ಬರುತ್ತಿದೆ ಕಡಿಮೆ ಬೆಲೆಯ ರೆನಾಲ್ಟ್ ಕ್ವಿಡ್ SUV ಕಾರು!

Published : Apr 21, 2019, 04:23 PM ISTUpdated : Apr 21, 2019, 04:24 PM IST
ಬರುತ್ತಿದೆ ಕಡಿಮೆ ಬೆಲೆಯ ರೆನಾಲ್ಟ್ ಕ್ವಿಡ್ SUV ಕಾರು!

ಸಾರಾಂಶ

ರೆನಾಲ್ಟ್ ಕ್ವಿಡ್ HBC ಕಾರು ಬಿಡುಗಡೆಗೆ ಸಜ್ಜಾಗಿದೆ. ಕಡಿಮೆ ಬೆಲೆಯ ಸಬ್‌ಕಾಂಪಾಕ್ಟ್ SUV ಕಾರು ಇದೀಗ ಇತರ SUV ಕಾರುಗಳಿಗೆ ನಡುಕ ಹುಟ್ಟಿಸಿದೆ. ಈ ಕಾರಿನ ವಿಶೇಷತೆ ಏನು? ಇಲ್ಲಿದೆ.  

ನವದೆಹಲಿ(ಏ.21): ರೆನಾಲ್ಟ್ ಕ್ವಿಡ್ ಕಾರು ಭಾರತದಲ್ಲಿ ಹೊಸ ಸಂಚಲನ ಮೂಡಿಸಿದೆ. ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ಹಾಗೂ ಆಕರ್ಷಕ ಲುಕ್ ಮೂಲಕ ರೆನಾಲ್ಟ್ ಕ್ವಿಡ್, ಮಾರುತಿ ಅಲ್ಟೋ ಸೇರಿದಂತೆ ಇತರ ಸಣ್ಣ ಕಾರಿಗೆ ಬಹುದೊಡ್ಡ ಶಾಕ್ ನೀಡಿದೆ. ಮಾರಾಟದಲ್ಲಿ ರೆನಾಲ್ಟ್ ಕ್ವಿಡ್ ದಾಖಲೆ ಬೆರೆದಿದೆ. ಇದೀಗ ಮಾರುತಿ ಬ್ರಿಜಾ, ಫೋರ್ಡ್ ಇಕೋ ಸ್ಪೋರ್ಟ್ ರೀತಿಯ SUV ಕಾರು ಬಿಡುಗಡೆಗೆ ರೆನಾಲ್ಟ್ ಮುಂದಾಗಿದೆ.

ಇದನ್ನೂ ಓದಿ: ಆಕರ್ಷಕ ಲುಕ್, ಕಡಿಮೆ ಬೆಲೆ- ಹ್ಯುಂಡೈ ವೆನ್ಯು SUV ಕಾರು ಅನಾವರಣ!

ರೆನಾಲ್ಟ್ ಕ್ವಿಡ್ HBC ಅನ್ನೋ SUV ಕಾರು ಶೀಘ್ರದಲ್ಲೇ ಭಾರತ ಪ್ರವೇಶಿಸಲಿದೆ. ಕ್ವಿಡ್ ರೀತಿಯಲ್ಲೇ ಕಡಿಮೆ ಬೆಲೆ ಇದರ ವಿಶೇಷತೆ. ಆಕರ್ಷಕ ಲುಕ್ ಹಾಗೂ ಗರಿಷ್ಠ ಮೈಲೇಜ್ ಕೂಡ ನೀಡಲಿದೆ ಎಂದು ಕಂಪನಿ ಹೇಳಿದೆ. ಈ ಮೂಲಕ ಮಾರುತಿ ಬ್ರೆಜಾ. ಫೋರ್ಡ್ ಇಕೋಸ್ಪೋರ್ಟ್, ಟಾಟಾ ನೆಕ್ಸಾನ್, ಮಹೀಂದ್ರ XUV300, ನೂತನ ಹೊಂಡಾ ವೆನ್ಯು ಸೇರಿದಂತೆ ಸಬ್ ಕಾಂಪಾಕ್ಟ್ ಕಾರುಗಳಿಗೆ ತೀವ್ರ ಸ್ಪರ್ಧೆ ನೀಡಲಿದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ಮನೆ ಸೇರಿತು 4 ಕೋಟಿ ರೂಪಾಯಿ ಕಾರು!

2020ರಲ್ಲಿ ನೂತನ ರೆನಾಲ್ಟ್ ಕ್ವಿಡ್ HBC ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಕಾರಿನ ಬೆಲೆ, ಮಾರುತಿ ಬ್ರೆಜಾ ಸೇರಿದಂತೆ ಇತರ SUV ಕಾರುಗಳಿಗಿಂತ ಕಡಿಮೆ ಇರಲಿದೆ. 2021ರಲ್ಲಿ ಟೊಯೊಟಾ ಇನೋವಾ ಪ್ರತಿಸರ್ಧಿ ಕಾರು ರೆನಾಲ್ಟ್ ಟ್ರೈಬರ್ ಕಾರು ಬಿಡುಗಡೆಯಾಗಲಿದೆ. ಈ ಮೂಲಕ ಸಣ್ಣ ಕಾರಿನಿಂದ ಹಿಡಿದು, SUV, MPV ಕಾರುಗಳಿಗೆ ತೀವ್ರ ಸ್ಪರ್ಧೆ ನೀಡಲಿದೆ. 

PREV
click me!

Recommended Stories

ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?
Virat Kohli to KL Rahul: ವಿರಾಟ್ ಕೊಹ್ಲಿ to ಕೆಎಲ್ ರಾಹುಲ್, ಭಾರತೀಯ ಕ್ರಿಕೆಟಿಗರಲ್ಲಿದೆ ಅತೀ ದುಬಾರಿ ಕಾರು