ಎಲ್ಲಾ ಮಹಿಳೆಯರಿಗೆ ಹೆಲ್ಮೆಟ್ ಕಡ್ಡಾಯ-ಧರ್ಮಗಳಿಗೆ ವಿನಾಯ್ತಿ ಇಲ್ಲ!

By Web Desk  |  First Published Oct 20, 2018, 3:59 PM IST

ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಖಡ್ಡಾಯ ನಿಯಮ ಜಾರಿಯಲ್ಲಿದೆ. ಆದರೆ ಕೆಲೆವೆಡೆ ಮಹಿಳೆಯರಿಗೆ ವಿನಾಯಿತಿ ನೀಡಲಾಗಿದೆ. ಇದೀಗ ಇದರ ವಿರುದ್ದ ಅಪಸ್ವರ ಕೇಳಬಂದಿದೆ.


ಚಂಡಿಘಡ(ಅ.20): ಧರ್ಮ, ಜಾತಿ ಆಧಾರದ ಮೇಲೆ ಮಹಿಳೆಯರಿಗೆ ಹೆಲ್ಮೆಟ್ ಧರಿಸುವದರಿಂದ ವಿನಾಯ್ತಿ ನೀಡುವುದು ಸರಿಯಲ್ಲ. ಹೀಗಾಗಿ ಎಲ್ಲಾ ಮಹಿಳೆಯರಿಗೆ ಹೆಲ್ಮೆಟ್ ಖಡ್ಡಾಯಗೊಳಿಸಬೇಕು ಎಂದು ಚಂಡಿಘಡದ ಹಿರಿಯ ನಾಗರೀಕರ ಸೆಕೆಂಡ್ ಇನ್ನಿಂಗ್ಸ್ ಅಸೋಸಿಯೇಶನ್ ಆಗ್ರಹಿಸಿದೆ.

ದ್ವಿಚಕ್ರ ವಾಹನ ಪ್ರಯಾಣದ ವೇಳೆ  ಚಂಡಿಘಡದಲ್ಲಿ ಸಿಖ್ ಮಹಿಳೆಯರಿಗೆ ಹೆಲ್ಮೆಟ್ ಖಡ್ಡಾಯದಿಂದ ವಿನಾಯಿತಿ ನೀಡಲಾಗಿದೆ. 1993ರ ದೆಹಲಿ ಮೋಟಾರ್ ಆಕ್ಟ್ ಪ್ರಕಾರ, ಸಿಖ್ ಮಹಿಳೆಯರಿಗೆ ದ್ವಿಚಕ್ರ ವಾಹನ ರೈಡ್ ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್‌ನಿಂದ ವಿನಾಯಿತಿ ನೀಡಲಾಗಿತ್ತು. ಆದರೆ 2014ರಲ್ಲಿ ಈ ನಿಯಮವನ್ನ ತಿದ್ದುಪಡಿ ಮಾಡಿದ್ದರೂ, ಚಂಡಿಘಟದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Latest Videos

ಈ ನಿಯಮದ ಕುರಿತು ಹರಿಯಾಣ ಹೈಕೋರ್ಟ್ ಗರಂ ಆಗಿತ್ತು. ಇದರ ಬೆನ್ನಲ್ಲೇ, ಇದೀಗ ಹಿರಿಯ ನಾಗರೀಕರ ಘಟಕ ಕೂಡ ಎಲ್ಲಾ ಮಹಿಳೆಯರಿಗೆ ಹೆಲ್ಮೆಟ್ ಖಡ್ಡಾಯಗೊಳಿಸಲು ಆಗ್ರಹಿಸಿದೆ. ಇದರಲ್ಲಿ ಧರ್ಮ ತರುವ ಅಗತ್ಯವಿಲ್ಲ ಎಂದು ಹೇಳಿದೆ

click me!