ಹೆಲ್ಮೆಟ್ ಹಾಕದೇ ಬೈಕ್, ಸ್ಕೂಟರ್ ಚಲಾಯಿಸುವವರನ್ನು ಪೊಲೀಸರು ಅಡ್ಡ ಹಾಕುಬಾರದು ಎಂದು ಮುಖ್ಯಮಂತ್ರಿ ಹೊಸ ಆದೇಶ ನೀಡಿದ್ದಾರೆ. ಹಾಗಾದರೆ ಸುಪ್ರೀಂ ಕೋರ್ಟ್ ನಿಯಮ ಪಾಲನೆ ಹೇಗೆ? ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಮಹಾರಾಷ್ಟ್ರ(ಜೂ.19): ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಯಲ್ಲಿದ್ದರೂ ಸರಿಯಾಗಿ ಪಾಲನೆ ಆಗುತ್ತಿಲ್ಲ. ಮಹಾರಾಷ್ಟ್ರದ ಪುಣೆಯಲ್ಲಿ ಹೆಲ್ಮೆಟ್ ಕಡ್ಡಾಯದ ವಿರುದ್ಧ ಹೋರಾಟವೇ ನಡೆಯುತ್ತಿದೆ. ಹಲವು ಶಾಸಕರೂ ಈ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಬಜಾಜ್ ಪ್ಲಾಟಿನಾ 100 KS ಬೈಕ್ ಬಿಡುಗಡೆ- ಬೆಲೆ ಎಷ್ಟು?
undefined
ಹೆಲ್ಮೆಟ್ ಇಲ್ಲದೇ ಪ್ರಯಾಣ ಮಾಡೋ ಬೈಕ್ ಸವಾರರನ್ನು ಅಡ್ಡ ಹಾಕಿ ಕಿರುಕುಳ ನೀಡಬೇಡಿ. ಬದಲಾಗಿ ಸವಾರರ ಮನೆಗೆ ಇ ಚಲನ್ ಕಳುಹಿಸಿ ದಂಡ ವಸೂಲಿ ಮಾಡಿ. ಯಾರೇ ಆದರೆ ಬಿಡಬೇಡಿ ಎಂದು ಫಡ್ನವಿಸ್ ಹೇಳಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಕ್ರಮಕೈಗೊಳ್ಳಿ. ಇದಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಸರ್ಕಾರ ನೀಡಲಿದೆ ಎಂದು ಫಡ್ನವಿಸ್ ಹೇಳಿದ್ದಾರೆ.
ಇದನ್ನೂ ಓದಿ: ಬೈಕ್-ಸ್ಕೂಟರ್ ಬದಲಾಯಿಸುತ್ತೀರಾ?- ಇಲ್ಲಿದೆ ಅತ್ಯುತ್ತಮ ಆಯ್ಕೆ!
ಸವಾರರನ್ನು ಅಡ್ಡ ಹಾಕುವು ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಅನ್ನೋ ಹಲವು ದೂರುಗಳ ಮುಖ್ಯಮಂತ್ರಿ ಕಚೇರಿಗೆ ಬಂದಿದೆ. ಹೀಗಾಗಿ ಪೊಲೀಸರು ದ್ವಿಚಕ್ರ ವಾಹನ ಸವಾರರನ್ನು ಅಡ್ಡ ಹಾಕಬೇಡಿ, ಡಿಜಿಟಲ್ ಚಲನ್ ಮೂಲಕ ದಂಡ ವಸೂಲಿ ಮಾಡಿ ಎಂದಿದ್ದಾರೆ. ದಂಡ ಕಟ್ಟದಿದ್ದರೆ ವಾಹನ ವಶಕ್ಕೆ ಪಡೆಯಿರಿ ಎಂದಿದ್ದಾರೆ.