ಲಾಲು ಪ್ರಸಾದ್ ಕುಟುಂಬದ ಫಾರ್ಚುನರ್ ಕಾರು ಕಳವು; 6 ವರ್ಷದ ಬಳಿಕ ಸಿಕ್ಕಿತು ಸುಳಿವು!

By Suvarna NewsFirst Published Jun 14, 2020, 8:57 PM IST
Highlights

ನಗರ ಪ್ರದೇಶಗಳಲ್ಲಿ ವಾಹನ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಮನೆ ಮುಂದೆ ನಿಲ್ಲಿಸದ ವಾಹನ ಬೆಳಗಾಗುವದರೊಳಗೆ ನಾಪತ್ತೆಯಾಗಿರುತ್ತೆ. ಅದೆಷ್ಟೇ ಆಧುನಿಕ ತಂತ್ರಜ್ಞಾನ ಅಳವಡಿಸಿದ್ದರೂ, ಕಾರು ಕಳ್ಳತನ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಕುಟುಂಬ ಕಾರನ್ನೇ ಕದ್ದಿ ಚಾಲಾಕಿ ಕಳ್ಳರು ಬರೋಬ್ಬರಿ 6 ವರ್ಷ ಯಾರಿಗೂ ತಿಳಿಯದಂತೆ ಮಜಾ ಉಡಾಯಿಸಿದ್ದರು. ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಈ ಚಾಲಕಿ ಕಳ್ಳರು ಪೊಲೀಸರ ಬಲೆ ಬಿದ್ದ ಕತೆಯೇ ರೋಚಕ.

ಬಿಹಾರ(ಜೂ.12):  ಭಾರತದಲ್ಲೀಗ ಕಾರಿನ ಸುರಕ್ಷತೆಗೆ ಮೊದಲ ಆದ್ಯತೆ. ಕಾರು ಕಳ್ಳತನ, ಕಾರಿನ ಚಕ್ರ ಸೇರಿದಂತೆ ಬಿಡಿ ಭಾಗಗಳ ಕಳವು ಸೇರಿದಂತೆ ಹಲವು ಕಾರಣಗಳಿಂದ ಕಾರು ಕಂಪನಿಗಳು ಆ್ಯಂಟಿ ಥೆಫ್ಟ್ ಅಲಾಂ, ವೆಹಿಕಲ್ ರಿಮೂಟ್ ಸಿಸ್ಟಮ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನಗಳನ್ನು ಬಳಸುತ್ತಿದೆ. ಆದರೆ ಚಾಲಾಕಿ ಕಳ್ಳರು ಇದೆಲ್ಲವನ್ನು ಅರೆದು ಕುಡಿದು, ಯಾರಿಗೂ ತಿಳಿಯದಂತೆ ಕಾರು ಕಳ್ಳತನ ಮಾಡುತ್ತಾರೆ. ಹೀಗೆ 6 ವರ್ಷಗಳ ಹಿಂದೆ  ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಕುಟುಂಬದ ಟೊಯೋಟಾ ಫಾರ್ಚುನರ್ ಕಾರು ಕಳ್ಳತನ ಮಾಡಿದ್ದ ಬಹುದೊಡ್ಡ ಜಾಲವನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರು ಕಡಿಮೆ ಓಡಿಸುತ್ತೀರಾ? ಕಡಿಮೆ ಪಾವತಿಸಿ; ಬಂದಿದೆ ಕಿ.ಮೀ ಇನ್ಶುರೆನ್ಸ್!

6 ವರ್ಷಗಳ ಹಿಂದೆ  ಚಾಲಕಿ ಕಳ್ಳರ ಗುಂಪು ಲಾಲು ಪ್ರಸಾದ್ ಯಾದವ್ ಕುಟುಂಬಸ್ಥನ ಟೊಯೋಟಾ ಫಾರ್ಚುನರ್ ಕಾರು ಕದ್ದಿದ್ದರು. ಈ ಕುರಿತು ಗುರಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ ಇದೇ ರೀತಿ ಹಲವು ಫಾರ್ಚುನರ್ ಕಾರು ಕಳವು ಪ್ರಕರಣಗಳು ಬೆಳಕಿಗೆ ಬಂದಿತ್ತು. ಈ ಕುರಿತು ಬಿಹಾರ ಸೇರಿದಂತೆ ನೆರ ರಾಜ್ಯಗಳಲ್ಲಿ ತನಿಖೆ ನಡೆಯುತ್ತಿತ್ತು.

ಸುದೀರ್ಘ ವಿಮೆ ಪಾಲಿಸಿಗೆ ಬ್ರೇಕ್, ಕಡಿಮೆಯಾಗಲಿದೆ ಹೊಸ ವಾಹನ ಬೆಲೆ!

6 ವರ್ಷಗಳ ಬಳಿಕ ಅರುಣಾಚಲ ಪೊಲೀಸರು ಬಹುದೊಡ್ಡ ಕಾರು ಕಳವು ಜಾಲವನ್ನು ಪತ್ತೆಹಚ್ಚಿದ್ದಾರೆ. ಇವರು ಕದ್ದು ಕಾರುಗಳ ಬೈಕಿ ಒಂದು ಫಾರ್ಚುನರ್ ಕಾರು 6 ವರ್ಷಗಳ ಹಿಂದೆ ಕಳುವಾಗಿದ್ದ ಲಾಲು ಪ್ರಸಾದ್ ಯಾದವ್ ಕುಟಂಬಸ್ಥರ ಕಾರಾಗಿದೆ ಎಂದು ಅರುಣಾಚಲ ಪ್ರದೇಶದ ಇಟಾನಗರ ಪೊಲೀಸರು ಹೇಳಿದ್ದಾರೆ.

ಈ ಚಾಲಕಿ ಕಳ್ಳರಿಂದ 26 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 22 ಕಾರುಗಳು ಟೋಯೋಟಾ ಫಾರ್ಚುನರ್ ಕಾರುಗಳಾಗಿವೆ. ಇನ್ನು 2 ಹ್ಯುಂಡೈ ಕ್ರೆಟಾ ಹಾಗೂ ಇನ್ನೆರಡು ಕಾರು ಮಾರುತಿ ಬ್ರೆಜಾ. ವಶಪಡಿಸಿಕೊಂಡಿರುವ ಕಾರುಗಳನ್ನು ಈ ಕಳ್ಳರು ದೆಹಲಿ, ಗುರುಗಾಂವ್, ಗುಜರಾತ್, ಹರ್ಯಾಣ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಿಂದ ಕಾರುಗಳನ್ನು ಕದ್ದಿದ್ದಾರೆ. ವಶಪಡಿಸಿಕೊಂಡಿರುವ ಕಾರುಗಳ ಮೌಲ್ಯ 9.34 ಕೋಟಿ ರೂಪಾಯಿ. 
 

click me!