ಟಾಟಾ ನ್ಯಾನೋ ಬದಲು ಬರುತ್ತಿದೆ ಹೊಸ ಸಬ್-ಟಿಯಾಗೋ ಕಾರು!

By Web DeskFirst Published Mar 19, 2019, 7:14 PM IST
Highlights

ಮಾರುತಿ ಅಲ್ಟೋ ಕಾರಿಗೆ  ಪ್ರತಿಸ್ಪರ್ಧಿಯಾಗಿ ಟಾಟಾ ಮೋಟಾರ್ಸ್ ನೂತನ ಸಣ್ಣ ಕಾರು ಬಿಡುಗಡೆ ಮಾಡಲಿದೆ. ಟಾಟಾ ನ್ಯಾನೋ ಕಾರು ಈಗಾಗಲೇ ಓಟ ನಿಲ್ಲಿಸಿದೆ. ಹೀಗಾಗಿ ಈ ಕಾರಿಗೆ ಬದಲು ನೂತನ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ರೆಡಿಯಾಗಿದೆ.

ಮುಂಬೈ(ಮಾ.19): ಭಾರತದ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಟಾಟಾ ಮೋಟಾರ್ಸ್ ಇದೀಗ ಮತ್ತೊಂದು ಹೊಸ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಮಾರುತಿ ಆಲ್ಟೋ ಕಾರಿಗೆ ಪ್ರತಿಸ್ಪರ್ಧಿ, ಟಾಟಾ ನ್ಯಾನೋ ಕಾರಿನ ಬದಲು ನೂತನ ಸಬ್ ಟಿಯಾಗೋ ಕಾರು ಬಿಡುಗಡೆ ಮಾಡಲು ಟಾಟಾ ಮುಂದಾಗಿದೆ.

ಇದನ್ನೂ ಓದಿ: ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿ- ಬರುತ್ತಿದೆ ಟೊಯೊಟಾ SUV ಕಾರು!

ಸಣ್ಣ ಕಾರಿನಲ್ಲಿ ಟಾಟಾದ ಟಿಯಾಗೋ ಭಾರತದಲ್ಲಿ ಜನರನ್ನು ಮೋಡಿ ಮಾಡಿದೆ. ಇದೀಗ ಸಬ್ ಟಿಯಾಗೋ ಸಣ್ಣ ಕಾರು(ಅಲ್ಟೋ ಪ್ರತಿಸ್ಪರ್ಧಿ) ಬಿಡುಗಡೆಯಾಗಲಿದೆ. ನೂತನ ಕಾರು ಕೂಡ 5 ಸ್ಟಾರ್ ಸೇಫ್ಟಿ ಇರಲಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ. ಇಷ್ಟೇ ಅಲ್ಲ ಅತ್ಯಾಕರ್ಷಕ ಲುಕ್ ಹಾಗೂ ಕಡಿಮೆ ಬೆಲೆ ಇರಲಿದೆ ಎಂದಿದೆ.

ಇದನ್ನೂ ಓದಿ: ನೂತನ ರೆನಾಲ್ಟ್ ಕ್ವಿಡ್ RxL-ಕಾರಿನಲ್ಲಿದೆ ABS,ಏರ್‌ಬ್ಯಾಗ್ ಸುರಕ್ಷತೆ!

ನೂತನ ಕಾರಿನ ಡೂರ್ ಕೂಡ ವಿದೇಶಿ ಕಾರುಗಳಂತೆ ವಿನ್ಯಾಸ ಮಾಡಲಾಗಿದೆ.  ವಿಶೇಷ ಅಂದರೆ ಈ ಕಾರು ಎಲೆಕ್ಟ್ರಿಕ್ ಕಾರು. ನೂತನ ಎಲೆಕ್ಟ್ರಿಕ್ ಸಣ್ಣ ಕಾರಿನ ಮೂಲಕ ಮಾರುತಿ ಅಲ್ಟೋ ಕಾರಿಗೆ ಪೈಪೋಟಿ ನೀಡಲು ರೆಡಿಯಾಗಿದೆ. ಇಷ್ಟೇ ಅಲ್ಲ, ಅತ್ಯಾಧುನಿಕ ತಂತ್ರಜ್ಞಾನ ಕೂಡ ಈ ಕಾರಿನಲ್ಲಿರಲಿದೆ. 

click me!