KTM ಡ್ಯೂಕ್ 125 ಬೈಕ್ ರೋಡ್ ಟೆಸ್ಟ್ ಯಶಸ್ವಿ-ಶೀಘ್ರದಲ್ಲೇ ಬಿಡುಗಡೆ!

By Web Desk  |  First Published Nov 4, 2018, 3:02 PM IST

KTM ಡ್ಯೂಕ್ ನೂತನ 125 ಬೈಕ್ ಬಿಡುಗಡೆಗೆ ಕೆಟಿಎಂ ಸಜ್ಜಾಗಿದೆ. 125 ಸಿಸಿ ಇಂಜಿನ್, ಕಡಿಮೆ ಬೆಲೆ ಮೂಲಕ ಯಮಹಾ, ಸುಜುಕಿ ಬೈಕ್‌ಗಳಿಗೆ ಸೆಡ್ಡು ಹೊಡೆಯಲು ಕೆಟಿಎಂ ಸಜ್ಜಾಗಿದೆ. ಈಗಾಗಲೇ  ರೋಡ್ ಟೆಸ್ಟ್ ಪೂರ್ಣಗೊಳಿಸಿರುವ KTM ಡ್ಯೂಕ್ 125 ಪರ್ಫಾಮೆನ್ಸ್ ಹೇಗಿದೆ? ಇಲ್ಲಿದೆ ವಿವರ.
 


ಬೆಂಗಳೂರು(ನ.04): ಕೆಟಿಎಂ ಇಂಡಿಯಾ ಇದೀಗ ಭಾರತದಲಲ್ಲಿ ಹೊಸ ಡ್ಯೂಕ್ 125 ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ. ಈಗಾಗಲೇ ಪುಣೆಯಲ್ಲಿರೋ ಬಜಾಜ್ ಕಂಪನಿಯ ಚಕನ್ ಘಟಕದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದೀಗ KTM ಡ್ಯೂಕ್ 125 ಬೈಕ್ ರೋಡ್ ಟೆಸ್ಟ್ ಪೂರ್ಣಗೊಳಿಸಿದೆ.

Latest Videos

undefined

125 ಸಿಸಿ ಬೈಕ್ ಎಬಿಎಸ್ ಬ್ರೇಕ್ ಸಿಸ್ಟಮ್ ಹೊಂದಿದೆ.  ಹೀಗಾಗಿ ಈ ಬೈಕ್ ಗರಿಷ್ಠ ಸುರಕ್ಷತೆ ನೀಡಲಿದೆ. ರೋಡ್ ಟೆಸ್ಟ್‌ನಲ್ಲಿ, ರೈಡಿಂಗ್, ಸೇಫ್ಟಿ ಪರೀಕ್ಷೆಗಳಲ್ಲಿ ಯಶಸ್ವಿಯಾಗಿದೆ.  ಡ್ಯೂಕ್ 390 ಬೈಕ್ ಮಾದರಿಯನ್ನೇ ಹೋಲುವು 125 ಡ್ಯೂಕ್ ಹೆಚ್ಚು ಆಕರ್ಷಕ ವಿನ್ಯಾಸ ಹೊಂದಿದೆ.  

15ಪಿಎಸ್ ಎಂಜಿನ್, 6 ಸ್ಪೀಡ್ ಗೇರ್ ಹೊಂದಿದೆ. 390 ಡ್ಯೂಕ್ ಹಾಗೂ 125 ಡ್ಯೂಕ್ ವಿನ್ಯಾಸ ಹೆಚ್ಚೂ ಕಡಿಮೆ ಒಂದೇ ರೀತಿ ಇರಲಿದೆ. 17 ಇಂಚು ಆಲೋಯ್ ವೀಲ್ಹ್ಸ್, LED ಹೆಡ್‌ಲ್ಯಾಂಪ್ಸ್ ಹೊಂದಿದೆ. 125 ಸಿಸಿ ಸಿಂಗಲ್ ಸಿಲಿಂಡರ್ ಫ್ಯೂಯೆಲ್ ಇಂಜೆಕ್ಟ್ ಮೋಟರ್ ಹೊಂದಿದೆ.

ನೂತನ ಡ್ಯೂಕ್ 125 ಬೈಕ್ ಬೆಲೆ 1 ಲಕ್ಷ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ಈ ಮೂಲಕ ಭಾರತದಲ್ಲಿ ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿರುವ ಯಮಹಾ R15, ಸುಜುಕಿ ಜಿಕ್ಸರ್ ಬೈಕ್‌ಗಳಿಗೆ ಪೈಪೋಟಿ ನೀಡಲು ಸಜ್ಜಾದೆ. ಇದೇ ತಿಂಗಳ ಅಂತ್ಯ ಅಥಾವ ಡಿಸೆಂಬರ್‌ನಲ್ಲಿ  ನೂತನ ಡ್ಯೂಕ್ 125 ಬೈಕ್ ಬಿಡುಗಡೆಯಾಗಲಿದೆ.

click me!