ಟೊಯೋಟಾದ ಲಕ್ಷುರಿ ವಾಹನಗಳಾದ ಕ್ಯಾಮ್ರಿ ಹೈಬ್ರಿಡ್ ಹಾಗೂ ವೆಲ್‌ಫೈರ್ ಕಾರುಗಳಿಗೆ ಭಾರತದಲ್ಲಿ ಉತ್ತನ ಸ್ಪಂದನೆ ಸಿಕ್ಕಿದೆ. ಸ್ಟೈಲೀಶ್, ಆರಾಮಾದಾಯಕ ಹಾಗೂ ಪವರ್‌ಫುಲ್ ಕಾರುಗಳಾಗಿ ಗುರುತಿಸಿಕೊಂಡಿರುವ ಕ್ಯಾಮ್ರಿ ಹೈಬ್ರಿಡ್ ಹಾಗೂ ವೆಲ್‌ಫೈರ್ ಕಾರುಗಳ ಬೆಲೆ ಹೆಚ್ಚಳವಾಗಿದೆ.
ಬೆಂಗಳೂರು, ಜೂನ್ 06, ಟೊಯೋಟಾ ಕ್ಯಾಮ್ರಿ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ ಮತ್ತು ವೆಲ್‍ಫೈರ್ ಕಾರುಗಳ ಬೆಲೆಯನ್ನು ಜುಲೈ 2020 ರಿಂದ ಹೆಚ್ಚಿಸಲಾಗುವುದು ಎಂದು ಟಯೋಟಾ ಕಿರ್ಲೋಸ್ಕರ್ ಮೋಟರ್ (ಟಿಕೆಎಂ) ಪ್ರಕಟಿಸಿದೆ. ವಿನಿಮಯ ದರದಲ್ಲಿ ಗಣನೀಯ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಈ ಬೆಲೆ ಹೆಚ್ಚಳ ಮಾಡಲಾಗುತ್ತಿದೆ ಎಂದಿದೆ.
ಟೊಯೋಟಾ ಕಿರ್ಲೋಸ್ಕರ್ ಘಟಕದಲ್ಲಿ ಉತ್ಪಾದನೆ ಚುರುಕು; ಮೇ ತಿಂಗಳ ಮಾರಾಟ ವಿವರ ಪ್ರಕಟ!.
ಕ್ಯಾಮ್ರಿ ಹೈಬ್ರಿಡ್ ಎಲೆಕ್ಟ್ರಿಕ್ ವಾಹನ ಹೊಸ ಪೀಳಿಗೆಯ ವಾಹನವಾಗಿದೆ. ಸ್ವಯಂ-ಚಾರ್ಜಿಂಗ್ ಎಲೆಕ್ಟ್ರಿಕ್ ವಾಹನಗಳಾದ ಟಯೋಟಾ ಫ್ಲಾಗ್‍ಶಿಪ್ ಮಾಡೆಲ್‍ಗಳಲ್ಲಿ ಇದು ಅಗ್ರಸ್ಥಾನದಲ್ಲಿದೆ. ತನ್ನ ಡೈನಾಮಿಕ್ ಕಾರ್ಯದಕ್ಷತೆ, ಸ್ಟೈಲಿಂಗ್ ಮತ್ತು ಆರಾಮದಾಯಕವಾದ ಇಂಟೀರಿಯರ್‌ಗಳಿಂದ ಲಕ್ಷುರಿ ಸೆಡಾನ್ ಅನುಭವವನ್ನು ನೀಡಲಿದೆ.
ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಕೋಟಿ ರೂ. ನೀಡಿದ ಟೊಯೋಟಾ ಕಿರ್ಲೋಸ್ಕರ್!
ವೆಲ್‍ಫೈರ್ ಕಾರುನ್ನು ಟಿಕೆಎಂ ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಅಲ್ಟ್ರಾ ಲಕ್ಷುರಿ, ಶಕ್ತಿಶಾಲಿ ಮತ್ತು ಇಕೋ-ಅಡ್ವಾನ್ಸ್ಡ್ ಕಾರ್ಯದಕ್ಷತೆಯನ್ನು ಹೊಂದಿದೆ. ಇದರ ಮತ್ತೊಂದು ವಿಶೇಷವೆಂದರೆ ಕಡಿಮೆ ಇಂಧನ ಬಳಕೆ ಮಾಡಲಿದ್ದು, ಕಾರ್ಬನ್ ಪ್ರಮಾಣವನ್ನು ಕಡಿಮೆ ಹೊರ ಸೂಸುತ್ತದೆ.
ಬಿಡುಗಡೆ ಆದ ದಿನದಿಂದ ಈ ವಾಹನಗಳಿಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾದ ಬೇಡಿಕೆ ಇದೆ. ಇದೀಗ ಈ ಎರಡೂ ವಾಹನಗಳ ಬೆಲೆ ಹೆಚ್ಚಳವಾಗಲಿದೆ ಎಂದು ಟಯೋಟಾ ಕಿರ್ಲೋಸ್ಕರ್ ಮೋಟರ್ ಹೇಳಿದೆ. ಶೀಘ್ರದಲ್ಲೇ ಪರಿಷ್ಕತ ದರ ಬಿಡುಡೆಯಾಗಲಿದೆ.