S ಕ್ರಾಸ್ ಕಾರಿಗೆ ಬಂಪರ್ ಆಫರ್ ಘೋಷಿಸಿದ ಮಾರುತಿ ಸುಜುಕಿ!

Published : Sep 02, 2019, 08:37 PM ISTUpdated : Sep 02, 2019, 08:38 PM IST
S ಕ್ರಾಸ್ ಕಾರಿಗೆ ಬಂಪರ್ ಆಫರ್ ಘೋಷಿಸಿದ ಮಾರುತಿ ಸುಜುಕಿ!

ಸಾರಾಂಶ

ಮಾರಾಟ ಕುಸಿತದ ಬೆನ್ನಲ್ಲೇ ಗ್ರಾಹಕರನ್ನು ಸೆಳೆಯಲು ಮಾರುತಿ ಸುಜುಕಿ ಭರ್ಜರಿ ಡಿಸ್ಕೌಂಟ್ ಆಫರ್ ನೀಡಿದೆ. ಮಾರುತಿ ಸುಜುಕಿ S ಕ್ರಾಸ್ ಕಾರು ಖರೀದಿಸುವ ಗ್ರಾಹಕರಿಗೆ ವಿಶೇಷ ಆಫರ್ ನೀಡಲಾಗಿದೆ. 

ನವದೆಹಲಿ(ಸೆ.02): ವಾಹನ ಮಾರಾಟ ಕುಸಿತ ಕಂಡಿರುವ ಬೆನ್ನಲ್ಲೇ ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ಡಿಸ್ಕೌಂಟ್ ಆಫರ್ ನೀಡುತ್ತಿದೆ. ಇದೀಗ ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ S ಕ್ರಾಸ್ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಈ ತಿಂಗಳಲ್ಲಿ  S ಕ್ರಾಸ್  ಖರೀದಿಸುವ ಗ್ರಾಹಕರಿಗೆ ಗರಿಷ್ಠ 1.12 ಲಕ್ಷ ರೂಪಾಯಿ ಡಿಸ್ಕೌಂಟ್ ಸಿಗಲಿದೆ.

ಇದನ್ನೂ ಓದಿ: ಮಾರುತಿ ಸುಜುಕಿ ಡೀಸೆಲ್‌ ಕಾರಿಗೆ ಬಂಪರ್ ಆಫರ್!

ಮಾರುತಿ  S ಕ್ರಾಸ್ ಕಾರಿಗೆ ತೀವ್ರ ಪೈಪೋಟಿ ಎದುರಾಗಿದೆ. ಮಾರುಕಟ್ಟೆಗೆ ಕಿಯಾ ಸೆಲ್ಟೋಸ್ ಕಾರು ಬಿಡುಗಡೆಯಾಗೋ ಮೂಲಕ ಸ್ಪರ್ಧಿ ಮತ್ತಷ್ಟು ಹೆಚ್ಚಾಗಿದೆ. ಇದರ ಬೆನ್ನಲ್ಲೇ ಮಾರುತಿ ಆಫರ್ ಘೋಷಿಸಿದೆ.  ಪ್ರತಿ ತಿಂಗಳು ಸರಾಸರಿ 2500  S ಕ್ರಾಸ್  ಕಾರು ಮಾರಾಟವಾಗುತ್ತಿದೆ.  S ಕ್ರಾಸ್  ಕಾರು ಡೀಸೆಲ್ ವೇರಿಯೆಂಟ್ ಮಾತ್ರ ಲಭ್ಯವಿದೆ. 

ಇದನ್ನೂ ಓದಿ: ಕುಸಿದ ಆಟೋಮೊಬೈಲ್‌ಗೆ ಜೀವಜಲ; GST ಕಡಿತಕ್ಕೆ ಮುಂದಾದ ಕೇಂದ್ರ!

ಮಾರುತಿ ಸುಜುಕಿ S ಕ್ರಾಸ್ ಕಾರು 1.3 L DDiS ಡೀಸೆಲ್ ಎಂಜಿನ್ ಹೊಂದಿದ್ದು,  90bhp ಪವರ್ ಹಾಗೂ 200Nm ಪೀಕ್  ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  5-ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ. ಶೀಘ್ರದಲ್ಲೇ S ಕ್ರಾಸ್ ಕಾರು  1.5L K15B ಎಂಜಿನ್ ‌ಅಪ್‌ಗ್ರೇಡ್ ಮಾಡಲಿದೆ. ಜೊತೆಗೆ BS-VI ಎಮಿಶನ್ ಕೂಡ ಹೊಂದಿರಲಿದೆ. 

ಸೂಚನೆ: ಮಾರುತಿ ಸುಜುಕಿ  S ಕ್ರಾಸ್ ಕಾರಿನ ಮೇಲಿನ ಆಫರ್ ರಾಜ್ಯ, ನಗರ, ಜಿಲ್ಲೆಗಳಲ್ಲಿ ವ್ಯತ್ಯಾಸವಾಗಲಿದೆ. ಹತ್ತಿರದ ಡೀಲರ್ ಸಂಪರ್ಕಿಸಿ ಆಫರ್ ಕುರಿತು ವಿಚಾರಿಸಿ

PREV
click me!

Recommended Stories

ಬೆಂಗಳೂರು ಮಾರುಕಟ್ಟೆಗೆ ಎಂಟ್ರಿಕೊಟ್ಟ ಅಮೆರಿಕ ಟೆಸ್ಲಾ ಕಾರು, ಕೇವಲ 22 ಸಾವಿರ ರೂ.ಗೆ ಬುಕಿಂಗ್
ಆಕಸ್ಮಿಕವಾಗಿ ಅಕ್ಸಿಲರೇಟ್ ಒತ್ತಿದ ಬಾಲಕಿ : ಸೆಗಣಿ ರಾಶಿಯಿಂದಾಗಿ ತಪ್ಪಿತ್ತು ದೊಡ್ಡ ಅನಾಹುತ:ವೀಡಿಯೋ