ಆಟೋಮೊಬೈಲ್ ಮಾರಾಟ ಕುಸಿತದಲ್ಲೂ ದಾಖಲೆ ಬರೆದ ಕಿಯಾ ಸೆಲ್ಟೊಸ್!

By Web Desk  |  First Published Sep 2, 2019, 7:33 PM IST

ಭಾರತದ ಆಟೋಮೊಬೈಲ್ ಕ್ಷೇತ್ರ ಕಳೆದ 6 ತಿಂಗಳಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದೆ. ವಾಹನ ಮಾರಾಟ ಕುಸಿತ ಕಾಣುತ್ತಿದೆ. ಆದರೆ ಆಗಸ್ಟ್ 22 ರಂದು ಬಿಡುಗಡೆಯಾದ ಕಿಯಾ ಸೆಲ್ಟೋಸ್ ಕಾರು, 9 ದಿನಗಳಲ್ಲಿ ದಾಖಲೆ ಬೆರೆದಿದೆ. 


ಅನಂತಪುರ(ಸೆ.02): ಭಾರತದಲ್ಲಿ ಕಾರು ಮಾರಾಟ ಪಾತಾಳಕ್ಕೆ ಕುಸಿದಿದೆ. ಆಗಸ್ಟ್ ತಿಂಗಳಲ್ಲಿ ಟಾಟಾ ಮೋಟಾರ್ಸ್, ಮಹೀಂದ್ರ, ಮಾರುತಿ, ಟೊಯೊಟಾ ಸೇರಿದಂತೆ ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ಮಾರಾಟದಲ್ಲಿ ಕುಸಿತ ಕಂಡಿದೆ. ಆದರೆ ಆಗಸ್ಟ್ 22 ರಂದು ಬಿಡುಗಡೆಯಾದ ಕಿಯಾ ಸೆಲ್ಟೋಸ್ SUV ಕಾರು ದಾಖಲೆ ಬರೆದಿದೆ. ಆಗಸ್ಟ್ ತಿಂಗಳಲ್ಲಿ ಗರಿಷ್ಠ ಮಾರಾಟವಾದ  suv ಕಾರು ಅನ್ನೋ ದಾಖಲೆಗೆ ಕಿಯಾ ಸೆಲ್ಟೋಸ್ ಪಾತ್ರವಾಗಿದೆ.

ಇದನ್ನೂ ಓದಿ: ಬಹುನಿರೀಕ್ಷಿತ KIA ಸೆಲ್ಟೋಸ್ ಕಾರು ಬಿಡುಗಡೆ; ಬೆಲೆ 9.69 ಲಕ್ಷ ರೂ!

Latest Videos

undefined

ಆಗಸ್ಟ್ ತಿಂಗಳ 22 ರಂದು ಬಿಡುಗಡೆಯಾದ ಸೆಲ್ಟೊಸ್ 9 ದಿನಗಳಲ್ಲಿ 6,200  ಕಾರುಗಳು ಮಾರಾಟವಾಗಿದೆ. ಈ ಮೂಲಕ ಇತರ ಎಲ್ಲಾ SUV ಕಾರುಗಳನ್ನು ಹಿಂದಿಕ್ಕಿದೆ.  ಎರಡು ತಿಂಗಳಲ್ಲಿ ಕಿಯಾ ಸೆಲ್ಟೊಸ್ ಕಾರಿನ ಬುಕಿಂಗ್ 32,000 ದಾಟಿದೆ. ಇದೀಗ ಮಾರಾಟದಲ್ಲಿ ದಾಖಲೆ ಬರೆಯೋ ಮೂಲಕ ಕಿಯಾ ಆಟೋಮೊಬೈಲ್ ಕ್ಷೇತ್ರಕ್ಕೆ ಹೊಸ ಭರವಸೆ ಮೂಡಿಸಿದೆ.

ಇದನ್ನೂ ಓದಿ: ಕಿಯಾ ಕಾರು ತುಮಕೂರಿನಿಂದ ಅನಂತಪುರಕ್ಕೆ ಹೋದದ್ದು ಏಕೆ?

ಹ್ಯುಂಡೈ ಕ್ರೆಟಾ, ಜೀಪ್ ಕಂಪಾಸ್, ನಿಸಾನ್ ಕಿಕ್ಸ್, ರೆನಾಲ್ಟ್ ಕ್ಯಾಪ್ಚರ್ ಸೇರಿದಂತೆ  SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಸೆಲ್ಟೋಸ್ ಕಾರು ಬಿಡುಗಡೆಯಾಗಿದೆ. ಸೆಲ್ಟೋಸ್ ಕಾರಿನ ಬೆಲೆ 9.69  ಲಕ್ಷ ರೂಪಾಯಿಯಿಂದ ಆರಂಭವಾಗುತ್ತಿದ್ದು, ಗರಿಷ್ಠ ಬೆಲೆ 15.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಅತ್ಯಾಧುನಿಕ ಫೀಚರ್ಸ್, ಹಾಗೂ ತಂತ್ರಜ್ಞಾನ ಹೊಂದಿರುವ ಕಿಯಾ ಸೆಪ್ಟೆಂಬರ್‌ನಲ್ಲಿ SUV ಸೆಗ್ಮೆಂಟ್‌ಗಳ ಎಲ್ಲಾ ದಾಖಲೆ ಅಳಿಸಿ ಹಾಕಲು ಸಜ್ಜಾಗಿದೆ. 

click me!