ಹೆಚ್ಚುವರಿ ಫೀಚರ್ಸ್, ಗರಿಷ್ಠ ಸುರಕ್ಷತೆ- ನೂತನ ಮಾರುತಿ ಅಲ್ಟೋ 800 ಫೇಸ್‌ಲಿಫ್ಟ್!

By Web Desk  |  First Published Apr 21, 2019, 7:53 PM IST

ನೂತನ ಮಾರುತಿ ಅಲ್ಟೋ ಕಾರು ಬಿಡುಗಡೆಯಾಗುತ್ತಿದೆ. ಈಗಾಗಲೇ ಡೀಲರ್ ಕೈಸೇರಿರುವ ಅಲ್ಟೋ 800 ಕಾರು ಹೆಚ್ಚುವರಿ ಫೀಚರ್ಸ್ ಹಾಗೂ ಆಕರ್ಷಕ ವಿನ್ಯಾಸ ಹೊಂದಿದೆ. ಇಲ್ಲಿದೆ ನೂತನ ಕಾರಿನ ಹೆಚ್ಚಿನ ವಿವರ.


ನವದೆಹಲಿ(ಏ.21): ಮಾರುತಿ ಸುಜುಕಿ ಅಲ್ಟೋ 800 ಕಾರು ಅಪ್‌ಡೇಟೆಡ್ ಕಾರು ಈಗಾಗಲೇ ಡೀಲರ್ ಕೈ ಸೇರಿದೆ. ಶೀಘ್ರದಲ್ಲೇ ಮಾರುತಿ ಸುಜುಕಿ ನೂತನ ಕಾರು ಬಿಡುಗಡೆ ಮಾಡಲಿದೆ. ವಿನ್ಯಾಸ ಹಾಗೂ ಹೆಚ್ಚುವರಿ ಫೀಚರ್ಸ್‌ನೊಂದಿಗೆ ನೂತನ ಅಲ್ಟೋ 800 ಕಾರು ಮತ್ತೋ ಮೋಡಿ ಮಾಡಲಿದೆ. 

ಇದನ್ನೂ ಓದಿ: ಬರುತ್ತಿದೆ ಕಡಿಮೆ ಬೆಲೆಯ ರೆನಾಲ್ಟ್ ಕ್ವಿಡ್ SUV ಕಾರು!

Latest Videos

undefined

ನೂತನ ಅಲ್ಟೋ 800 ಕಾರು ಡ್ರೈವರ್ ಸೈಡ್ ಏರ್‌ಬ್ಯಾಗ್ ಹಾಗೂ ಡ್ಯುಯೆಲ್ ಫ್ರಂಟ್ ಏರ್‌ಬ್ಯಾಗ್, ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), EBD( ಎಲೆಕ್ಟ್ರಾನಿಕ್ ಬ್ರೇಕ್‌ಪೋರ್ಸ್ ಡಿಸ್ಟ್ರಿಬ್ಯೂಶನ್, ರೇರ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ರಿಮೈಂಡರ್ ಸೇರಿದಂತೆ ಸುರಕ್ಷತಾ ಸೌಲಭ್ಯಗಳನ್ನು ಅಳವಡಿಸಲಾಗಿದೆ.

ಮುಂಭಾಗದ ಗ್ರಿಲ್ ಹಾಗೂ ಬಂಪರ್‌ನಲ್ಲಿ ಬದಲಾವಣೆ ಮಾಡಲಾಗಿದೆ. ಹೆಡ್‌ಲ್ಯಾಂಪ್ಸ್ ಸೇರಿದಂತೆ ವಿನ್ಯಾಸದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಡ್ಯುಯೆಲ್ ಟೋನ್ ಡ್ಯಾಶ್‌ಬೋರ್ಡ್, ಇನ್ಫೋಟೈನ್‌ಮೆಂಟ್ ಸಿಸ್ಟಮ್ ನೂತನ ಅಲ್ಟೋ 800 ಕಾರಿಗೆ ಆಕರ್ಷಕ ಲುಕ್ ನೀಡಿದೆ.

ಇದನ್ನೂ ಓದಿ: ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್ ಬಿಡುಗಡೆಗೆ- ಬೆಲೆ ಎಷ್ಟು?

ನೂತನ ಅಲ್ಟೋ 800 ಕಾರು 796 cc, 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು,  47 bhp ಪವರ್ ಹಾಗೂ  69 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಗೇರ್‌ಬಾಕ್ಸ್ ಹೊಂದಿದೆ.  ಸದ್ಯ ನೂತನ ಅಲ್ಟೋ ಕಾರಿನ ಬೆಲೆ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ  10,000  ರೂಪಾಯಿ ಹೆಚ್ಚಳವಾಗೋ ಸಾಧ್ಯತೆ ಇದೆ. ಸದ್ಯ ಮಾರುತಿ ಅಲ್ಟೋ ಕಾರಿನ ಬೆಲೆ 2.67  ಲಕ್ಷ ರೂಪಾಯಿ(ಏಕ್ಸ್ ಶೋ ರೂಂ).

click me!