ಗೋವಾದಲ್ಲಿ ಹೊಸ ವಾಹನ ಖರೀದಿಗೆ ಶೇ.50 ತೆರಿಗೆ ಕಡಿತ| ವಾಹನೋದ್ಯಮಕ್ಕೆ ಚೇತರಿಕೆ ನೀಡಲು ಕ್ರಮ| ರಸ್ತೆ ತೆರಿಗೆ ಕಡಿತ 3 ತಿಂಗಳು ಕಾಲ ಚಾಲ್ತಿಯಲ್ಲಿ
ಪಣಜಿ[ಅ.02]: ದೇಶಾದ್ಯಂತ ವಾಹನೋದ್ಯಮ ಭಾರೀ ಕುಸಿತ ಕಂಡಿರುವ ಬೆನ್ನಲ್ಲೇ, ಈ ಉದ್ಯಮಕ್ಕೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಖರೀದಿಸುವ ಹೊಸ ವಾಹನಗಳಿಗೆ ಶೇ.50ರಷ್ಟುರಸ್ತೆ ತೆರಿಗೆ ಕಡಿತಗೊಳಿಸಲು ಗೋವಾ ಸರ್ಕಾರ ನಿರ್ಧರಿಸಿದೆ.
ಮಾರುತಿ ಸುಜುಕಿ s presso ಕಾರು ಲಾಂಚ್; ಬೆಲೆ ಕೇವಲ 3.69 ಲಕ್ಷ!
ಈ ಬಗ್ಗೆ ಮಾಹಿತಿ ನೀಡಿರುವ ಗೋವಾ ಸಾರಿಗೆ ಸಚಿವ ಮೌವಿನ್ ಗುಡಿನ್ಹೋ, ಮಂದಗತಿಯಲ್ಲಿರುವ ವಾಹನ ಉದ್ಯಮ ಉತ್ತೇಜನಕ್ಕೆ ಗೋವಾ ಸರ್ಕಾರ ಮಂದಾಗಿದೆ. ಅಕ್ಟೋಬರ್‌ನಿಂದ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಖರೀದಿಸಿದ ವಾಹನಗಳಿಗೆ ಶೇ.50ರಷ್ಟು ರಸ್ತೆ ತೆರಿಗೆ ಕಡಿತಗೊಳಿಸಲಾಗುವುದು. ದಸರಾ ಮತ್ತು ದೀಪಾವಳಿ ಹಬ್ಬದ ನಿಮಿತ್ತ ವಾಹನ ಖರೀದಿ ಹೆಚ್ಚಾಗಲಿದೆ ಎಂಬ ನಿರೀಕ್ಷೆ ಇದೆ. ಇದು ಮಂದಗತಿಯ ವಾಹನೋದ್ಯಮಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಮಂಗಳೂರು: ನಡೆದುಕೊಂಡು ಹೋಗ್ತಿದ್ದ ವ್ಯಕ್ತಿಗೆ ದಂಡ..!
ಪ್ರಸಕ್ತ ಆರ್ಥಿಕ ವರ್ಷದ ಮೊದಲ 4 ತಿಂಗಳಲ್ಲಿ ಗೋವಾದಲ್ಲಿ ಶೇ.15 ರಿಂದ ಶೇ.17 ರಷ್ಟುವಾಹನ ಖರೀದಿ ಕುಸಿತ ಕಂಡಿದೆ. ಏಪ್ರಿಲ್‌ನಿಂದ ಜೂನ್ ಮಾಸದಲ್ಲಿ 19480 ವಾಹನಗಳು ಮಾತ್ರ ನೋಂದಣಿ ಮಾಡಲಾಗಿದೆ. ಇದು ವಾಹನ ಖರೀದಿಯಲ್ಲಿ ಭಾರೀ ಇಳಿಕೆ ಕಂಡಿರುವುದು ಗೋಚರವಾಗುತ್ತದೆ.