ವರ್ಷದ ಕಾರು ಪ್ರಶಸ್ತಿ ಪ್ರಕಟಗೊಂಡಿದೆ. 2019ರ ಸಾಲಿನಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪಡೆದುಕೊಂಡ ಕಾರು ಯಾವುದು? ಇದಕ್ಕೆ ಪೈಪೋಟಿ ನೀಡಿದ ಕಾರು ಯಾವುದು? ಇಲ್ಲಿದೆ ವಿವರ.
ನವದೆಹಲಿ(ಏ.19): 2019ರ ಸಾಲಿನ ನಗರ ಕಾರು ಪ್ರಶಸ್ತಿ ಪ್ರಕಟಗೊಂಡಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಆಟೋ ಶೋನಲ್ಲಿ ಪ್ರಶಸ್ತಿ ಪ್ರಕಟಿಸಲಾಗಿದೆ. ಸುಜುಕಿ ಜಿಮ್ಮಿ ನಗರ ಕಾರು ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ ಸತತ 3ನೇ ವರ್ಷ ಮಾರುತಿ ಸುಜುಕಿ ವಾರ್ಷಿಕ ಪ್ರಶಸ್ತಿ ಪಡೆದ ಸಾಧನೆ ಮಾಡಿದೆ. ಫೈನಲ್ ಸುತ್ತಿನಲ್ಲಿ ಹ್ಯುಂಡೈ ಸ್ಯಾಂಟ್ರೋ ಹಾಗೂ ಕಿಯಾ ಮೋಟಾರ್ಸ್ ಕಾರು ಹಿಂದಿಕ್ಕಿದ ಸುಜುಕಿ ಜಿಮ್ಮಿ ಮೊದಲ ಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ: ಮಾರ್ಚ್‌ನಲ್ಲಿ ಮಾರುತಿಗೆ ಹೊಡೆತ- ಪ್ರಗತಿಯತ್ತ ಹೊಂಡಾ, ಮಹೀಂದ್ರ, ಟೊಯೊಟ!
undefined
ಕಾರಿನ ವಿನ್ಯಾಸದಲ್ಲೂ ಸುಜುಕಿ ಜಿಮ್ಮಿ ಮೊದಲ ಸ್ಥಾನ ಪಡೆದುಕೊಂಡಿದೆ. ಅಂತಾರಾಷ್ಟ್ರೀಯ ತೀರ್ಪುಗಾರರು, 24 ದೇಶದ 86 ಪತ್ರಕರ್ತರು ಹಾಗೂ ಆಟೋ ಕ್ಷೇತ್ರದ ದಿಗ್ಗಜರು ಮತದಾನದ ಮೂಲಕ ವರ್ಷದ ಕಾರು ಆಯ್ಕೆ ಮಾಡಲಾಗಿದೆ. ಸುಜುಕಿ ಜಿಮ್ಮಿ ಕಾರಿಗೆ ಭಾರಿ ಬೇಡಿಕೆ ಇದೆ.
ಇದನ್ನೂ ಓದಿ: HDK ರೇಂಜ್ ರೋವರ್ ಬದಲು ಲೆಕ್ಸಸ್ ಕಾರು ಬಳಕೆ- ಇಲ್ಲಿದೆ 3 ಕೋಟಿ ಕಾರಿನ ವಿಶೇಷತೆ?
ಭಾರತದಲ್ಲಿ ಈ ಕಾರು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದರ ಬೆಲೆ 10-12 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. 1.5 ಲೀಟರ್ ಎಂಜಿನ್ ಹೊಂದಿದ್ದು, 100 hp ಪವರ್ ಹಾಗೂ 130 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.