ಕಡಿಮೆ ಬೆಲೆಯ ರಾಯಲ್ ಎನ್‌ಫೀಲ್ಡ್ 350X ಬೈಕ್ ಬಿಡುಗಡೆ!

By Web Desk  |  First Published Aug 9, 2019, 8:23 PM IST

ರಾಯಲ್ ಎನ್‌ಫೀಲ್ಡ್ ಬೈಕ್‌ಗಳೆಲ್ಲಾ 1.5 ಲಕ್ಷ ಬೆಲೆಯ ಆಸುಪಾಸಿನಲ್ಲಿದೆ. ಬೆಲೆ ಕಾರಣದಿಂದ ಹಲವರು ಇತರ ಬೈಕ್ ಮೊರೆ ಹೋಗುತ್ತಾರೆ. ಇದೀಗ ರಾಯಲ್ ಎನ್‌ಫೀಲ್ಡ್ ಕಡಿಮೆ ಬೆಲೆಯ ಬೈಕ್ ಬಿಡುಗಡೆ ಮಾಡಿದೆ. ನೂತನ ಬೈಕ್ ವಿವರ ಇಲ್ಲಿದೆ.
 


ಚೆನ್ನೈ(ಆ.09): ಭಾರತದಲ್ಲಿ ಕಾರು, ಬೈಕ್,ಸ್ಕೂಟರ್ ಮಾರಾಟ ಕುಸಿಯುತ್ತಿದೆ. ಉತ್ಪಾದನೆಯಾಗಿರು ವಾಹನಗಳು ಮಾರಾಟವಾಗದೇ ಉಳಿದಿದೆ. ಆಟೋಮೊಬೈಲ್ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ ಮತ್ತೆ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮುಂದಾಗಿರುವ ರಾಯಲ್ ಎನ್‌ಫೀಲ್ಡ್ ಕಡಿಮೆ ಬೆಲೆಯ ಬೈಕ್ ಬಿಡುಗಡೆ ಮಾಡಿದೆ. ನೂತನ ರಾಯಲ್ ಎನ್‌ಫೀಲ್ಡ್ 350X ಮಾರುಕಟ್ಟೆ ಪ್ರವೇಶಿಸಿದೆ.

Tap to resize

Latest Videos

undefined

ಇದನ್ನೂ ಓದಿ: ABS ತಂತ್ರಜ್ಞಾನದ ರಾಯಲ್ ಎನ್‌ಫೀಲ್ಡ್ ಬೈಕ್ ಬೆಲೆ ಪಟ್ಟಿ ಬಿಡುಗಡೆ!

ರಾಯಲ್ ಎನ್‌ಫೀಲ್ಡ್ 350X ಬುಲೆಟ್ ಬೈಕ್ ಬೆಲೆ 1.12 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಎಲೆಕ್ಟ್ರಿಕ್ ಸ್ಟಾರ್ಟ್ ವೇರಿಯೆಂಟ್ ಬೈಕ್ ಬೆಲೆ 1.217 ಲಕ್ಷ ರೂಪಾಯಿಎಕ್ಸ್ ಶೋ ರೂಂ). ಇನ್ನು ಸ್ಟಾಂಡರ್ಡ್ ವೇರಿಯೆಂಟ್ ಬೆಲೆ 1.36ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಸದ್ಯ ಮಾರುಕಟ್ಟೆಯಲ್ಲಿರುವ ಹಳೇ ಮಾಡೆಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ಬೆಲೆ 1.31 ಲಕ್ಷ ರರೂಪಾಯಿ(ಎಕ್ಸ್ ಶೋ ರೂಂ). ಇನ್ನು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಬೆಲೆ 1.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

ಇದನ್ನೂ ಓದಿ: ನೆಲಕ್ಕೆ ಬಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಸುಲಭವಾಗಿ ಎತ್ತಲು ಇಲ್ಲಿದೆ ಟಿಪ್ಸ್!

ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಪೈಕಿ  350X ಅತೀ ಕಡಿಮೆ ಬೆಲೆ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.  346cc, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್, ಎಂಜಿನ್ ಹೊಂದಿದ್ದು,  19.8hp ಪವರ್ ಹಾಗೂ 28Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

click me!