ಶಾಲಾ ಸಮವಸ್ತ್ರ ಧರಿಸಿರುವ ಬಾಲಕಿಯೊಬ್ಬಳು ತನ್ನ ತಂದೆಯನ್ನು ಹಿಂದೆ ಕೂರಿಸಿಕೊಂಡು ವಾಹನಗಳು ಸಂಚರಿಸುವ ಬ್ಯುಸಿಯಾದ ರಸ್ತೆಯಲ್ಲಿ ಸ್ಕೂಟರ್ ಚಾಲನೆ ಮಾಡುತ್ತಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಾಲನೆ ಮಾಡುವುದಕ್ಕೆ ಒಂದು ಹಂತದ ಪ್ರಬುದ್ಧತೆ ಹಾಗೂ ಜವಾಬ್ದಾರಿಯ ಅಗತ್ಯವಿದೆ. ಇದೇ ಕಾರಣಕ್ಕೆ ಪ್ರತಿ ದೇಶದಲ್ಲೂ ಚಾಲನಾ ಪರವಾನಿಗಿ ಪಡೆಯಲು ಕನಿಷ್ಠ ವಯಸ್ಸನ್ನು ನಿಗದಿಪಡಿಸಿದೆ. ಇದು ಓರ್ವ ಚಾಲಕ ಈ ಸುರಕ್ಷಿತವಾಗಿ ಅವನಿಗೂ ಪರರಿಗೂ ತೊಂದರೆಯಾಗದಂತೆ ವಾಹನ ಚಾಲನೆ ಮಾಡಬಹುದು ಎಂಬುದನ್ನು ಖಚಿತಪಡಿಸುತ್ತದೆ. ಆದರೆ ದುರಾದೃಷ್ಟವಶಾತ್ ಪುಟ್ಟ ಮಕ್ಕಳು ಕೂಡ ಕಾರು ಬೈಕ್ ಮುಂತಾದ ವಾಹನಗಳನ್ನು ಚಾಲನೆ ಮಾಡುವ ದೃಶ್ಯಗಳು ಆಗಾಗ ಕಂಡು ಬರುತ್ತವೆ. ಇಂತಹ ಘಟನೆಗಳು ನೋಡುಗರನ್ನು ಸಿಟ್ಟಿಗೇಳುವಂತೆ ಮಾಡುತ್ತದೆ. ಅದೇ ರೀತಿ ಇಲ್ಲೊಂದು ಕಡೆ ಶಾಲಾ ಸಮವಸ್ತ್ರ ಧರಿಸಿರುವ ಬಾಲಕಿಯೊಬ್ಬಳು ತನ್ನ ತಂದೆಯನ್ನು ಹಿಂದೆ ಕೂರಿಸಿಕೊಂಡು ವಾಹನಗಳು ಸಂಚರಿಸುವ ಬ್ಯುಸಿಯಾದ ರಸ್ತೆಯಲ್ಲಿ ಸ್ಕೂಟರ್ ಚಾಲನೆ ಮಾಡುತ್ತಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಔರಂಗಬಾದ್ ಇನಸೈಡರ್ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಇಂತಹವುಗಳು ನಿಜವಾಗಿಯೂ ಸ್ವೀಕಾರರ್ಹವೇ ಎಂದು ಪ್ರಶ್ನಿಸಿದ್ದಾರೆ. ಛತ್ರಪತಿ ಶಂಭಾಜಿನಗರದ ಶಾಕಿಂಗ್ ದೃಶ್ಯಾವಳಿ ಇದು ಎಂದು ಬರೆದು ವೀಡಿಯೋ ಪೋಸ್ಟ್ ಮಾಡಲಾಗಿದೆ. ವೀಡಿಯೋದಲ್ಲಿ ಅಪ್ಪ ಮಗಳನ್ನು ಮುಂದೆ ಕೂರಿಸಿಕೊಂಡು ತಲೆಗೆ ಹೆಲ್ಮೆಟ್ ಕೂಡ ಹಾಕದೇ ಸ್ಕೂಟರ್ ಓಡಿಸುತ್ತಿರುವುದನ್ನು ಕಾಣಬಹುದಾಗಿದೆ.
ಭಜರಂಗಿ ರೂಪದಲ್ಲಿ ಬಂದು 6 ವರ್ಷದ ಬಾಲಕಿ ಮೇಲೆ ನಡೆಯುತ್ತಿದ್ದ ಅತ್ಯಾಚಾರ ತಪ್ಪಿಸಿದ ಕೋತಿಗಳು!
ಈ ವೀಡಿಯೋ ನೋಡಿದ ಅನೇಕರು, ತಂದೆಯ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವಿನ ಮೇಲೆ ಆಕ್ರೋಶ ಬೇಡ ಪೋಷಕರು ಜವಾಬ್ದಾರಿಯುತವಾಗಿರಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಲವು ಅಪಘಾತಗಳಿಗೆ ಇದು ಕಾರಣ, ಇದು ಯಾವ ರೀತಿಯ ಪೇರೆಂಟಿಂಗ್ ಎಂಬುದು ನಮಗೆ ತಿಳಿದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೆ ಕೆಲವರು ಹೆಲ್ಮೆಟ್ ಎಲ್ಲಿ ಸರ್, ಅವರು ಹೆಲ್ಮೆಟ್ ಧರಿಸಿಲ್ಲ, ಮಗಳಿಗೂ ಹೆಲ್ಮೆಟ್ ತೊಡಿಸಿಲ್ಲ ಎಂದು ಹೇಳಿದ್ದಾರೆ.
ಬಾಲಕಿಯ ಜೀವ ಉಳಿಸಲು ಸಲ್ಮಾನ್ ಖಾನ್ ಅಸ್ಥಿಮಜ್ಜೆ ದಾನ: ಭಾರತದ ಮೊದಲ ದಾನಿ ಎಂಬ ಹೆಗ್ಗಳಿಕೆ!
ಆದರೆ ಮತ್ತೆ ಕೆಲವರು ಈ ವೀಡಿಯೋವನ್ನು ಕ್ಯೂಟ್ ಎಂದು ಬಣ್ಣಿಸಿದ್ದಾರೆ. ಇತ್ತೀಚೆಗೆ ಹದಿಹರೆಯದ ಮಕ್ಕಳು ಪೋಷಕರ ಕಾರನ್ನು ಚಲಾಯಿಸಿ ಹಲವು ಅನಾಹುತಕ್ಕೆ ಕಾರಣವಾಗಿದ್ದಾರೆ. ಬಿಸಿರಕ್ತದ ಮಕ್ಕಳ ರಾಶ್ ಡ್ರೈವಿಂಗ್‌ನಿಂದಾಗಿ ಬೇರೆ ಯಾವುದು ಮುಗ್ಧ ಜೀವ ಪ್ರಾಣ ಕಳೆದುಕೊಂಡಂತಹ ಹಲವು ಘಟನೆಗಳು ನಡೆದಿವೆ. ಕೆಲ ತಿಂಗಳ ಹಿಂದಷ್ಟೇ ಪುಣೆಯಲ್ಲಿ 17 ವರ್ಷದ ಹುಡುಗನೋರ್ವ ಅಪ್ಪನ ಪೋರ್ಶೆ ಕಾರನ್ನು ಚಲಾಯಿಸಿದ ಬೇರೆ ವಾಹನಗಳಿಗೆ ಗುದ್ದಿದ ಪರಿಣಾಮು ಪುಣೆಯ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಜೀವ ಕಳೆದುಕೊಂಡ ಘಟನೆ ನಡೆದಿತ್ತು.
ಅದೇನೆ ಇರಲಿ ಈ ಪುಟ್ಟ ಬಾಲಕಿಯ ಡ್ರೈವಿಂಗ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.