ವಾಹನ ಚಾಲನಾ ಪರವಾನಿಗೆ ಪಡೆಯಲು ಕನಿಷ್ಠ ಶಿಕ್ಷಣ ಪಡೆದಿರಲೇಬೇಕೆಂಬ ನಿಯಮ ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧಾರ| ‘ಈ ಕ್ರಮದಿಂದ ಉದ್ಯೋಗ ಸೃಷ್ಟಿಯಾಗಲಿದೆ. ಅಲ್ಲದೆ, ಸರಕು ಸಾಗಣೆ ವಲಯದಲ್ಲಿ ಅಗತ್ಯವಿರುವ 22 ಲಕ್ಷ ಕೊರತೆ ಚಾಲಕರನ್ನು ಪೂರೈಸಲಿದೆ
ನವದೆಹಲಿ[ಜೂ.19]: ದೇಶದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಿಸುವ ನಿಟ್ಟಿನಲ್ಲಿ ವಾಹನ ಚಾಲನಾ ಪರವಾನಿಗೆ ಪಡೆಯಲು ಕನಿಷ್ಠ ಶಿಕ್ಷಣ ಪಡೆದಿರಲೇಬೇಕೆಂಬ ನಿಯಮ ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ರಸ್ತೆ ಸಾರಿಗೆ ಸಚಿವಾಲಯ ತಿಳಿಸಿದೆ.
ಪ್ರಸ್ತುತ ಇರುವ 1989ರ ಕೇಂದ್ರೀಯ ಮೋಟರ್ ವಾಹನ ನಿಯಮಗಳ ಪ್ರಕಾರ ವಾಹನ ಚಾಲನಾ ಪರವಾನಗಿ ಹೊಂದಬೇಕೆಂಬ ಆಕಾಂಕ್ಷಿಗಳು ಕನಿಷ್ಠ 8ನೇ ತರಗತಿ ಪೂರೈಸಿರಬೇಕು ಎಂಬ ನಿಯಮವಿದೆ. ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿದ ಕೇಂದ್ರ ರಸ್ತೆ ಸಾರಿಗೆ ಇಲಾಖೆ, ‘ಈ ಕ್ರಮದಿಂದ ಉದ್ಯೋಗ ಸೃಷ್ಟಿಯಾಗಲಿದೆ. ಅಲ್ಲದೆ, ಸರಕು ಸಾಗಣೆ ವಲಯದಲ್ಲಿ ಅಗತ್ಯವಿರುವ 22 ಲಕ್ಷ ಕೊರತೆ ಚಾಲಕರನ್ನು ಪೂರೈಸಲಿದೆ ಎಂದು ಹೇಳಿದೆ.
ಆದರೆ, ರಸ್ತೆ ಸುರಕ್ಷತೆ ಮತ್ತು ಚಾಲಕರ ತರಬೇತಿ ಮತ್ತು ಕೌಶಲ್ಯಗಳ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ ಎಂದಿದೆ ಕೇಂದ್ರ ಸರ್ಕಾರ.