ ದೇಣಿಗೆ ನೀಡಿತ್ತು. ಇದೀಗ ಟಾಟಾ ಮೇಲಿದ್ದ ಅಭಿಮಾನ ಹೆಚ್ಚಾಗಿದೆ. 

ಕೊರೋನಾ ವೈರಸ್: ಜೂನ್ 30ರ ವರೆಗೆ ಫ್ರೀ ಸರ್ವೀಸ್ ವಿಸ್ತರಿಸಿದ ಮಾರುತಿ ಸುಜುಕಿ!

ಟಾಟಾ ಅಲ್ಟ್ರೋಜ್  ಮೇ ತಿಂಗಳಲ್ಲಿ 1379 ಕಾರುಗಳ ಮಾರಾಟ ಮಾಡಿದೆ. ಈ ಮೂಲಕ 2ನೇ ಸ್ಥಾನ ಪಡೆದುಕೊಂಡಿದೆ. ಟಾಟಾ ಕಾರುಗಳ ಪೈಕಿ ಅಲ್ಟ್ರೋಜ್ ಮಾರಾಟದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಇದೀಗ ಟಾಟಾ ಕಾರುಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. 

ಅಚ್ಚರಿ ಎಂಬಂತೆ ವೋಕ್ಸ್‌ವ್ಯಾಗನ್ ಪೊಲೋ ಕಾರು 3ನೇ ಸ್ಥಾನ ಅಲಂಕರಿಸಿದೆ. ಗಣನೀಯ ಏರಿಕೆ ಕಂಡಿರುವ ಪೊಲೋ ಕಾರು ಮಾರಾಟ ಮೇ ತಿಂಗಳಲ್ಲಿ 1126 ಕಾರುಗಳು ಮಾರಾಟವಾಗಿದೆ. ಹ್ಯುಂಡೈ ಐ20 ಕಾರು ಮೇ ತಿಂಗಳಲ್ಲಿ 1000 ಕಾರು ಮಾರಾಟವಾಗಿದೆ.
 

click me!