ಕಿಯಾ ಸೊನೆಟ್ ಕಾರು ಅನಾವರಣ; ಮಾರುತಿ ಬ್ರೆಜಾ, ನೆಕ್ಸಾನ್‌ಗೆ ಪೈಪೋಟಿ!

By Suvarna News  |  First Published Feb 5, 2020, 3:46 PM IST

ಸಬ್‌ಕಾಂಪಾಕ್ಟ್ SUV ಕಾರುಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಪೈಪೋಟಿ ಕೂಡ ಹೆಚ್ಚಾಗಿದೆ. ಮಾರುತಿ ಬ್ರೆಜಾ, ಮಹೀಂದ್ರ XUV300, ಟಾಟಾ ನೆಕ್ಸಾನ್ ಸೇರಿದಂತೆ ಹಲವು SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಮೋಟಾರ್ಸ್, ನೂತನ ಸೊನೆಟ್ ಕಾನ್ಸೆಪ್ಟ್ ಕಾರು ಅನಾವರಣ ಮಾಡಿದೆ. ಸೆಲ್ಟೋಸ್ ಕಾರಿನ ಬಳಿಕ ಇದೀಗ ಸೊನೆಟ್ ದಾಖಲೆ ಬರೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
 


ನವದೆಹಲಿ(ಫೆ.05):  ಹ್ಯುಂಡೈ ಕ್ರೆಟಾ, ನಿಸಾನ್ ಕಿಕ್ಸ್ ಸೇರಿದಂತೆ ಹಲವು  SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಮೋಟಾರ್ಸ್ ಭಾರತದಲ್ಲಿ ಸೆಲ್ಟೋಸ್ ಕಾರು ಬಿಡುಗಡೆ ಮಾಡಿ ಯಶಸ್ಸು ಸಾಧಿಸಿದೆ. ಇದೀಗ ಕಿಯಾ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ. ಕಿಯಾ ಸೊನೆಟ್ ಸಬ್‌ಕಾಂಪಾಕ್ಟ್ SUV ಕಾನ್ಸೆಪ್ಟ್ ಕಾರು ಅನಾವರಣ ಮಾಡಿದೆ..

ಇದನ್ನೂ ಓದಿ: ಒಂದೇ ದಿನದಲ್ಲಿ ದಾಖಲೆ ಬರೆದ ಇನೋವಾ ಪ್ರತಿಸ್ಪರ್ಧಿ ಕಿಯಾ ಕಾರ್ನಿವಲ್!

Tap to resize

Latest Videos

undefined

ಹ್ಯುಂಡೈ ಕಾರುಗಳಿ ತೀವ್ರ ಪೈಪೋಟಿ ನೀಡುತ್ತಿರುವ ಕಿಯಾ ಇದೀಗ ಹ್ಯುಂಡೈ ವೆನ್ಯೂ ಕಾರಿಗೆ ಹೊಡೆತ ನೀಡಲು ಮುಂದಾಗಿದೆ. ನೂತನ ಸೊನೆಟ್ ಕಾನ್ಸೆಪ್ಟ್ ಕಾರು ಹಲವು ವಿಶೇಷತೆಗಳನ್ನೂ ಒಳಗೊಂಡಿದೆ. 

ಮೂರು ಎಂಜಿನ್ ವೇರಿಯೆಂಟ್ ಲಭ್ಯವಿದೆ. 1.2 ಲೀಟರ್ ಪೆಟ್ರೋಲ್, 1.0 ಲೀಟರ್ ಟರ್ಬೋ ಪೆಟ್ರೋಲ್ ಹಾಗೂ 1.5 ಲೀಟರ್ ಎಂಜಿನ್ ಆಯ್ಕೆ ಲಭ್ಯವಿದೆ. ಆ್ಯಪಲ್, ಆಡ್ರಾಂಯ್ಡ್ ಆಟೋ ಕಾರ್ ಪ್ಲೇ, ಕ್ಲೈಮೇಟ್ ಕಂಟ್ರೋಲ್,  ಎಲೆಕ್ಟ್ರಿಕ್ ಸನ್‌ರೂಫ್, ವಯರ್‌ಲೆಸ್ ಚಾರ್ಜರ್, ಪುಶ್ ಬಟನ್ ಸ್ಟಾರ್ಟ್, UVO ಕೆನೆಕ್ಟ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ. 

ಇದನ್ನೂ ಓದಿ: ಸೆಲ್ಟೋಸ್, ಕ್ರೆಟಾಗೆ ಪ್ರತಿಸ್ಪರ್ಧಿ; ಬರುತ್ತಿದೆ ಮಾರುತಿ ಸುಜುಕಿ ಫ್ಯೂಚರೋ ಇ ಕಾರು!

ಆಂಧ್ರಪ್ರದೇಶದ ಅನಂತಪುರ ಘಟಕದಲ್ಲಿ ನಿರ್ಮಾಣವಾಗಿರುವ ಈ ಕಾರಿನ ಬೆಲೆ 7 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)  ಆರಂಭವಾಗಲಿದೆ ಎಂದು ಅಂದಾಜಿಸಲಾಗಿದೆ. ದೀಪಾವಳಿ ಹಬ್ಬದ ವೇಳೆ ನೂತನ ಕಾರು ಭಾರತದಲ್ಲಿ ರಸ್ತೆಗಳಲ್ಲಿ ಓಡಾಟ ಆರಂಭಿಸಲಿದೆ.

ಗ್ರೇಟರ್ ನೋಯ್ಡಾದಲ್ಲಿ ಫೆಬ್ರವರಿ 7 ರಿಂದ ಆರಂಭವಾಗಲಿರುವ ಆಟೋ ಎಕ್ಸ್ಪೋ 2020ರ ಮೋಟಾರು ಶೋನಲ್ಲಿ ಕಿಯಾ ಸೊನೆಟ್ ಕಾರನ್ನು ಪ್ರದರ್ಶಿಲಾಗುತ್ತಿದೆ. 

ಫೆಬ್ರವರಿ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ ಮಾಡಿ

click me!