2019ರಿಂದ ಕಾರು ಖರೀದಿ ಕಷ್ಟ-ಈಗಲೇ ಮುಗಿಸಿಕೊಳ್ಳಿ ವ್ಯವಹಾರ!

Published : Dec 10, 2018, 03:18 PM IST
2019ರಿಂದ ಕಾರು ಖರೀದಿ ಕಷ್ಟ-ಈಗಲೇ ಮುಗಿಸಿಕೊಳ್ಳಿ ವ್ಯವಹಾರ!

ಸಾರಾಂಶ

ಕಾರು ಖರೀದಿಸಲು ಮುಂದಾಗಿದ್ದರೆ ಇದೇ ತಿಂಗಳಲ್ಲಿ ಎಲ್ಲಾ ವ್ಯವಹಾರ ಮುಗಿಸಿಕೊಂಡರೆ ಉತ್ತಮ. ಮುಂದಿನ ತಿಂಗಳು ಅಂದರೆ ಹೊಸ ವರ್ಷದಿಂದ ಕಾರು ಖರೀದಿ ಸುಲಭವಲ್ಲ. ಅಷ್ಟಕ್ಕೂ ಮುಂದಿನ ವರ್ಷ ಗ್ರಾಹಕರಿಗೆ ಎದುರಾಗೋ ಸಮಸ್ಯೆ ಏನು? ಇಲ್ಲಿದೆ ವಿವರ.

ಬೆಂಗಳೂರು(ಡಿ.10): ಕಾರು ಖರೀದಿಸೋ ಪ್ಲಾನ್ ಇದ್ದರೆ ಡಿಸೆಂಬರ್ ಸೂಕ್ತ ಸಮಯ. ಸದ್ಯ ಬಹುತೇಕ ಕಾರುಗಳು ವರ್ಷಾಂತ್ಯದ ಆಫರ್ ಘೋಷಿಸಿದೆ. ಆದರೆ 2019ರಿಂದ ಕಾರು ಖರೀದಿ ಕಷ್ಟವಾಗಲಿದೆ. ಕಾರಣ ಮಾರುತಿ ಸುಜುಕಿ ಸೇರಿದಂತೆ ಹಲವು ಕಾರು ಕಂಪೆನಿಗಳು ಕಾರು ಬೆಲೆ ಹೆಚ್ಟಿಸುತ್ತಿದೆ.

ಇದನ್ನೂ ಓದಿ: ವಿಶ್ವ ರಸ್ತೆ ಅಪಘಾತ ವರದಿ ಬಿಡುಗಡೆ-ಭಾರತ ಪರಿಸ್ಥಿತಿ ಹೇಗಿದೆ?

ಬಿಡಿಭಾಗಗಳ ಆಮದು, ರೂಪಾಯಿ ಮೌಲ್ಯ ಕುಸಿತ ಸೇರಿದಂತೆ ಕಾರು ನಿರ್ಮಾಣದ ಬೆಲೆ ದುಬಾರಿಯಾಗಿದೆ. ಹೀಗಾಗಿ ಮಾರುತಿ ಸುಜುಕಿ ಎಲ್ಲಾ ಕಾರುಗಳ ಬೆಲೆ ಹೆಚ್ಚಳವಾಗುತ್ತಿದೆ. ಜನವರಿ 1, 2019ರಿಂದ ನೂತನ ಬೆಲೆ ಅನ್ವಯವಾಗಲಿದೆ ಎಂದು ಮಾರುತಿ ಸುಜುಕಿ ಹೇಳಿದೆ.

ಇದನ್ನೂ ಓದಿ: ಮೋದಿ ಸರ್ಕಾರದ ಹೊಸ ನೀತಿ- ಮೇಕ್ ಇನ್ ಇಂಡಿಯಾ ವಾಹನಕ್ಕೆ ರಾಜ ಮಾರ್ಗ!

BMW ಕಾರು ಕೂಡ ಶೇಕಡಾ 4 ರಷ್ಟು ಬೆಲೆ ಹೆಚ್ಚಳ ಮಾಡಲಿದೆ. ಫೋರ್ಡ್ ಇಂಡಿಯಾ 1.3% ನಷ್ಟು ಬೆಲೆ ಹೆಚ್ಚಳ ಮಾಡುತ್ತಿದೆ. ಟೊಯೊಟಾ ಕಾರುಗಳ ಬೆಲೆ ಶೇಕಡ 4 ರಷ್ಟು ಹೆಚ್ಚಾಗಲಿದೆ. ಇಸುಜು ಮೋಟಾರ್ಸ್ ಇಂಡಿಯಾ ಬರೋಬ್ಬರಿ 1 ಲಕ್ಷ ರೂಪಾಯಿ ಹೆಚ್ಚಳ ಮಾಡಲಿದೆ. ನೂತನ ಬೆಲೆ ಜನವರಿ 1, 2019ರಿಂದ ಜಾರಿಯಾಗಲಿದೆ.

ಹ್ಯುಂಡೈ, ಟಾಟಾ, ಹೊಂಡಾ ಸೇರಿದಂತೆ ಎಲ್ಲಾ ಕಂಪೆನಿಗಳು ಬೆಲೆ ಹೆಚ್ಚಿಸಲು ಮುಂದಾಗಿದೆ. ಶೀಘ್ರದಲ್ಲೇ ಅಧೀಕೃತ ಘೋಷಣೆ ಮಾಡಲಿದೆ. ಕಾರಿನ ಬೆಲೆ ಮಾತ್ರವಲ್ಲ, ಸರ್ವೀಸ್ ಸೇರಿದಂತೆ ಮೇಂಟೈನೆನ್ಸ್ ಕೂಡ ಹೆಚ್ಚಾಗಲಿದೆ. ಹೀಗಾಗಿ ಕಾರು ಖರೀದಿಸುವ ಮುನ್ನ ಸಾಕಷ್ಟು ಎಚ್ಚರ ವಹಿಸುವುದು ಅಗತ್ಯ.
 

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ