ವಿಶ್ವ ರಸ್ತೆ ಅಪಘಾತ ವರದಿ ಬಿಡುಗಡೆ-ಭಾರತ ಪರಿಸ್ಥಿತಿ ಹೇಗಿದೆ?

Published : Dec 09, 2018, 08:58 PM IST
ವಿಶ್ವ ರಸ್ತೆ ಅಪಘಾತ ವರದಿ ಬಿಡುಗಡೆ-ಭಾರತ ಪರಿಸ್ಥಿತಿ ಹೇಗಿದೆ?

ಸಾರಾಂಶ

ವಿಶ್ವ ಆರೋಗ್ಯ ಸಂಸ್ಥೆ ಇದೀಗ ರಸ್ತೆ ಅಪಘಾತದ ಕುರಿತ ವರದಿ ಬಿಡುಗಡೆ ಮಾಡಿದೆ. ಈ ವರದಿ  ಪ್ರಕಾರ ಭಾರತದ ಪರಿಸ್ಥಿತಿ ಹೇಗಿದೆ? ಇತರ ದೇಶಗಳಿಗಿಂತ ಭಾರತ ಅಪಘಾತ ತಡೆಗಟ್ಟಲು ಯಾವ ಕ್ರಮ ಕೈಗೊಂಡಿದೆ. ಇಲ್ಲಿದೆ ಹೆಚ್ಚಿನ ವಿವರ.  

ಜಿನಿವಾ(ಡಿ.9): ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ವೇಗದ ಪ್ರಯಾಣ, ಕೆಟ್ಟ ರಸ್ತೆಗಳಿಂದ ಅಪಘಾತ ಪ್ರಮಾಣ ಹೆಚ್ಚಾಗುತ್ತಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆ(WHO)ನೂತನ ವರದಿ ಬಿಡುಗಡೆ ಮಾಡಿದೆ. ಈ ವರದಿ ಅಂಕಿ ಅಂಶ ಭಾರತಕ್ಕೆ ಎಚ್ಚರಿಕೆಯೆ ಕರೆ ಗಂಟೆಯಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಪ್ರತಿ ದಿನ ಭಾರತದಲ್ಲಿ 821 ಮಂದಿ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದುತ್ತಿದ್ದಾರೆ. ಪ್ರತಿ ಗಂಟೆಗೆ 34 ಮಂದಿ ಅಪಘಾತದಲ್ಲಿ ಮರಣ ಹೊಂದಿದ್ದಾರೆ. ರಸ್ತೆ ಅಪಘಾತದಲ್ಲಿ ಮೃತಪಡುತ್ತಿರುವ ವಯಸ್ಸು ಹೆಚ್ಚಾಗಿ 5 ರಿಂದ 29 ವರ್ಷ ಎಂದು WHO ವರದಿ ನೀಡಿದೆ.

2017ರಲ್ಲಿ ಸುಮಾರು 1.46 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದು 2016ರಲ್ಲಿ 1.51 ಲಕ್ಷ ಮಂದಿ ಸಾವನ್ನಪ್ಪಿದ್ದರು. 2016ಕ್ಕೆ ಹೋಲಿಸಿದರೆ 2017ರಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿದೆ. ಆದರೆ ಇತರ ದೇಶಗಳಿಗೆ ಹೋಲಿಸಿದರೆ ಇದು ಹೆಚ್ಚೇ.

ಇದೇ ಕಾರಣಕ್ಕಾಗಿ ಸುಪ್ರೀಂ ಕೋರ್ಟ್ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ವಾಹನಗಳಿಗೆ ಕನಿಷ್ಠ ಮಟ್ಟದ ಸುರಕ್ಷತೆಗೆ ಆದ್ಯತೆ ನೀಡಲು ಸೂಚಿಸಿದೆ. ಇನ್ನು ಸರ್ಕಾರ ಕೂಡ ಅತ್ಯುತ್ತಮ ರಸ್ತೆ ಸೇರಿದಂತೆ ಇತರ ಸೌಲಭ್ಯಗಳನ್ನ ಮಾಡಬೇಕಿದೆ. ಇದರ ಜೊತೆಗೆ ಬಹು ಮುಖ್ಯವಾಗಿ ವಾಹನ ಬಳಕೆ ಮಾಡುವವರು ಎಚ್ಚರಿಕೆ ವಹಿಸಬೇಕಿದೆ. ಅತೀ ವೇಗದ ಪ್ರಯಾಣದಿಂದ ದೂರವಿರಬೇಕು.

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ