ಪೆಟ್ರೋಲ್ ಚಿಂತೆ ಯಾಕೆ? ಭಾರತದ ಮೊದಲ ಎಥೆನಾಲ್ ಮಿಶ್ರಿತ ಹೋಂಡಾ CB300F ಬೈಕ್ ಲಾಂಚ್!

By Chethan KumarFirst Published Oct 20, 2024, 8:11 PM IST
Highlights

ಪೆಟ್ರೋಲ್ ದುಬಾರಿ ಅನ್ನೋ ಚಿಂತೆ ಯಾಕೆ? ಇದೀಗ ಹೋಂಡಾ ಹೊಚ್ಚ ಹೊಸ  CB300F ಬೈಕ್ ಬಿಡುಗಡೆ ಮಾಡಿದೆ. ಇದು ಫ್ಲೆಕ್ಸ್ ಫ್ಯುಯೆಲ್ ಬೈಕ್. ಇನ್ನು ಬೆಲೆ ಕೂಡ ಪೆಟ್ರೋಲ್ ಬೈಕ್‌ನಷ್ಟೇ ಇದೆ. ಆದರೆ ಲಾಭ ದುಪ್ಪಟ್ಟು.

ನವದೆಹಲಿ(ಅ.20) ಭಾರತದಲ್ಲಿ ಪೆಟ್ರೋಲ್ ಬೆಲೆ 100ರ ಗಡಿ ದಾಡಿ ವರ್ಷಗಳೇ ಉರುಳಿದೆ. ಹೀಗಾಗಿ ಬೈಕ್, ಕಾರು ಸೇರಿದಂತೆ ವಾಹನ ನಿರ್ವಹಣೆ ಬಲು ದುಬಾರಿ. ಇನ್ನು ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಇದರ ನಡುವೆ ಫ್ಲೆಕ್ಸ್ ಫ್ಯುಯೆಲ್ ಕುರಿತು ಕೇಂದ್ರ ಸರ್ಕಾರ ಮಾತನಾಡುತ್ತಿದ್ದರೂ ಸದ್ಯಕ್ಕೆ ಸಾಧ್ಯವೇ? ಅನ್ನೋ ಪ್ರಶ್ನೆ ಚರ್ಚೆ ಹಲವು ಬಾರಿ ನಡೆದಿದೆ. ಈ ಎಲ್ಲಾ ಚರ್ಚೆ ನಡುವೆ ಇದೀಗ ಭಾರತದ ಮೊಟ್ಟ ಮೊದಲ ಫ್ಲೆಕ್ಸ್ ಫ್ಯುಯೆಲ್ ಬೈಕ್ ಬಿಡುಗಡೆಯಾಗಿದೆ. ಹೋಂಡಾ ಇದೀಗ CB300F ಬೈಕ್ ಬಿಡುಗಡೆ ಮಾಡಿದೆ. ನಿಮಗೆ ಪೆಟ್ರೋಲ್ ದುಬಾರಿಯ ಚಿಂತೆ ಇಲ್ಲ, ಬೈಕ್ ಬೆಲೆಯೂ ದುಬಾರಿಯಲ್ಲ. 

ಎಲೆಕ್ಟ್ರಿಕ್ ಬೈಕ್ ಬೆಲೆ ದುಬಾರಿ, ಜೊತೆಗೆ ಚಾರ್ಜಿಂಗ್ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಇದರ ನಡುವೆ ಹೋಂಡಾ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬೈಕ್ ಬಿಡುಗಡೆ ಮಾಡಿದೆ. ಇದು ಭಾರತದ ಮೊದಲ ಫ್ಲೆಕ್ಸ್ ಫ್ಯುಯೆಲ್ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 300cc ಬೈಕ್ ಬೆಲೆ 1.7 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

Latest Videos

 ಬರೋಬ್ಬರಿ 60 ಕಿ.ಮೀ ಮೈಲೇಜ್, ಬರುತ್ತಿದೆ ಹೊಸ ಹೊಂಡಾ ಆ್ಯಕ್ಟಿವಾ 7ಜಿ ಸ್ಕೂಟರ್!

ಹೋಂಡಾ ಸಿಬಿ300ಎಫ್ ಫ್ಲೆಕ್ಸ್ ಫ್ಯುಯಲ್ ಮೋಟಾರ್ ಸೈಕಲ್ ಅತ್ಯದ್ಭುತ ಸ್ಟ್ರೀಟ್ ಫೈಟರ್ ಆಗಿದೆ. ಪರಿಸರ ಸ್ನೇಹಿ ಗುಣದ ಜೊತೆ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದೆ. ಈ ಮೋಟಾರ್ ಸೈಕಲ್ 293.52 ಸಿಸಿ, ಆಯಿಲ್-ಕೂಲ್ಡ್, 4 ಸ್ಟ್ರೋಕ್, ಸಿಂಗಲ್-ಸಿಲಿಂಡರ್ ಪಿಜಿಎಂ- ಎಫ್ಐ ಎಂಜಿನ್ ಹೊಂದಿದ್ದು, ಈ ಎಂಜಿನ್ ಇ85 ಫ್ಯುಯಲ್ (85% ಎಥೆನಾಲ್ ಮತ್ತು 15% ಗ್ಯಾಸೋಲಿನ್) ವರೆಗೆ ಹೊಂದಿಕೊಳ್ಳುತ್ತದೆ. ಇದು 18.3 ಕೆಡಬ್ಲ್ಯೂ ಪವರ್ ಮತ್ತು 25.9 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.  6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.

ಈ ಮೋಟಾರ್ ಸೈಕಲ್ ಅತ್ಯುತ್ತಮ ಕಾರ್ಯಕ್ಷಮತೆ ಜೊತೆಗೆ ಅತ್ಯುತ್ತಮ ಸುರಕ್ಷತೆ ಒದಗಿಸುತ್ತದೆ. ಸಿಬಿ300ಎಫ್ ಫ್ಲೆಕ್ಸ್- ಫ್ಯುಯೆಲ್‌ ಎರಡೂ ತುದಿಗಳಲ್ಲಿ (276 ಎಂಎಂ ಮುಂಭಾಗ ಮತ್ತು 220 ಎಂಎಂ ಹಿಂಭಾಗ) ಡಿಸ್ಕ್ ಬ್ರೇಕ್‌ ಗಳನ್ನು ಹೊಂದಿದೆ. ಜೊತೆಗೆ ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿದೆ. ಸ್ಟಾಂಡರ್ಡ್ ಆಗಿ ಹೋಂಡಾ ಸೆಲೆಕ್ಟೇಬಲ್ ಟಾರ್ಕ್ ಕಂಟ್ರೋಲ್ (ಎಚ್ ಎಸ್ ಟಿ ಸಿ) ಹೊಂದಿದೆ. ಇದಲ್ಲದೆ ಅದರ ಗೋಲ್ಡನ್ ಕಲರ್ ಯು ಎಸ್ ಡಿ ಫ್ರಂಟ್ ಫೋರ್ಕ್ ಗಳು ಮತ್ತು 5 ಹಂತದ ಅಡ್ಜಸ್ಟೇಬಲ್ ರೇರ್ ಮೋನೊ ಶಾಕ್ ಸಸ್ಪೆನ್ಷನ್ ವ್ಯವಸ್ಥೆಯು ಅತ್ಯುತ್ತಮ ರೈಡಿಂಗ್ ಅನುಭವ ಒದಗಿಸುತ್ತದೆ. ಇದಲ್ಲದೆ, ಇದು ಎಲ್ಲಾ ಎಲ್ಇಡಿ ಬೆಳಕಿನ ವ್ಯವಸ್ಥೆಯನ್ನು ಪಡೆದಿರುತ್ತದೆ.    

ಅತ್ಯಾಕರ್ಷಕ, ಅತ್ಯುತ್ತಮ ಪರ್ಫಾಮೆನ್ಸ್, ಹೋಂಡಾ NX500 ಬೈಕ್ ಬಿಡುಗಡೆ!

click me!