ನೂತನ ಜಾವಾ ಮೋಟರ್‌ಬೈಕ್ ಬಿಡುಗಡೆಯಾಗಿದೆ. ಜಾವಾ ಬೈಕ್‌ಗೂ ಕರ್ನಾಟಕಕ್ಕೂ ವಿಶೇಷ ಸಂಬಂಧವಿದೆ. ಭಾರತದಲ್ಲಿ ಜಾವಾ ಬೈಕ್ ಹೊಸ ಅಧ್ಯಾಯ ಆರಂಭಿಸಲು ಕಾಣವಾಗಿದ್ದೇ ನಮ್ಮ ಕರ್ನಾಟಕ. ಅಷ್ಟಕ್ಕೂ ಜಾವಾ ಹಾಗೂ ಕರ್ನಾಟಕದ ಸಂಬಂಧವೇನು? ಇಲ್ಲಿಗೆ ವಿವರ,
ಮೈಸೂರು(ನ.15): ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಪೈಪೋಟಿ ನೀಡಬಲ್ಲ ಜಾವಾ ಮೋಟರ್ ಬೈಕ್ ಬಿಡುಗಡೆಯಾಗಿದೆ. ಜಾವಾ ಮೂರು ಮಾಡೆಲ್‌ಗಳಲ್ಲಿ ಬೈಕ್ ಬಿಡುಗಡೆ ಮಾಡಿದೆ. 1996ರಲ್ಲಿ ಅಂತ್ಯವಾಗಿದ್ದ ಜಾವಾ ಇದೀಗ 2018ರಲ್ಲಿ ಮತ್ತೆ ಬಿಡುಗಡೆಯಾಗೋ ಮೂಲಕ ಗತವೈಭವವನ್ನ ಮರು ಸೃಷ್ಟಿಸಿದೆ.
ಇದನ್ನೂ ಓದಿ: ಮತ್ತೆ ರಸ್ತೆಗಿಳಿದ ದಿಗ್ಗಜ-ಜಾವಾ ಮೋಟರ್ ಬೈಕ್ ಬಿಡುಗಡೆ!
undefined
ಜಾವಾ ಮೋಟರ್ ಬೈಕ್ ಹಾಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಜಾವಾ ಮೋಟರ್ ಬೈಕ್ ಭಾರತಕ್ಕೆ ಎಂಟ್ರಿ ಕೊಟ್ಟಿದ್ದು 1950ರಲ್ಲಿ. ಪ್ಯಾರಿಸ್‌ನ ಇಬ್ಬರು ಎಂಟ್ರಪ್ರೆನರ್ಸ್ ರಸ್ಟೋಮ್ ಹಾಗೂ ಫಾರುಖ್ ಇರಾನಿ, ಜಾವಾ ಬೈಕ್‌ಗಳನ್ನ ಆಮದು ಮಾಡಿಕೊಂಡು ಮಾರಾಟ ಮಾಡಲು ಆರಂಭಿಸಿದರು.
1961ರಲ್ಲಿ ಭಾರತದಲ್ಲಿ ಜಾವಾ ಮೊತ್ತ ಮೊದಲ ಫ್ಯಾಕ್ಟರಿ ಆರಂಭಿಸಿತು. ವಿಶೇಷ ಅಂದರೆ ಜಾವಾ ಕಂಪೆನಿಯ ಮೊದಲ ಫ್ಯಾಕ್ಟರಿ ಆರಂಭವಾಗಿದ್ದು ಮೈಸೂರನಲ್ಲಿ. ಮೈಸೂರು ಮಹರಾಜ ಜಯಚಾಮರಾಜ ಒಡೆಯರ್ ಜಾವಾ ಫ್ಯಾಕ್ಟರಿಯನ್ನ ಉದ್ಘಾಟನೆಗೊಳಿಸಿದ್ದರು.
25 ಏಕರೆ ಪ್ರದೇಶದಲ್ಲಿರು ಈ ಫ್ಯಾಕ್ಟರಿಯಲ್ಲಿ 250 ಟೈಪ್, 353/04 ಬೈಕ್‌ಗಳನ್ನ ತಯಾರಿಸಲಾಯಿತು. 1961ರಿಂದ 1971ರ ಅವಧಿಯಲ್ಲಿ ಜಾವಾ ಮೋಟರ್ ಬೈಕ್ ಭಾರತದಲ್ಲೇ ಹೆಚ್ಚು ಪ್ರಸಿದ್ದಿಯಾಯಿತು.
1971ರಲ್ಲಿ ಪ್ಯಾರಿಸ್ ಉದ್ಯಮಿಗಳ ಜಾವಾ ಜೊತೆಗಿನ ಒಪ್ಪಂದ ಅಂತ್ಯಗೊಂಡಿತು. ಹೀಗಾಗಿ ಪ್ಯಾರಿಸ್ ಎಂಟ್ರಪ್ರೆನರ್ಸ್ ರಸ್ಟೋಮ್ ಹಾಗೂ ಫಾರುಖ್ ಇರಾನಿ ಯೆಜೆಡಿ ಹೆಸರಿನಲ್ಲಿ ಬೈಕ್ ಹೊರತಂದರು. ಜಾವಾ ರೋಡ್‌ಕಿಂಗ್, ಕ್ಲಾಸಿಕ್, ಡಿಲಕ್ಸ್, CLII ಹಾಗೂ ಮೊನಾರ್ಕ್ ಬೈಕ್‌ಗಳನ್ನ ಬಿಡುಗಡೆ ಮಾಡಲಾಯಿತು.
1960ರಲ್ಲಿ ಮೈಸೂರು ಜಾವಾ ಬೈಕ್ ಫ್ಯಾಕ್ಟರಿಯಲ್ಲಿ 2000 ಮಂದಿ ಉದ್ಯೋಗದಲ್ಲಿದ್ದರು. ಇಲ್ಲಿಂದಲೇ ಇಡೀ ಭಾರತಕ್ಕೆ ಜಾವಾ ಬೈಕ್ ನಿರ್ಮಾಣವಾಗುತ್ತಿತ್ತು. ಪ್ರತಿ ವರ್ಷ 40,000 ಬೈಕ್ ನಿರ್ಮಾಣ ಮಾಡಲಾಗುತ್ತಿತ್ತು. ಜಾವಾ 250 ಹಾಗೂ ಜಾವಾ 50 ಜೆಟ್ ಎ ಸೀರಿಸ್ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ಬೈಕ್‌ಗಳು. ಆದರೆ 1996ರಲ್ಲಿ ಜಾವಾ ಮೋಟರ್ ಬೈಕ್ ನಿರ್ಮಾಣ ನಿಲ್ಲಿಸಿತು. ಇಷ್ಟೇ ಅಲ್ಲ ಮೈಸೂರು ಫ್ಯಾಕ್ಟರಿ ಕೂಡ ಮುಚ್ಚಲಾಯಿತು.