ಟೊಯೊಟಾ ಇನೋವಾ ಕಾರು ಭಾರತದ ಜನಪ್ರಿಯ MPV ಕಾರು. ಮಾರಾಟದಲ್ಲೂ ಇನೋವಾ ಕಾರು ಮುಂಚೂಣಿಯಲ್ಲಿತ್ತು. ಆದರೆ ಹೊಸ ವಿನ್ಯಾಸ, ಹೆಚ್ಚುವರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿರುವ ಮಾರುತಿ ಎರ್ಟಿಗಾ ಕಾರು ಇದೀಗ ಎಲ್ಲಾ ದಾಖಲೆ ಪುಡಿ ಮಾಡಿದೆ.
ನವದೆಹಲಿ(ಜು.27): ಎರಡನೇ ಜನರೇಶನ್ ಮಾರುತಿ ಸುಜುಕಿ ಎರ್ಟಿಗಾ ಕಾರು ಇದೀಗ ಹೊಸ ದಾಖಲೆ ಬರೆದಿದೆ. ಭಾರತದಲ್ಲಿ ಜನಪ್ರಿಯವಾಗಿರುವ ಟೊಯೊಟಾ ಇನೋವಾ ಕಾರು ಹಿಂದಿಕ್ಕಿರುವ ಮಾರುತಿ ಎರ್ಟಿಗಾ ದೇಶದ ಉತ್ತಮ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೂನ್ ತಿಂಗಳಲ್ಲಿ ಎರ್ಟಿಗಾ ಕಾರು MPV ವಿಭಾಗದಲ್ಲಿ ಗರಿಷ್ಠ ಮಾರಾಟವಾದ ದಾಖಲೆ ಬರೆದಿದೆ.
ಇದನ್ನೂ ಓದಿ: ವಾಹನ ರಿಜಿಸ್ಟ್ರೇಶನ್ ಶುಲ್ಕ ಏರಿಕೆ; ಕಾರು, ಬೈಕ್ ಈಗ ದುಬಾರಿ!
undefined
ಜೂನ್ 2109ರಲ್ಲಿ ಎರ್ಟಿಗಾ ಕಾರು 7567 ಕಾರುಗಳು ಮಾರಾಟವಾಗಿದೆ. 2018ರ ಜೂನ್‌ತಿಂಗಳಲ್ಲಿ ಎರ್ಟಿಗಾ 4311 ಕಾರು ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಮಾರುಟಿ ಎರ್ಟಿಗಾ ಕಾರು ಮಾರಾಟದಲ್ಲಿ ಶೇಕಡಾ 76 ರಷ್ಟು ಏರಿಕೆ ಕಂಡಿದೆ. ಜೂನ್ 2019ರಲ್ಲಿ ಟೊಯೊಟೊ ಇನೋವಾ 4814 ಕಾರುಗಳು ಮಾರಾಟವಾಗಿದೆ. ಈ ಮೂಲಕ ಎರ್ಟಿಗಾ ಕಾರಿಗೆ ಪೈಪೋಟಿ ನೀಡುವಲ್ಲಿ ವಿಫಲವಾಗಿದೆ.
ಇದನ್ನೂ ಓದಿ: ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಕಾರು!
2018ರ ಜೂನ್ ತಿಂಗಳಲ್ಲಿ ಇನೋವಾ 6426 ಕಾರು ಮಾರಾಟವಾಗಿದೆ. ಇದೀಗ ಈ ವರ್ಷ ಮಾರಾಟದಲ್ಲಿ 25% ರಷ್ಟು ಕುಸಿತ ಕಂಡಿದೆ. ನೂತನ ಎರ್ಟಿಗಾ ಕಾರು ಹೊಸ ವಿನ್ಯಾಸ, ಹೆಚ್ಚುವರಿ ಫೀಚರ್ಸ್ ಸೇರಿದಂತೆ ಹಲವು ಬದಲಾವಣೆ ಮಾಡಿ ಬಿಡುಗಡೆಯಾಗಿತ್ತು.