ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಕೈಜೋಡಿಸಿರುವ ಟೋಯೋಟಾ ಕಿರ್ಲೋಸ್ಕರ್ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಈಗಾಗಲೇ ಮುಖ್ಯಮಂತ್ರಿ ಪರಿಹಾರ ನಿಧಿ, ವೈದ್ಯಕೀಯ, ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವು ವಿಭಾಗಗಳಿಗೆ ನೆರವು ನೀಡಿರುವ ಟೋಯೋಟಾ ಕಿರ್ಲೋಸ್ಕರ್ ಇದೀಗ ಕೊರೋನಾ ಪರೀಕ್ಷೆ ಹೆಚ್ಚಿಸಲು ನೆರವಾಗುತ್ತಿದೆ.
ಬೆಂಗಳೂರು(ಜೂ.14): ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಕರ್ನಾಟಕದಲ್ಲಿ ಕೋವಿಡ್-19 ಪರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಹಸ್ತ ನೀಡುತ್ತಿದೆ. ಇದರ ಅಂಗವಾಗಿ ಮೊಬೈಲ್ ಮೆಡಿಕಲ್ ಯುನಿಟ್‌ನ್ನು (MMU) ಭಾರತೀಯ ವಿಜ್ಞಾನ ಸಂಸ್ಥೆಗೆ (IISC) ಹಸ್ತಾಂತರಿಸಿದೆ.
ಸುಲಭ EMI, ತಡೆರಹಿತ ಸಂಪರ್ಕ; ವಿಶೇಷ ಸೇವಾ ಕೊಡುಗೆ ಪರಿಚಯಿಸಿದ ಟೊಯೋಟಾ ಕಿರ್ಲೋಸ್ಕರ್!
ಬೆಂಗಳೂರಿನಲ್ಲಿರುವ ಐಐಎಸ್‍ಸಿ ಭಾರತದ ಪ್ರಮುಖ ಶಿಕ್ಷಣ ಮತ್ತು ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನೆಯ ಪ್ರಮುಖ ಸಂಸ್ಥೆಯಾಗಿದೆ. ಮೊಬೈಲ್ ವೈದ್ಯಕೀಯ ಘಟಕವನ್ನು ಸೋಂಕು ಪರೀಕ್ಷಾ ಪ್ರಯೋಗಾಲಯವಾಗಿ ಬಳಸಲಾಗುತ್ತದೆ. ಇದರಿಂದ ಕೊರೊನಾ ವೈರಸ್ ಅನ್ನು ಪರೀಕ್ಷಿಸಬಹುದು ಮತ್ತು ಫಲಿತಾಂಶಗಳನ್ನು ತ್ವರಿತವಾಗಿ ಪಡೆಯಬಹುದು. ಇದು ರಾಜ್ಯದಲ್ಲಿ ಪರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಕೋಟಿ ರೂ. ನೀಡಿದ ಟೊಯೋಟಾ ಕಿರ್ಲೋಸ್ಕರ್!
ರೋಗಿಗಳು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರೀಕ್ಷಿಸಬಹುದಾಗಿರುವುದರಿಂದ ಇದು ಆಸ್ಪತ್ರೆಗಳಲ್ಲಿ ಜನದಟ್ಟಣೆಯನ್ನು ತಡೆಯುತ್ತದೆ. ಇದರ ಪರಿಣಾಮವಾಗಿ ವೈರಸ್ ವ್ಯಾಪಿಸುವುದನ್ನು ತಡೆಯಬಹುದು. ವೈದ್ಯಕೀಯ ಮೂಲಭೂತ ಸೌಲಭ್ಯಗಳು ಇಲ್ಲದ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆಯನ್ನು ಒದಗಿಸಲು ಮೊಬೈಲ್ ಘಟಕವನ್ನು ಚಾಲನೆ ಮಾಡಬಹುದು. ಇದರಿಂದ ಸೋಂಕು ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ.
ಟಿಕೆಎಂನ ಉಪಾಧ್ಯಕ್ಷ ಮತ್ತು ಪೂರ್ಣಾವಧಿ ನಿರ್ದೇಶಕರಾದ ಶ್ರೀ ಶೇಖರ್ ವಿಶ್ವನಾಥನ್ ಮತ್ತು ಅವರ ತಂಡವು ಐಐಎಎಸ್‍ಸಿ ನಿರ್ದೇಶಕ ಅನುರಾಗ್ ಕುಮಾರ್ ಅವರಿಗೆ ಸಂಸ್ಥೆಯ ಹಿರಿಯ ಸದಸ್ಯರ ಸಮ್ಮುಖದಲ್ಲಿ ಘಟಕವನ್ನು ಹಸ್ತಾಂತರಿಸಲಾಯಿತು.
ಕೊರೋನಾ ಹೋರಾಟಕ್ಕೆ ಮತ್ತಷ್ಟು ನೆರವು; ಆರೋಗ್ಯ ಇಲಾಖೆ ಜೊತೆ ಕೈಜೋಡಿಸಿದ ಟೊಯೋಟಾ ಕಿರ್ಲೋಸ್ಕರ್!.
ಹಸ್ತಾಂತರದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀ ಶೇಖರ್ ವಿಶ್ವನಾಥನ್, ವಿಶ್ವದ ಪ್ರತಿ ಪೀಡಿತ ದೇಶವು ವೈರಸ್ ಹರಡುವಿಕೆಯ ಪ್ರಮಾಣ ಹೆಚ್ಚಾಗಿರುವುದರಿಂದ ಸಾಕಷ್ಟು ವೈದ್ಯಕೀಯ ನೆರವು ಮತ್ತು ಮೂಲಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ. ಭಾರತದಲ್ಲಿ ಕಳೆದ ಕೆಲವು ದಿನಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿನ ತ್ವರಿತ ಏರಿಕೆ ವೈದ್ಯಕೀಯ ಮೂಲಸೌಕರ್ಯಗಳಿಗೆ ಹೆಚ್ಚಿನ ಪರೀಕ್ಷಾ ದೃಷ್ಟಿಕೋನದಿಂದ ಹೆಚ್ಚಿನ ಒತ್ತಡವನ್ನುಂಟು ಮಾಡಿದೆ.
ಎಂಎಂಯುನಂತಹ ಮೊಬೈಲ್ ಘಟಕಗಳು ನೆಲದ ಪ್ರಯೋಗಾಲಯ ಜಾಲಕ್ಕೆ ಪೂರಕವಾಗಿ ನಿರ್ಣಾಯಕವಾಗಿ ಕೆಲಸ ಮಾಡಲಿದೆ. ಪರೀಕ್ಷೆಯನ್ನು ಹೆಚ್ಚಿಸಲು ಮತ್ತು ಕೋವಿಡ್ ಗ್ರಾಫ್‍ನ್ನು ಸಮತೋಲನ ಸ್ಥಿತಿಗೆ ತರಲು ಕಾರ್ಪೋರೇಟ್‍ಗಳು ಮತ್ತು ಸರ್ಕಾರಗಳು ಕೈಜೋಡಿಸಬೇಕು. ಟೊಯೋಟಾ ಕಿರ್ಲೋಸ್ಕರ್ ಮೋಟಾರ್‍ನಲ್ಲಿ ನಾವು ಈ ಸಾಂಕ್ರಾಮಿಕ ರೋಗದ ವಿರುದ್ಧ ಕರ್ನಾಟಕ ಸರ್ಕಾರವನ್ನು ಬೆಂಬಲಿಸಲು ಸದಾ ಬದ್ಧರಾಗಿದ್ದೇವೆ ಮತ್ತು ಅವರೊಂದಿಗೆ ವಿವಿಧ ರಂಗಗಳಲ್ಲಿ ಸಹಭಾಗಿತ್ವವನ್ನು ಮುಂದುವರಿಸುತ್ತೇವೆ ಎಂದು ಭರವಸೆ ನೀಡಿದರು.
ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ, ಟಿಕೆಎಂ ಸಮುದಾಯ ಮತ್ತು ಸರ್ಕಾರದ ಅಗತ್ಯಗಳಿಗೆ ಅನುಗುಣವಾಗಿ ಬಿಕ್ಕಟ್ಟಿಗೆ ಪೂರ್ವಭಾವಿಯಾಗಿ ಸ್ಪಂದಿಸುತ್ತಿದೆ. ಕಂಪನಿಯು ಕರ್ನಾಟಕ ಮುಖ್ಯಮಂತ್ರಿಯ ಪರಿಹಾರ ನಿಧಿಗೆ ಎರಡು ಕೋಟಿ ರೂ. ಕೊಡುಗೆಯನ್ನು ನೀಡಿದೆ. ನಂತರ 3,000 ಹಜ್ಮತ್ ಸೂಟ್‍ಗಳನ್ನು ರಾಜ್ಯದ ಸರ್ಕಾರಿ ಆರೋಗ್ಯ ಸ್ವಯಂಸೇವಕರಿಗೆ ಹಸ್ತಾಂತರಿಸಿದೆ.
ಸುಮಾರು 3,500 ಅಗತ್ಯ ಕಿಟ್‍ಗಳು, 15,000 ಕ್ಕೂ ಹೆಚ್ಚು ಸದಸ್ಯರಿಗೆ ಅನುಕೂಲವಾಗುವಂತೆ ದೈನಂದಿನ ಕೂಲಿ ಕಾರ್ಮಿಕರಿಗೆ ನೀಡಲಾಯಿತು. ರಾಜ್ಯ ಪೆÇಲೀಸರಿಗೆ ಸ್ಯಾನಿಟೈಜರ್‍ಗಳು ಮತ್ತು ಮುಖವಾಡಗಳನ್ನು ವಿತರಿಸುವುದರ ಜೊತೆಗೆ ರಾಜ್ಯದ ಆರೋಗ್ಯ ಇಲಾಖೆಯನ್ನು ಬೆಂಬಲಿಸಲು ಟಿಕೆಎಂ 14 ಬಸ್‍ಗಳನ್ನು ನಿಯೋಜಿಸಿದೆ. ಟಿಕೆಎಂ ತನ್ನ ಸರಬರಾಜುದಾರ ಪಾಲುದಾರ ಸ್ಟಂಪ್ ಷುಯೆಲ್ ಮತ್ತು ಸೋಮಪ್ಪ ಸ್ಪ್ರಿಂಗ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಸಹ ಬೆಂಬಲಿಸಿದೆ, ಆರೋಗ್ಯ ಕಾರ್ಯಕರ್ತರಿಗೆ ಮುಖಗವಚ ಉತ್ಪಾದನೆಯನ್ನು ದಿನಕ್ಕೆ 275 ರಿಂದ 17,000 ಯೂನಿಟ್ಗಳಿಗೆ ಹೆಚ್ಚಿಸಲು ಟಿಕೆಎಂ ನೆರವಾಗಿದೆ.
ಇತ್ತೀಚೆಗೆ, ಟಿಕೆಎಂ 45 ಥರ್ಮಲ್ ಸ್ಕ್ಯಾನರ್‍ಗಳು, 45,000 ಹ್ಯಾಂಡ್ ಸ್ಯಾನಿಟೈಜರ್‍ಗಳು, 100 ಹಾಸಿಗೆಗಳು, 100 ರೋಗಿಗಳಿಗೆ ಉಪಭೋಗ್ಯ ವಸ್ತುಗಳು, ಇಂಟ್ರಾವೆನಸ್ ಸ್ಟ್ಯಾಂಡ್‍ಗಳು, ರಕ್ತದೊತ್ತಡ ಮಾನಿಟರ್‍ಗಳು ಮತ್ತು 12,000 ಪರೀಕ್ಷಾ ಕೈಗವಸುಗಳು, 70,000 ಮೂರು ಪ್ಲೈ ಫೇಸ್ ಮಾಸ್ಕ್‍ಗಳು ಮತ್ತು 7,500 ಎನ್ 95 ಮುಖವಾಡಗಳನ್ನು ಒಳಗೊಂಡಂತೆ 20 ಸೆಟ್ ಉಪಕರಣಗಳನ್ನು ಒದಗಿಸಿದೆ.
ಆರೋಗ್ಯ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಬೆಂಗಳೂರು ಪೆೋಲೀಸ್ ಸಿಬ್ಬಂದಿಗೆ. ಟಿಕೆಎಂ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ 10 ಹಾಗೂ ಬಿಡದಿ ಪುರಸಭೆಗೆ 10 ಸೋಂಕು ನಿವಾರಕ ಸಿಂಪಡಣೆ ಸಾಧನಗಳನ್ನು ವಿತರಿಸಲಾಗಿದೆ.