ಶೀಘ್ರದಲ್ಲೇ ಮಹೀಂದ್ರ KUV100 ಎಲೆಕ್ಟ್ರಿಕ್ ಕಾರು ಬಿಡುಗಡೆ-ಬೆಲೆ ಎಷ್ಟು?

Published : Nov 15, 2018, 09:52 PM IST
ಶೀಘ್ರದಲ್ಲೇ ಮಹೀಂದ್ರ KUV100 ಎಲೆಕ್ಟ್ರಿಕ್ ಕಾರು ಬಿಡುಗಡೆ-ಬೆಲೆ ಎಷ್ಟು?

ಸಾರಾಂಶ

ಮಹೀಂದ್ರ ಮೋಟಾರು ಕಂಪೆನಿ ಇದೀಗ ಮಹೀಂದ್ರ KUV100 ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮುಂದಾಗಿದೆ. ಈ ಮೂಲಕ ಮಾರುತಿ ಸುಜುಕಿ ವ್ಯಾಗನ್ಆರ್ ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ. ನೂತನ ಮಹೀಂದ್ರ KUV100 ಎಲೆಕ್ಟ್ರಿಕ್ ಕಾರಿನ ವಿಶೇಷತೆ, ಬೆಲೆ ಕುರಿತು ಮಾಹಿತಿ ಇಲ್ಲಿದೆ.  

ಮುಂಬೈ(ನ.15): ಮಹೀಂದ್ರ ಸಂಸ್ಥೆ ಶೀಘ್ರದಲ್ಲೇ ಮಹೀಂದ್ರ KUV100 ಎಲೆಕ್ಟ್ರಿಕ್ ಕಾರು  ಬಿಡುಗಡೆ ಮಾಡಲು  ಸಜ್ಜಾಗಿದೆ. 2018ರ ಆಟೋ ಎಕ್ಸ್ಪೋದಲ್ಲಿ ಪರಿಚಯಿಸಲಾದ ಈ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮಹೀಂದ್ರ ಎಲ್ಲಾ ತಯಾರಿ ಮಾಡಿಕೊಂಡಿದೆ.

ಮಹೀಂದ್ರ ಸ್ಟಾಂಡರ್ಸ್ KUV100 ಕಾರನ್ನೇ ಹೋಲುವ ನೂತನ  KUV100 ಎಲೆಕ್ಟ್ರಿಕ್ ಕಾರು ಕೆಲ ಬದಲಾವಣೆಗಳನ್ನ ಮಾಡಿದೆ. ಮುಂಭಾದ ಗ್ರಿಲ್‌ನಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ. ಹೆಡ್‌ಲ್ಯಾಂಪ್ಸ್  ಸೇರಿದಂತೆ ಹೊರ ವಿನ್ಯಾಸದಲ್ಲಿ ಎಲೆಕ್ಟ್ರಿಕ್ ಕಾರಿಗೆ ತಕ್ಕ ಚೇಂಜಸ್ ಮಾಡಲಾಗಿದೆ.

2019ರಲ್ಲಿ ನೂತನ ಮಹೀಂದ್ರ KUV100 ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ ಎಂದು ಮಹೀಂದ್ರ ವ್ಯವಸ್ಥಾಪಕ ನಿರ್ದೇಶಕ ಪವನ್ ಗೊಯೆಂಕಾ  ಹೇಳಿದ್ದಾರೆ. ಮಹೀಂದ್ರ KUV100 ಸ್ಟಾಂಡರ್ಡ್ ಕಾರಿನ ಬೆಲೆ 4.68 ಲಕ್ಷದಿಂದ  7.76 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಆದರೆ ನೂತನ ಮಹೀಂದ್ರ KUV100 ಎಲೆಕ್ಟ್ರಿಕ್ ಕಾರಿನ ಬೆಲೆ 8 ರಿಂದ 10ಲಕ್ಷ  ರೂಪಾಯಿ ಎಂದು ಅಂದಾಜಿಸಲಾಗಿದೆ.

PREV
click me!

Recommended Stories

ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?
Virat Kohli to KL Rahul: ವಿರಾಟ್ ಕೊಹ್ಲಿ to ಕೆಎಲ್ ರಾಹುಲ್, ಭಾರತೀಯ ಕ್ರಿಕೆಟಿಗರಲ್ಲಿದೆ ಅತೀ ದುಬಾರಿ ಕಾರು