ವಾಹನ ಖರೀದಿಸುವ ಭಾರತೀಯ ಗ್ರಾಹಕರ ಮೊದಲ ಪ್ರಶ್ನೆ ಏನು? ಸಮೀಕ್ಷೆ ಪ್ರಕಟ!

By Web DeskFirst Published Nov 3, 2018, 8:27 PM IST
Highlights

ಭಾರತದಲ್ಲಿ ಕಾರು ಅಥವಾ ಬೈಕ್ ಖರೀದಿಸೋ ಗ್ರಾಹಕರ ಮೊದಲ ಪ್ರಶ್ನೆ ಏನು? ಇಷ್ಟು ವರ್ಷ ಏನಾಗಿತ್ತು. ಈಗ ಬದಲಾಗಿದ್ದು ಏನು? ಈ ಕುರಿತ ಸಮೀಕ್ಷೆಯೊಂದು ಬಹಿರಂಗವಾಗಿದೆ. ಇಲ್ಲಿದೆ ವಿವರ.

ಬೆಂಗಳೂರು(ನ.03): ಭಾರತದಲ್ಲಿ ಇಷ್ಟು ವರ್ಷ ಕಾರಿನ ಲುಕ್, ಸ್ಟೈಲ್, ಪರ್ಫಾಮೆನ್ಸ್, ಹೊರ ವಿನ್ಯಾಸ, ಒಳವಿನ್ಯಾಸ, ಎಂಜಿನ್ ಸಾಮರ್ಥ್ಯ ಅರಿತು ಕಾರು ಖರೀದಿಸುವ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಮೈಲೇಜ್ ಪ್ರಶ್ನಿಸಿ ಕಾರು ಖರೀದಿಸುವವರ ಸಂಖ್ಯೆ ಇದೀಗ ಹೆಚ್ಚಾಗಿದೆ.

ಜೆಡಿ ಪವರ್ ಅಧ್ಯನ 2018 ವರದಿ ಇದೀಗ ಬಹಿರಂಗವಾಗಿದೆ. ಈ ವರದಿ ಪ್ರಕಾರ 2018ರಲ್ಲಿ ಗ್ರಾಹಕರು ಮೈಲೇಜ್ ಹೆಚ್ಚು ನೀಡುವ ವಾಹನ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಹೊಸ ವಾಹನ ಖರೀದಿಸಿದ ಗ್ರಾಹಕರಲ್ಲಿ ಶೇಕಡಾ 13ರಷ್ಟು ಮಂದಿ ಮೈಲೇಜ್ ಸಾಮರ್ಥ್ಯ ನೋಡಿ ವಾಹನ ಖರೀಧಿಸಿದ್ದಾರೆ.

ಪರ್ಪಾಮೆನ್ಸ್ ನೋಡಿ ವಾಹನ ಖರೀದಿಸುವರ ಸಂಖ್ಯೆ ಶೇಕಡಾ 12, ಟೆಕ್ನಾಲಜಿ ಹಾಗೂ ಫೀಚರ್ಸ್ ನೋಡಿ  ವಾಹನ ಖರೀದಿಸಿದವರೆ ಸಂಖ್ಯೆ ಶೇಕಡಾ 10. ಇನ್ನು ವಾಹನ ಕುರಿತು ಅಂತರ್ಜಾಲದಲ್ಲಿ ಜಾಲಾಡಿದವರ ಸಂಖ್ಯೆ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಕಳೆದ ವರ್ಷ ಶೇಕಡಾ 50ರಷ್ಟಿದ್ದ ಸಂಖ್ಯೆ ಈ ವರ್ಷ 54ಕ್ಕೇರಿದೆ.ಗ್ರಾಹಕರು ತಮ್ಮ ಬೆಲೆಗೆ ಅನುಗುಣವಾಗಿ ಕಾರು ಖರೀದಿಸುತ್ತಾರೆ. ಇಷ್ಟು ದಿನ ಕಾರು ಖರೀದಿಸುವಾಗ ತಮ್ಮ ಬೆಲೆಗೆ ಕಾರು ಬಂದರೆ ಸಾಕು, ಮೈಲೇಜ್ ಬಗ್ಗೆ ತೆಲೆಕೆಡಿಸಿಕೊಳ್ಳುತ್ತಿರಲಿಲ್ಲ. ಇದೀಗ ಖರೀದಿ ವೇಳೆಯೇ ಮೈಲೇಜ್ ಕುರಿತು ಹೆಚ್ಚಿನ ಪ್ರಶ್ನೆಗಳು ಗ್ರಾಹಕರಿಂದ ಬರುತ್ತಿದೆ. 

ಮಧ್ಯಮ ವರ್ಗದ ಜನರು ಹೆಚ್ಚಾಗಿ ಮೈಲೇಜ್ ಕುರಿತು ಹೆಚ್ಚಿನ ಗಮನ ಹರಿಸುತ್ತಾರೆ. ಹಿಂದಿನಿಂದಲೂ ಭಾರತೀಯರಿಗೆ ಮೈಲೇಜ್ ಮುಖ್ಯ. ಇದೇ ಕಾರಣಕ್ಕೆ ಕಾರಿನಲ್ಲಿ ಪ್ರಯಾಣ ಸುರಕ್ಷತೆಯನ್ನೂ ಕಡೆಗಣಿಸಲಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡು "ಕಿತ್ನಾ ದೇತಿ ಹೇ" (ವಾಹನ ಎಷ್ಟು ಮೈಲೇಜ್ ನೀಡುತ್ತೆ) ಅನ್ನೋ ಜಾಹೀರಾತು ಹೆಚ್ಚು ಪ್ರಸಿದ್ದವಾಗಿತ್ತು. ಸದ್ಯ ಸರ್ಕಾರ ಹಾಗೂ ಜನರು ಮೈಲೇಜ್ ಜೊತೆಗೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಇಷ್ಟೇ ಅಲ್ಲ ನೂತನ ಕಾರಗಳು ಈಗ NCAP ಗ್ಲೋಬಲ್ ಸುರಕ್ಷತಾ ಪರೀಕ್ಷೆ ನಡೆಸಲೇಬೇಕು. ಇಷ್ಟೇ ಅಲ್ಲ ಕನಿಷ್ಠ ಸುರಕ್ಷತೆಯ ಕಾರುಗಳನ್ನ 2019ರಿಂದ ಮಾರಾಟ ಮಾಡುವಂತಿಲ್ಲ.  
 

click me!