ಮಹೀಂದ್ರ ಬೊಲೆರೋ ಖರೀದಿಸುವ ಗ್ರಾಹಕರಿಗೆ ಮಾತ್ರ ಹಬ್ಬದ ಪ್ರಯುಕ್ತ ವಿಶೇಷ ಆಫರ್!

Published : Oct 11, 2020, 05:46 PM IST
ಮಹೀಂದ್ರ ಬೊಲೆರೋ ಖರೀದಿಸುವ ಗ್ರಾಹಕರಿಗೆ ಮಾತ್ರ ಹಬ್ಬದ ಪ್ರಯುಕ್ತ ವಿಶೇಷ ಆಫರ್!

ಸಾರಾಂಶ

ಹಬ್ಬದ ಪ್ರಯುಕ್ತ ಎಲ್ಲಾ ಆಟೋಮೊಬೈಲ್ ಕಂಪನಿಗಳು ಹಲವು ಆಫರ್ ಘೋಷಿಸುತ್ತಿದೆ. ಇತ್ತ ಮಹೀಂದ್ರ ಕೂಡ ಕ್ಯಾಶ್ ಡಿಸ್ಕೌಂಟ್, ಬೋನಸ್ ಹಾಗೂ ಎಕ್ಸ್‌ಚೇಂಜ್ ಆಫರ್ ಆಯ್ದ ಕಾರಿಗೆ ಘೋಷಿಸಿದೆ. ಇದೀಗ ಮಹೀಂದ್ರ ಬೊಲೆರೋ ಖರೀದಿಸುವ ಗ್ರಾಹಕರಿಗೆ ಮಾತ್ರ ಸ್ಪೆಷಲ್ ಆಫರ್ ಘೋಷಿಸಿದೆ.

ನವದೆಹಲಿ(ಅ.11): ಮಹೀಂದ್ರ ಕಂಪನಿ ಹಬ್ಬದ ಪ್ರಯುಕ್ತ ಮಹೀಂದ್ರ ಬೊಲೆರೊ ಖರೀದಿಸುವ ಗ್ರಾಹಕರಿಗೆ ವಿಶೇಷ ಆಫರ್ ಘೋಷಿಸಿದೆ. ಬೊಲೆರೊ ಖರೀದಿಸುವ ಗ್ರಾಹಕ ಹಾಗೂ ಆತನ ಕುಟುಂಬಕ್ಕೆ 1 ಲಕ್ಷ ರೂಪಾಯಿ ಕೊರೋನಾ ವಿಮೆ ಉಚಿತವಾಗಿ ನೀಡುವುದಾಗಿ ಮಹೀಂದ್ರ ಅಂಡ್ ಮಹೀಂದ್ರ ಘೋಷಿಸಿದೆ. 

ಬಿಡುಗಡೆಯಾದ ನಾಲ್ಕೇ ದಿನಕ್ಕೆ ದಾಖಲೆ ಬರೆದ ಮಹೀಂದ್ರ ಥಾರ್!.

ಮಹೀಂದ್ರ ಬೊಲೆರೊ ಖರೀದಿಸುವ ಗ್ರಾಹಕ, ಆತನ ಪತ್ನಿ ಹಾಗೂ ಗರಿಷ್ಠ ಇಬ್ಬರು ಮಕ್ಕಳಿಗೆ ಉಚಿತ ವಿಮೆ ನೀಡುವುದಾಗಿ ಮಹೀಂದ್ರ ಘೋಷಿಸಿದೆ. ಈ ಆಫರ್ ಆಕ್ಟೋಬರ್ 1 ರಿಂದ ನವೆಂಬರ್ 30ರ ವರೆಗೆ ಮಾತ್ರ ಇರಲಿದೆ. ಈ ಅವಧಿಯೊಳಗೆ ಬೊಲೆರೊ ಕಾರು ಖರೀದಿಸುವ ಗ್ರಾಹಕರಿಗೆ ಉಚಿತ ಕೊರೋನಾ ಇನ್ಶುರೆನ್ಸ್ ಸಿಗಲಿದೆ.

ರಾಷ್ಟ್ರಪತಿಗೆ ಮೊದಲ BS6 ಅಲ್ಟುರಾಸ್ G4 ಕಾರು ವಿತರಿಸಿದ ಮಹೀಂದ್ರ!

ಬೊಲೆರೊ ಎಲ್ಲಾ ರೇಂಜ್ ವಾಹನಕ್ಕೂ ಈ ವಿಮೆ ಸೌಲಭ್ಯ ಸಿಗಲಿದೆ. ಬೊಲೆರೋ suv ಜೀಪ್, ಬೊಲೆರೊ ಪಿಕ್ ಅಪ್ ಮ್ಯಾಕ್ಸಿ ಟ್ರಕ್, ಬೊಲೆರೊ ಸಿಟಿ ಪಿಕ್ ಅಪ್ ಹಾಗೂ ಬೊಲೆರೊ ಕ್ಯಾಂಪರ್ ವಾಹನಕ್ಕೆ ಉಚಿತ ವಿಮೆ ಸೌಲಭ್ಯ ಸಿಗಲಿದೆ. 1 ಲಕ್ಷ ರೂಪಾಯಿಯ ಕೊರೋನಾ ಉಚಿತ ವಿಮೆ ಅವದಿ ವಾಹನ ಖರೀದಿಸಿ ದಿನದಿಂದ 9.5 ತಿಂಗಳು ಇರಲಿದೆ.

ಉಚಿತ ವಿಮೆ ಸೌಲಭ್ಯವನ್ನು ಮಹೀಂದ್ರ ಬೊಲೆರೊ ವಾಹನ ಖರೀದಿಸುವ ಗ್ರಾಹಕರಿಗೆ ಮಾತ್ರ ನೀಡಲಾಗಿದೆ. ಕಾರಣ ಬೊಲೆರೊ ವಾಹನ ಮಾಲೀಕರು ಹಲವರನ್ನು ಭೇಟಿಯಾಗುತ್ತಾರೆ. ಸರಕು ಸಾಗಾಣೆ ಸೇರಿದಂತೆ ಹಲವು ಕಾರಣಗಳಿಂದ ಜನರ ಸಂಪರ್ಕಕ್ಕೆ ಬರುತ್ತಾರೆ. ಹೀಗಾಗಿ ಬೊಲೆರೊ ಗ್ರಾಹಕರಿಗೆ ಉಚಿತ ವಿಮೆ ನೀಡುತ್ತಿದ್ದೇವೆ ಎಂದು ಮಹೀಂದ್ರ ಹೇಳಿದೆ.

ಮಹೀಂದ್ರ XUV300 ಎಲೆಕ್ಟ್ರಿಕ್ ಕಾರಿನ ಮೈಲೇಜ್ ಬಹಿರಂಗ, ನೆಕ್ಸಾನ್ ಕಾರಿಗಿಂತ ಅಧಿಕ!

ಕೊರೋನಾ ಉಚಿತ ವಿಮೆಗಾಗಿ ಮಹೀಂದ್ರ ಅಂಡ್ ಮಹೀಂದ್ರ ಕಂಪನಿ ಒರಿಯೆಂಟಲ್ ವಿಮೆ ಜೊತೆ ಒಪ್ಪಂದ ಮಾಡಿಕೊಂಡಿದೆ. ಗ್ರಾಹಕರಿಗೆ ಒರಿಯೆಂಟಲ್ ವಿಮೆ ಸೌಲಭ್ಯವನ್ನು ಮಹೀಂದ್ರ ಉಚಿತವಾಗಿ ನೀಡಲಿದೆ.
 

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ