ಗ್ರಾಹಕರ ಮನೆ ಬಾಗಿಲಿಗೆ ಕಾರು ಸರ್ವೀಸ್; ನೂತನ ಸೇವೆಗೆ ಭರ್ಜರಿ ರೆಸ್ಪಾನ್ಸ್

By Suvarna News  |  First Published Jun 14, 2020, 6:39 PM IST

ಶೆಲ್ ಲ್ಯೂಬ್ರಿಕೆಂಟ್ಸ್ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿ ಪಿಟ್ ಸ್ಟಾಪ್ ಜಂಟಿಯಾಗಿ ಹೊಸ ಸೇವೆ ಆರಂಭಿಸಿದೆ. ಗ್ರಾಹಕರ ಮನೆ ಬಾಗಿಲಿಗೆ ಕಾರು ಸರ್ವೀಸ್ ಸೇವೆ ಆರಂಭಗೊಂಡಿದೆ. ನೂತನ ಸೇವೆ ಹಾಗೂ ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.


ಬೆಂಗಳೂರು(ಜೂ.14):  ಕೊರೋನಾ ವೈರಸ್ ಬಳಿಕ ಸಮಾಜಿಕ ಅಂತರ ಕಡ್ಡಾಯವಾಗಿದೆ. ಹೀಗಾಗಿ ಜನರು ಅಗತ್ಯ ವಸ್ತು ಹೊರತು ಪಡಿಸಿ ಉಳಿದ ಕಾರಣಗಳಿಗೆ ಮನೆಯಿಂದ ಹೊರಬರುವುದೇ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕರು ತಮ್ಮ ಕಾರುಗಳ ಸರ್ವೀಸ್ ಮಾಡಿಸಲು ಸರ್ವೀಸ್ ಸೆಂಟರ್‌ಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಗ್ರಾಹಕರ ಮನೆ ಬಾಗಿಲಿಗೆ ಕಾರು ಸರ್ವೀಸ್ ಮಾಡುವ ಸೇವೆಯನ್ನು ಶೆಲ್ ಲ್ಯೂಬ್ರಿಕೆಂಟ್ಸ್ ಹಾಗೂ   ಪಿಟ್ ಸ್ಟಾಪ್ ಆರಂಭಿಸಿದೆ. 

ಕಡಿಮೆ ಖರ್ಚು, ಇಂಧನ ಉಳಿತಾಯಕ್ಕಾಗಿ ಶೆಲ್ ಫ್ಲೀಟ್ ಸಲ್ಯೂಶನ್!

Tap to resize

Latest Videos

ಶೆಲ್ ಲ್ಯೂಬ್ರಿಕೆಂಟ್ಸ್ ,  ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿ ಪಿಟ್ ಸ್ಟಾಪ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.  ಈ ಸಹಭಾಗಿತ್ವದ ಪ್ರಮುಖ ಉದ್ದೇಶವೆಂದರೆ ಗ್ರಾಹಕರ ಮನೆ ಬಾಗಿಲಲ್ಲಿ ವಾಹನಗಳ ಸರ್ವೀಸ್ ಮಾಡುವುದಾಗಿದೆ. ಈ ಮೂಲಕ ಶೂನ್ಯ-ಸಂಪರ್ಕ ಸೇವೆಗಳನ್ನು ನೀಡಲಾಗುತ್ತದೆ. ಇತರರೊಂದಿಗಿನ ಸಂಪರ್ಕವನ್ನು ಕಡಿಮೆ ಮಾಡಿ ಗ್ರಾಹಕರಿಗೆ ಅವರ ಅನುಕೂಲಕ್ಕೆ ತಕ್ಕಂತೆ ಸುರಕ್ಷಿತ ಮತ್ತು ವಿಶ್ವಾಸಾರ್ಹವಾದ ಸೇವೆಗಳನ್ನು ಒದಗಿಸುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ.

ಗ್ರಾಹಕರಿಗೆ ಮತ್ತು ತಾಂತ್ರಿಕ ವರ್ಗದವರಿಗೆ ಸಮಾನವಾಗಿ ಅನುಕೂಲ ಮಾಡಿಕೊಡುವ ಪರಿಹಾರ ಇದಾಗಿದೆ. ದೇಶಾದ್ಯಂತ ಇರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ಸುರಕ್ಷತೆ ಮತ್ತು ಸಾರಿಗೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ಉಪಕ್ರಮ ಸಹಕಾರಿಯಾಗಲಿದೆ. ಈ ಉಪಕ್ರಮವು ಗ್ರಾಹಕರು ಮತ್ತು ಮೆಕ್ಯಾನಿಕ್ ಗಳ ನಡುವಿನ ಎಕ್ಸ್ ಪೋಶರ್ ಅನ್ನು ಕಡಿಮೆ ಮಾಡಲಿದೆ. ಇದಲ್ಲದೇ, ಕಳೆದ ಹಲವು ತಿಂಗಳಿಂದ ಕೋವಿಡ್-19 ಹಿನ್ನೆಲೆಯಲ್ಲಿ ಕೆಲಸ ಇಲ್ಲದಂತಾಗಿ ಜೀವನೋಪಾಯಕ್ಕೆ ಕಷ್ಟಪಡುತ್ತಿದ್ದ ಮೆಕ್ಯಾನಿಕ್ ಸಮುದಾಯಕ್ಕೆ ಹೆಚ್ಚು ಹೆಚ್ಚು ಬ್ಯುಸಿನೆಸ್ ಅವಕಾಶಗಳನ್ನು ತಂದುಕೊಡುತ್ತದೆ.

ದೆಹಲಿ-ಎನ್ ಸಿಆರ್, ಬೆಂಗಳೂರು, ಮುಂಬೈ, ಪುಣೆ ಮತ್ತು ಹೈದ್ರಾಬಾದ್ ಸೇರಿದಂತೆ ದೇಶದ 20 ನಗರಗಳಲ್ಲಿ 500 ಕ್ಕೂ ಹೆಚ್ಚು ಮೊಬೈಲ್ ವ್ಯಾನ್ ಗಳ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತೆರಳಿ ಅವರ ವಾಹನಗಳನ್ನು ಸರ್ವೀಸ್ ಮಾಡಲಾಗುತ್ತದೆ. ಪಿಪಿಇ ಬಳಕೆ ಮತ್ತು ಪ್ರತಿಯೊಂದು ಉಪಕರಣವನ್ನೂ ಸ್ಯಾನಿಟೈಸ್ ಮಾಡುವುದು ಸೇರಿದಂತೆ ಎಲ್ಲಾ ಸುರಕ್ಷತಾ ಶಿಷ್ಠಾಚಾರಗಳನ್ನು ಅನುಸರಿಸುವುದರ ಬಗ್ಗೆ ಎಲ್ಲಾ ಮೆಕ್ಯಾನಿಕ್ ಗಳಿಗೆ ಸೂಕ್ತ ತರಬೇತಿಯನ್ನು ನೀಡಲಾಗಿದೆ.

ಗ್ರಾಹಕರು ತಮ್ಮ ವಾಹನಗಳನ್ನು ವೃತ್ತಿಪರ ಮತ್ತು ಪರಿಣತರು ಹೆಚ್ಚು ಸ್ಯಾನಿಟೈಸ್ ಮಾಡಿದ ವಾತಾವರಣದಲ್ಲಿ ಸರ್ವೀಸ್ ಮಾಡಬೇಕೆಂದು ಬಯಸುತ್ತಿದ್ದಾರೆ. ಸ್ಯಾನಿಟೈಸೇಶನ್ ಮತ್ತು ಸ್ವಚ್ಛತೆಯ ಕೊರತೆ ಹಿನ್ನೆಲೆಯಲ್ಲಿ ಅವರು ತಮ್ಮ ವಾಹನಗಳನ್ನು ಬೇರೆ ಕಡೆ ಸರ್ವೀಸ್ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತೃಪ್ತಿದಾಯಕವಾದ, ಅನುಕೂಲಕರವಾದ ಮತ್ತು ವಿಶ್ವಾಸಾರ್ಹವಾದ ರೀತಿಯಲ್ಲಿ ಸರ್ವೀಸ್ ಮಾಡುವವರನ್ನು ಬಯಸುತ್ತಿದ್ದಾರೆ. ಇದೇ ವೇಳೆ ಸ್ವತಂತ್ರ ಗ್ಯಾರೇಜ್ ಮಾಲೀಕರು ಗ್ರಾಹಕರು ಹೆಚ್ಚು ಬರುವುದರಿಂದ ಸುರಕ್ಷತೆ ಮತ್ತು ಇನ್ನಿತರೆ ಸವಾಲುಗಳ ಬಗ್ಗೆ ಚಿಂತಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶೆಲ್ ಪಿಟ್ ಸ್ಟಾಪ್ ಜಾಲದೊಂದಿಗೆ ನೋಂದಣಿ ಮಾಡಿಕೊಂಡು ಗ್ರಾಹಕರೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಿ ಸ್ಥಿರವಾದ ವ್ಯವಹಾರಗಳನ್ನು ನಡೆಸಬಹುದಾಗಿದೆ. ಇದಕ್ಕೆ ಪೂರಕವಾಗಿ ಸುರಕ್ಷಿತ ವಿಧಾನದಲದಲಿ ಕೆಲಸ ನಿರ್ವಹಿಸಲು ತರಬೇತಿಯನ್ನೂ ನೀಡಲಾಗುತ್ತದೆ.

ಶೆಲ್ ಲ್ಯೂಬ್ರಿಕೆಂಟ್ಸ್ ಇಂಡಿಯಾದ ಕಂಟ್ರಿ ಹೆಡ್ ರಾಮನ್ ಓಝಾ ಅವರು ಈ ಉಪಕ್ರಮದ ಬಗ್ಗೆ ಮಾತನಾಡಿ, ``ಕೋವಿಡ್-19 ಸಾಂಕ್ರಾಮಿಕವು ನಮ್ಮ ಜೀವನದಲ್ಲಿ ಮೂಲಭೂತವಾದ ರೂಪಾಂತರಕ್ಕೆ ಕಾರಣವಾಗಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಗ್ರಾಹಕರು ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ವಿವಿಧ ಆಯ್ಕೆಗಳತ್ತ ಗಮನಹರಿಸುತ್ತಿದ್ದಾರೆ. ನಮ್ಮ ಶೆಲ್ ಇಂಡಿಯಾದಲ್ಲಿ ನಾವು ಗ್ರಾಹಕರ ಸಾರಿಗೆ ಅಗತ್ಯತೆಗಳಿಗೆ ಪೂರಕವಾದ ವಿಶ್ವಾಸಾರ್ಹತೆಯ ಮತ್ತು ಅನುಕೂಲಕರವಾದ ಪರಿಹಾರಗಳನ್ನು ನೀಡಲು ಬದ್ಧರಾಗಿದ್ದೇವೆ. ಇದೇ ವೇಳೆ ನಮ್ಮ ಮೆಕ್ಯಾನಿಕ್ ಪಾಲುದಾರರಿಗೆ ಸ್ಥಿರವಾದ ವ್ಯವಹಾರಗಳ ಅವಕಾಶಗಳನ್ನು ಕಲ್ಪಿಸುತ್ತಿದ್ದೇವೆ. ಶೆಲ್-ಪಿಟ್ ಸ್ಟಾಂಪ್ ಪಾಲುದಾರಿಕೆಯು ಸುರಕ್ಷಿತ ಶೂನ್ಯ-ಸಂಪರ್ಕದೊಂದಿಗೆ ಗ್ರಾಹಕರ ಮನೆ ಬಾಗಿಲಲ್ಲಿ ಸೇವೆಯನ್ನು ಒದಗಿಸಲಿದೆ’’ ಎಂದು ತಿಳಿಸಿದರು.

ಪಿಟ್ ಸ್ಟಾಪ್ ನ ಸಂಸ್ಥಾಪಕ & ಸಿಇಒ ಮಿಹಿರ್ ಮೋಹನ್ ಅವರು ಮಾತನಾಡಿ, ``ದೇಶಾದ್ಯಂತ ನಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ನಾವು ಶೆಲ್ ಅನ್ನು ಲ್ಯೂಬ್ರಿಕೆಂಟ್ ಪಾಲುದಾರರನ್ನಾಗಿ ಮಾಡಿಕೊಂಡಿರುವುದಕ್ಕೆ ಸಂತಸವೆನಿಸುತ್ತಿದೆ. ಈ ಸಾಂಕ್ರಾಮಿಕದ ಅವಧಿಯಲ್ಲಿ ನಮ್ಮ ಈ ಪಾಲುದಾರಿಕೆ ಗ್ರಾಹಕರಿಗೆ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಲಿದೆ. ಗ್ರಾಹಕರು ತಮ್ಮ ಮನೆ ಬಾಗಿಲಲ್ಲೇ ಸೇವೆಗಳನ್ನು ಪಡೆಯಲು ಆರಂಭಿಸಿದ್ದಾರೆ. ಈ ಬೆಳವಣಿಗೆ ಬೆಳೆಯುತ್ತಾ ಹೋಗುತ್ತಿದೆ. ನಮ್ಮ ಡೋರ್ ಸ್ಟೆಪ್ ಕಾರ್ ಸರ್ವೀಸ್ ಗೆ ಭಾರೀ ಮಟ್ಟದ ಬೇಡಿಕೆ ಬರುತ್ತಿದೆ. ಈ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ನಮ್ಮ ಈ ಪಾಲುದಾರಿಕೆ ನೆರವಾಗಲಿದೆ’’ ಎಂದರು. 
 

click me!