KTM RC 125 ಬೈಕ್ ಬಿಡುಗಡೆ- ಯಮಹಾ R15ಗೆ ಶುರುವಾಯ್ತು ನಡುಕ!

Published : Jun 19, 2019, 03:59 PM IST
KTM RC 125 ಬೈಕ್ ಬಿಡುಗಡೆ- ಯಮಹಾ R15ಗೆ ಶುರುವಾಯ್ತು ನಡುಕ!

ಸಾರಾಂಶ

KTM RC 125 ಬೈಕ್ ಬಿಡುಗಡೆಯಾಗಿದೆ. KTM  125 ಬೈಕ್ ಯಶಸ್ಸಿನ ಬೆನ್ನಲ್ಲೇ RC 125 ಬಿಡುಗಡೆಯಾಗಿದೆ. ಇದರ ವಿಶೇಷತೆ ಹಾಗೂ ಬೆಲೆ ಮಾಹಿತಿ ಇಲ್ಲಿದೆ. 

ನವದೆಹಲಿ(ಜೂ.19): ಬಹುನಿರೀಕ್ಷಿತ KTM RC 125 ಬೈಕ್ ಬಿಡುಗಡೆಯಾಗಿದೆ.  KTM RC16 ಬೈಕ್ ಪ್ರೇರಿತ, RC 125 ಬೈಕ್ ಹಲವು ವಿಶೇಷತೆಗಳನ್ನೊಳಗೊಂಡಿದೆ. ನೂತನ ಬೈಕ್ ಬೆಲೆ 1.47 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ). ಈಗಾಗಲೇ KTM  125 ಬೈಕ್ ಬಿಡುಗಡೆ ಮಾಡಲಾಗಿದೆ. ಇದರ ಯಶಸ್ಸಿನ ಬೆನ್ನಲ್ಲೇ ಇದೀಗ KTM RC 125 ಬೈಕ್ ಬಿಡುಗಡೆಯಾಗಿದೆ. 

ಇದನ್ನೂ ಓದಿ: ಸ್ಕೂಟರ್ ಏರಿ ಅರ್ಧ ದಾರಿ ತಲುಪಿದಾಗ ಹೆಡೆ ಬಿಚ್ಚಿದ ನಾಗಣ್ಣ!

RC 125 ಬೈಕ್  124 cc ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದ್ದು, 14.3 bhp ಪವರ್ ಹಾಗೂ 12 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. ಮುಂಭಾಗದಲ್ಲಿ 300 mm ಡಿಸ್ಕ್ ಬ್ರೇಕ್ ಹಾಗೂ ರೇರ್ 230 mm ಡಿಸ್ಕ್ ಬ್ರೇಕ್ ಹೊಂದಿದೆ. ಸಿಂಗಲ್ ಚಾನೆಲ್ ABS ಲಭ್ಯವಿದೆ.

ಇದನ್ನೂ ಓದಿ: ರಾಂಗ್ ಸೈಡ್ ಪಾರ್ಕ್- ಸ್ಕೂಟರ್ ಪುಡಿ ಮಾಡಿದ ಪೊಲೀಸ್!

RC 125 ಬೈಕ್ ಗ್ರೌಂಡ್ ಕ್ಲೀಯರೆನ್ಸ್  157 mm ಹಾಗೂ 154.2 ಕೆಜಿ ತೂಕವಿದೆ. KTM 125 ಡ್ಯೂಕ್ ಬೈಕ್ ಬೆಲೆಗಿಂತ  KTM RC 125 ಬೆಲೆ 17,000 ರೂಪಾಯಿ ಹೆಚ್ಚು. ಯಮಾಹ R15 ಬೈಕ್ ಪ್ರತಿಸ್ಪರ್ಧಿಯಾಗಿ ಇದೀಗ ಮಾರುಕಟ್ಟೆಯಲ್ಲಿ KTM 125 RC ಬೈಕ್ ಹೊಸ ಸಂಚಲನ ಸೃಷ್ಟಿಸಲಿದೆ.

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ