ಎಲೆಕ್ಟ್ರಿಕ್ ಸ್ಕೂಟರ್ ಯಶಸ್ಸಿನ ಬೆನ್ನಲ್ಲೇ ಬೈಕ್ ಬಿಡುಗಡೆಗೆ ಎದರ್ ಸಿದ್ಧತೆ!

Suvarna News   | Asianet News
Published : Jun 06, 2020, 08:29 PM IST
ಎಲೆಕ್ಟ್ರಿಕ್ ಸ್ಕೂಟರ್ ಯಶಸ್ಸಿನ ಬೆನ್ನಲ್ಲೇ ಬೈಕ್ ಬಿಡುಗಡೆಗೆ ಎದರ್ ಸಿದ್ಧತೆ!

ಸಾರಾಂಶ

ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಬೆಂಗಳೂರಿನ ಎದರ್ ಎನರ್ಜಿ ಮುಂಚೂಣಿಯಲ್ಲಿದೆ. ಎದರ್ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲೇ ಜನಪ್ರಿಯವಾಗಿದೆ. ಎಲೆಕ್ಟ್ರಿಕ್ ಸ್ಕೂಟರ್ ಯಶಸ್ಸಿನ ಬೆನ್ನಲ್ಲೇ ಇದೀಗ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ. ನೂತನ ಬೈಕ್ ವಿನ್ಯಾಸ ಎಲ್ಲರ ಕಣ್ಣು ಕುಕ್ಕುವಂತಿದೆ.

ಬೆಂಗಳೂರು(ಜೂ.06): ಎದರ್ ಎನರ್ಜಿ ಸ್ಕೂಟರ್ ಇದೀಗ ಮಹತ್ವದ ಹೆಜ್ಜೆ ಇಡುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ಬೆಂಗಳೂರಿನ ಎದರ್ ಎನರ್ಜಿ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಸ್ಕೆಚ್ ಬಿಡುಗಡೆ ಮಾಡಿದೆ. ಟಿವಿಎಸ್ ಝೆಪ್ಲಿನ್ ಕ್ರೂಸರ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿರುವ ಈ ನೂತನ ಎದರ್ ಕ್ರೂಸರ್ ಎಲೆಕ್ಟ್ರಿಕ್ ಬೈಕ್ ಹೊಸ ಸಂಚಲನ ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬೆಂಗಳೂರಿನ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತೆ 4 ನಗರಗಳಲ್ಲಿ ಲಾಂಚ್!

ಶಾರ್ಕ್ ಮೀನಿನ ಆಕಾರದಿಂದ ಸ್ಪೂರ್ತಿ ಪಡೆದು ಈ ಬೈಕ್ ಡಿಸೈನ್ ಮಾಡಲಾಗಿದೆ. ಶೈಲಿ, ವಿನ್ಯಾಸ ಸೇರಿದಂತೆ ಕ್ರೂಸರ್ ಬೈಕ್‌ನ ವಿಶೇಷತೆಗಳನ್ನೂ ಒಳಗೊಂಡಿರುವ ಎದರ್ ಎಲೆಕ್ಟ್ರಿಕ್ ಬೈಕ್ ಬ್ಲಾಕ್ ಅಂಡ್ ವೈಟ್ ಕಲರ್ ಥೀಮ್‌ನಲ್ಲಿ ಸ್ಕೆಚ್ ಬಿಡುಗಡೆ ಮಾಡಿದೆ. 

ಎದರ್ ಕ್ರೂಸರ್ ಬೈಕ್ 2022ರಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಡೈಸೈನರ್ ಶ್ರೀಜಿತ್ ಕೃಷ್ಣನ್ ವಿನ್ಯಾಸ ಮಾಡಿರುವ ಈ ಬೈಕ್, ಕ್ಷಣಾರ್ಧದಲ್ಲೇ ಹೆಚ್ಚು ಲೈಕ್ಸ್ ಪಡೆದಿದೆ.

ಎದರ್ ಎನರ್ಜಿಯ ಎದರ್ 450 ಹಾಗೂ ಎದರ್ 350 ಎಲೆಕ್ಟ್ರಿಕ್ ಸ್ಕೂಟರ್ ಯಶಸ್ಸು ಸಾಧಿಸಿದೆ. ಬೆಂಗಳೂರು, ಚೆನ್ನೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಎದರ್ ಎನರ್ಜಿ ಸ್ಕೂಟರ್ ವಿತರಣೆ ಮಾಡುತ್ತಿದೆ. ಸದ್ಯ ಭಾರತದಲ್ಲಿ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ ಪೈಕಿ ಎದರ್ ಎನರ್ಜಿ ಅಗ್ರಸ್ಥಾನದಲ್ಲಿದೆ.

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ