ಆಟೋಮೊಬೈಲ್‌ ಕ್ಷೇತ್ರಕ್ಕೆ ಕರಾಳ ಆಗಸ್ಟ್‌; ವಾಹನ ಉದ್ಯಮಕ್ಕೆ ಭಾರೀ ಸಂಕಷ್ಟ!

By Kannadaprabha News  |  First Published Sep 2, 2019, 8:25 AM IST

ಆರ್ಥಿಕ ಹಿಂಜರಿತವು ದೇಶದ ಆಟೋಮೊಬೈಲ್‌ ಕ್ಷೇತ್ರವನ್ನು ಕಳೆದ 2 ದಶಕಗಳಲ್ಲೇ ಕಂಡು ಕೇಳರಿಯ ದುಸ್ಥಿತಿಗೆ ಕೊಂಡೊಯ್ದಿರುವ ವರದಿಗಳ ಬೆನ್ನಲ್ಲೇ, ಈ ಕ್ಷೇತ್ರದಲ್ಲಿ ಉಲ್ಬಣವಾಗಿರುವ ಮತ್ತಷ್ಟು ಮಾರುಕಟ್ಟೆ ಸಂಕಷ್ಟದ ಒಂದೊಂದೇ ಕಥೆಗಳ ವ್ಯಥೆಗಳು ಹೊರಹೊಮ್ಮುತ್ತಿವೆ. 


ನವದೆಹಲಿ (ಸೆ. 02): ಆರ್ಥಿಕ ಹಿಂಜರಿತವು ದೇಶದ ಆಟೋಮೊಬೈಲ್‌ ಕ್ಷೇತ್ರವನ್ನು ಕಳೆದ 2 ದಶಕಗಳಲ್ಲೇ ಕಂಡು ಕೇಳರಿಯ ದುಸ್ಥಿತಿಗೆ ಕೊಂಡೊಯ್ದಿರುವ ವರದಿಗಳ ಬೆನ್ನಲ್ಲೇ, ಈ ಕ್ಷೇತ್ರದಲ್ಲಿ ಉಲ್ಬಣವಾಗಿರುವ ಮತ್ತಷ್ಟುಮಾರುಕಟ್ಟೆಸಂಕಷ್ಟದ ಒಂದೊಂದೇ ಕಥೆಗಳ ವ್ಯಥೆಗಳು ಹೊರಹೊಮ್ಮುತ್ತಿವೆ.

ಇತ್ತೀಚೆಗಷ್ಟೇ ಕಾರುಗಳ ಮಾರಾಟದಲ್ಲಿ ಕುಸಿತವಾದ ಕಾರಣಕ್ಕೆ ದೇಶದ ಅತಿದೊಡ್ಡ ಕಾರು ಉತ್ಪಾದನೆ ಸಂಸ್ಥೆಯಾದ ಮಾರುತಿ ಸುಜುಕಿ ತನ್ನ 3000 ಗುತ್ತಿಗೆ ನೌಕರರನ್ನು ಹುದ್ದೆಯಿಂದ ಕಿತ್ತು ಹಾಕಿತ್ತು. ಇದರ ನಡುವೆಯೇ ಭಾರತದ ದಿಗ್ಗಜ ಕಾರು ಉತ್ಪಾದಕ ಸಂಸ್ಥೆಗಳಾದ ಮಾರುತಿ ಸುಝುಕಿ, ಟಾಟಾ ಮೋಟಾರ್ಸ್‌, ಹ್ಯುಂಡೈ ಸೇರಿದಂತೆ ಹಲವು ಪ್ರಮುಖ ಕಂಪನಿಗಳು ಆಗಸ್ಟ್‌ ತಿಂಗಳ ವಾಹನ ಮಾರಾಟದಲ್ಲಿ ಭಾರೀ ಇಳಿಕೆ ದಾಖಲಿಸಿವೆ.

Tap to resize

Latest Videos

undefined

ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಪ್ರಸಕ್ತ ಆಗಸ್ಟ್‌ನಲ್ಲಿ ಮಾರುತಿ ಸುಝುಕಿ ಕಂಪನಿಗಳ ವಾಹನ ಮಾರಾಟದಲ್ಲಿ ಶೇ.ಶೇ.32.7ರಷ್ಟುಕುಸಿತವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಆಲ್ಟೋ ಮತ್ತು ವ್ಯಾಗ್ನಾರ್‌ ಸೇರಿ ಒಟ್ಟಾರೆ 35,895 ಕಾರುಗಳ ಮಾರಾಟವಾಗಿದ್ದವು. ಆದರೆ, ಪ್ರಸ್ತುತ ವರ್ಷದಲ್ಲಿ ಶೇ.71.8ಕ್ಕೆ ಕುಸಿಯುವ ಮೂಲಕ ಕಾರುಗಳ ಮಾರಾಟ ಸಂಖ್ಯೆ 10 ಸಾವಿರಕ್ಕೆ ಇಳಿದಿದೆ.

ಇತರೆ ಕಂಪನಿಗಳಿಗೂ ಹೊಡೆತ:

ದೇಶೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ವರ್ಷದ ಆಗಸ್ಟ್‌ ತಿಂಗಳಲ್ಲಿ ಹೊಂಡಾ ಕಾ​ರ್‍ಸ್ ಇಂಡಿಯಾ. ಲಿ.(ಎಚ್‌ಸಿಐಎಲ್‌) ಸಂಸ್ಥೆಯ 8291 ಕಾರುಗಳು ಮಾತ್ರವೇ ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 17,020 ಕಾರುಗಳ ಮಾರಾಟವಾಗಿದ್ದವು. ಹೀಗಾಗಿ, ಎಚ್‌ಸಿಐಎಲ್‌ ಕಂಪನಿಯ ಕಾರುಗಳ ಮಾರಾಟದಲ್ಲಿ ಶೇ.51.28ಕ್ಕೆ ಇಳಿದಿದೆ..

ಇನ್ನು ಹ್ಯುಂಡೈ ಕಂಪನಿಯ ವಾಹನ ಮಾರಾಟ ಶೇ.9.54, ಮಹಿಂದ್ರಾ ಹಾಗೂ ಮಹಿಂದ್ರಾ ಕಂಪನಿಯ ವಾಹನಗಳ ಮಾರಾಟ ಸಂಖ್ಯೆ ಶೇ.25 ಹಾಗೂ ಟಾಟಾ ಕಿರ್ಲೋಸ್ಕರ್‌ ವಾಹನಗಳ ಮಾರಾಟದಲ್ಲಿ ಶೇ.21, ಹೊಂಡಾ ಕಾ​ರ್‍ಸ್ನ ಮಾರಾಟ ಶೇ.51ರಷ್ಟು, ಟಾಟಾ ಮೋಟಾ​ರ್‍ಸ್ ವಾಹನಗಳ ಮಾರಾಶೇ.58ರಷ್ಟುಭಾರೀ ಇಳಿಕೆ ಕಂಡಿದೆ.

ವೋಲ್ವೋ, ಐಷರ್‌ ಖರೀದಿಸುವವರಿಲ್ಲ:

ಇನ್ನು ವಾಣಿಜ್ಯಾತ್ಮಕ ಹಾಗೂ ಸರಕು ಸಾಗಣೆಗೆ ಪ್ರಸಿದ್ಧವಾದ ವೋಲ್ವೋ ಗ್ರೂಪ್‌ ಹಾಗೂ ಐಷಾರ್‌ ವಾಹನಗಳು ಕೇವಲ 3538 ಮಾರಾಟವಾಗಿದ್ದು, ಈ ಮೂಲಕ ಆಗಸ್ಟ್‌ ತಿಂಗಳ ಮಾರಾಟದಲ್ಲಿ ಶೇ.41.7ಕ್ಕೆ ಕುಸಿತ ದಾಖಲಿಸಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ ವೋಲ್ವೋ ಟ್ರಕ್ಕುಗಳು, ಐಷರ್‌ ಹಾಗೂ ವಿಇ ಕಮರ್ಷಿಯಲ್‌ ವಾಹನಗಳ ಮಾರಾಟ ಸಂಖ್ಯೆ 12,136 ದಾಖಲಿಸಿತ್ತು. ಆದರೆ, ಈ ವರ್ಷ ಈ ಎಲ್ಲಾ ಸರಕು ಸಾಗಣೆ ವಾಹನಗಳ ಮಾರಾಟ ಸಂಖ್ಯೆ 7082ಕ್ಕೆ ಕುಸಿದಿದೆ.

ವಾಹನ ಕಂಪನಿ 2018ರ ಆಗಸ್ಟ್‌ ಮಾರಾಟ 2019ರ ಆಗಸ್ಟ್‌ ಮಾರಾಟ ಇಳಿಕೆ

ಮಾರುತಿ ಸುಝಕಿ 1,58,189 1,06,413 ಶೇ.33

ಹೊಂಡಾ ಕಾ​ರ್‍ಸ್ 17,020 8,291 ಶೇ.51

ಟಾಟಾ ಮೋಟಾ​ರ್‍ಸ್ 17,351 7,316 ಶೇ.58

ಐಷರ್‌ 5,948 3462 ಶೇ.41.7

ವೋಲ್ವೋ ಟ್ರಕ್‌ಗಳು 121 76 ಶೇ.37

click me!