ಮಾರುತಿ ಸುಜುಕಿ ಕಾರು ಮಾರಾಟಕ್ಕೆ ಚೇತರಿಕೆ ನೀಡಲು ಹೊಸ ಆಫರ್ ನೀಡಿದೆ. ಅಕ್ಟೋಬರ್ ತಿಂಗಳ ಡಿಸ್ಕೌಂಟ್ ಘೋಷಿಸುವ ಮೂಲಕ ಖರೀದಿದಾರರನ್ನು ಸೆಳೆಯುವ ಪ್ರಯತ್ನ ಮಾಡಿದೆ.
ನವದೆಹಲಿ(ಅ.02): ಮಾರುತಿ ಸುಜುಕಿ ಸತತ 7ನೇ ತಿಂಗಳು ಮಾರಾಟದಲ್ಲಿ ಕುಸಿತ ಕಂಡಿದೆ. ಕಳೆದ ತಿಂಗಳು ಡಿಸ್ಕೌಂಟ್ ಆಫರ್ ನೀಡಿದ್ದ ಮಾರುತಿ ಇದೀಗ ಅಕ್ಟೋಬರ್ ತಿಂಗಳಿಗೂ ವಿಸ್ತರಿಸಿದೆ. ಮಾರುತಿ ಸ್ವಿಫ್ಟ್, ಡಿಸೈರ್, ಬ್ರೆಜ್ಜಾ, ಆಲ್ಟೋ, ವ್ಯಾಗನ್R ಕಾರುಗಳ ಮೇಲೆ ರಿಯಾಯಿತಿ ಘೋಷಿಸಿದೆ.
ಇದನ್ನೂ ಓದಿ: ಮಾರುತಿ ಸುಜುಕಿ s presso ಕಾರು ಲಾಂಚ್; ಬೆಲೆ ಕೇವಲ 3.69 ಲಕ್ಷ!
undefined
ಅಕ್ಟೋಬರ್‌ನಲ್ಲಿ ಸಾಲು ಸಾಲು ಹಬ್ಬಗಳಿರುವುದರಿಂದ ಮಾರುತಿ ಸುಜುಕಿ ಗ್ರಾಹಕರನ್ನು ಸೆಳೆಯಲು ಡಿಸ್ಕೌಂಟ್ ನೀಡುತ್ತಿದೆ. ಮಾರುತಿ ಅಲ್ಟೋ 800 ಕಾರಿನ ಮೇಲೆ ಗರಿಷ್ಠ 65,000 ರೂಪಾಯಿ ಹಾಗೂ ಅಲ್ಟೋ ಕೆ10 ಕಾರಿಗೆ 60,000 ರೂಪಾಯಿ ಡಿಸ್ಕೌಂಟ್ ಘೋಷಿಸಿದೆ.
ಇದನ್ನೂ ಓದಿ: ವಾಹನ ಮಾರಾಟ ಚೇತರಿಕೆಗೆ 50% ರೋಡ್ ಟ್ಯಾಕ್ಸ್ ಕಡಿತ; ದಿಟ್ಟ ಹೆಜ್ಜೆ ಇಟ್ಟ ಸರ್ಕಾರ!
ಮಾರುತಿ ಬ್ರೆಜ್ಜಾ ಕಾರಿಗೆ 40,000 ರೂ ಡಿಸ್ಕೌಂಟ್, 20,000 ರೂ ಎಕ್ಸ್‌ಚೇಂಜ್ ಹಾಗೂ 7 ಸಾವಿರ ರೂಪಾಯಿ ಕಾರ್ಪೋರೇಟ್ ಬೆನಿಫಿಟ್ ನೀಡಿದೆ. ಈ ಮೂಲಕ ಬ್ರೆಜ್ಜಾ ಕಾರಿಗೆ ಒಟ್ಟು 67,000 ರೂಪಾಯಿ ಆಫರ್ ಘೋಷಿಸಿದೆ. ಮಾರುತಿ ಸೆಲೆರಿಯೋ ಕಾರಿಗೆ ಡಿಸ್ಕೌಂಟ್, ಎಕ್ಸ್‌ಜೇಂಚ್ ಹಾಗೂ ಕಾರ್ಪೋರೇಟ್ ಬೆನಿಫಿಟ್ ಸೇರಿ ಒಟ್ಟು 60,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಿದೆ.
ಇದನ್ನೂ ಓದಿ: 40 ಸಾವಿರ ವ್ಯಾಗನ್R ಕಾರು ಹಿಂಪಡೆದ ಮಾರುತಿ!
ಮಾರುತಿ ಡಿಸೈರ್ ಡೀಸೆಲ್ ಕಾರಿಗೆ 55,000 ರೂಪಾಯಿ ಹಾಗೂ ಪೆಟ್ರೋಲ್ ಕಾರಿಗೆ ಒಟ್ಟು 65,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಿದೆ. ಮಾರುತಿ ಇಕೋ ಕಾರಿಗೆ ಒಟ್ಟು 45,000 ರೂಪಾಯಿ ಡಿಸ್ಕೌಂಟ್, ಸ್ವಿಫ್ಟ್ ಡೀಸೆಲ್ ಕಾರಿಗೆ ಒಟ್ಟು 55,000 ರೂಪಾಯಿ ಡಿಸ್ಕೌಂಟ್ ಹಾಗೂ ಪೆಟ್ರೋಲ್ ಕಾರಿಗೆ ಒಟ್ಟು 60,000 ರೂಪಾಯಿ ಡಿಸ್ಕೌಂಟ್ ನೀಡಿದೆ.
ಸೂಚನೆ: ಮಾರುತಿ ಸುಜುಕಿ ಡೀಲರ್ಸ್ ಡಿಸ್ಕೌಂಟ್ ಆಫರ್ ಘೋಷಿಸಿದ್ದಾರೆ. ಡೀಲರ್‌ಗಳಿಂದ ಡೀಲರ್‌ಗೆ ಹಾಗೂ ಸ್ಟಾಕ್ ಮೇಲೆ ಡಿಸ್ಕೌಂಟ್‌ನಲ್ಲಿ ವ್ಯತ್ಯಾಸವಾಗಲಿದೆ. ಹತ್ತಿರದ ಡೀಲರ್ ಬಳಿ ಡಿಸ್ಕೌಂಟ್ ಕುರಿತು ವಿಚಾರಿಸಿ.