ಪೀಕ್ ಟೈಮ್‌ನಲ್ಲಿ ಬೆಲೆ ಹೆಚ್ಚಳವಿಲ್ಲ; ಪ್ರಯಾಣಿಕರಿಗೆ ಒಲಾ ಕೊಡುಗೆ!

By Web Desk  |  First Published Nov 3, 2019, 5:48 PM IST

ಒಲಾ ಕ್ಯಾಬ್ ಮೂಲಕ ಪೀಕ್ ಟೈಮ್‌ನಲ್ಲಿ ಪ್ರಯಾಣ ಮಾಡಿದರೆ ಹೆಚ್ಚುವರಿ ಶುಲ್ಕ ನೀಡಬೇಕು. ಆದರೆ ಇದೀಗ ಪೀಕ್ ಟೈಮ್ ದರ ಕಡಿತಕ್ಕೆ ಒಲಾ ಮುಂದಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ. 


ನವದೆಹಲಿ(ನ.03): ನಗರದಲ್ಲಿ  ಒಲಾ ಕ್ಯಾಬ್, ಉಬರ್ ಸೇರಿದಂತೆ ಆ್ಯಪ್ ಆಧಾರಿತ ಟ್ಯಾಕ್ಸಿಗಳಿಗೆ ಭಾರಿ ಬೇಡಿಕೆ. ಬೆಳಗಿನ ಕಚೇರಿ ಸಮಯ, ಸಂಜೆ ಮನೆಗೆ ಹಿಂದಿರುವ ಸಮಯದಲ್ಲಿ ಹೆಚ್ಚುವರಿ ಶುಲ್ಕ ವಿಧಿಸುತ್ತದೆ. ಪೀಕ್ ಟೈಮ್ ಅನ್ನೋ ನೆಪದಲ್ಲಿ ಪ್ರಯಾಣಿಕರು ದುಪ್ಪಟ್ಟು ಹಣ ನೀಡಬೇಕು. ಇದೀಗ ಪೀಕ್ ಟೈಮ್ ಶುಲ್ಕ ಕಡಿತಗೊಳಿಸಲು ಒಲಾ ಕ್ಯಾಬ್ ನಿರ್ಧರಿಸಿದೆ. ಆದರೆ ಈ ಸೇವೆ ನವದಹೆಯಲ್ಲಿ ಮಾತ್ರ.

ಇದನ್ನೂ ಓದಿ: 10 ಕೋಟಿ ರೂ ಬೆಂಟ್ಲಿ ಮಸ್ಲೇನ್ ಕಾರು ಖರೀದಿಸಿದ ಬೆಂಗಳೂರಿಗ; ಭಾರತದಲ್ಲೇ ಮೊದಲಿಗ!

Tap to resize

Latest Videos

undefined

ದೆಹಲಿಯಲ್ಲಿ ನವೆಂಬರ್ 4 ರಿಂದ 15 ರವರೆಗೆ ಸಮ ಬೆಸ ಸಂಖ್ಯೆ ಯೋಜನೆ ಮತ್ತೆ ಜಾರಿಗೆ ಬರುತ್ತಿದೆ. ಈ ನಿಯಮದ ಪ್ರಕಾರ ನಂಬರ್ ಪ್ಲೇಟ್‌‌ನಲ್ಲಿ ಬೆಸ ಸಂಖ್ಯೆ ಇರುವ ವಾಹನಗಳು ಒಂದು ದಿನ, ಸಮ ಸಂಖ್ಯೆ ಇರೋ ವಾಹನಗಳು ಮತ್ತೊಂದು ದಿನ ರಸ್ತೆಗಳಿಯಬೇಕು. ಸಮ ಹಾಗೂ ಬೆಸ ಸಂಖ್ಯೆ ವಾಹನಗಳು ಒಂದೇ ದಿನ ರಸ್ತೆಗಿಳಿಯುವಂತಿಲ್ಲ. ಈ ನಿಯಮಕ್ಕೆ ದೆಹಲಿ ಒಲಾ ಕ್ಯಾಬ್ ಬೆಂಬಲ ಸೂಚಿಸಿದೆ. ಈ ನಿಯಮ ಜಾರಿ ಇರುವ ದಿನ ಪೀಕ್ ಟೈಮ್‌ನಲ್ಲಿ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ ಎಂದು ಒಲಾ ಹೇಳಿದೆ.

ಇದನ್ನೂ ಓದಿ: ಕಡಿತವಾಗಲಿದೆ ಒಲಾ ಕ್ಯಾಬ್ ದರ-10ಸಾವಿರ ಎಲೆಕ್ಟ್ರಿಕ್ ವಾಹನ ಸೇರ್ಪಡೆ!

ಜನರು ಖಾಸಗಿ ವಾಹನಗಳ ಬದಲು ಸಾರ್ವಜನಿಕ ವಾಹನ, ಟ್ಯಾಕ್ಸಿ ಬಳಕೆ ಮಾಡಿದರೆ ಮಾಲಿನ್ಯ ಕಡಿಮೆಯಾಗಲಿದೆ. ಹೀಗಾಗಿ ದೆಹಲಿ ಸರ್ಕಾರದ ಸಮ ಬೆಸ ಸಂಖ್ಯೆ ಯೋಜನೆಗೆ ಒಲಾ ಬೆಂಬಲ ನೀಡುತ್ತಿದೆ. ಇದಕ್ಕಾಗಿ ಓಲಾದ ಕ್ಯಾಬ್, ಆಟೋ, ಬೈಕ್ ಶೇರ್ ಸೇರಿದಂತೆ ಒಲಾ ಸೇವೆಗಳ ಪೀಕ್ ಟೈಮ್ ಹೆಚ್ಚುವರಿ ಶುಲ್ಕ ಕಡಿತ ಮಾಡಿದೆ ಎಂದು ಒಲಾ ಹೇಳಿದೆ. 

click me!