ಕಿಯಾ ಸೆಲ್ಟೊಸ್ ಕಾರಿನ ಆನ್‌ಲೈನ್ ಬುಕಿಂಗ್ ದಿನಾಂಕ ಬಹಿರಂಗ!

By Web DeskFirst Published Jul 8, 2019, 9:32 PM IST
Highlights

ಕಿಯಾ ಸೆಲ್ಟೊಸ್ ಕಾರು ಬಿಡುಗಡೆಗೆ ಸಜ್ಜಾಗಿದೆ.  ಇದೀಗ ಕಾರಿನ ಆನ್‌ಲೈಕ್ ಬುಕಿಂಗ್ ದಿನಾಂಕ ಬಹಿರಂಗಗೊಂಡಿದೆ. ಈ ಮೂಲಕ ಗ್ರಾಹಕರ ಕುತೂಹಲಕ್ಕೆ ತೆರೆ ಬಿದ್ದಿದೆ. ಇಲ್ಲಿದೆ ಕಿಯಾ ಸೆಲ್ಟೊಸ್ ಕಾರಿನ ಬುಕಿಂಗ್ ದಿನಾಂಕ, ಬೆಲೆ ಹಾಗೂ ವಿಶೇಷತೆ ವಿವರ.

ನವದೆಹಲಿ(ಜು.08): ಕಿಯಾ ಮೋಟಾರ್ಸ್ ಭಾರತದಲ್ಲಿ ಮೊದಲ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಹ್ಯುಂಡೈ ಕ್ರೆಟಾ, ಮಹೀಂದ್ರ XUV500, ನಿಸಾನ್ ಕಿಕ್ಸ್, ರೆನಾಲ್ಟ್ ಕ್ಯಾಪ್ಟರ್ ಸೇರಿದಂತೆ ಮಿಡ್ ಸೈಜ್ SUV ಕಾರಿಗೆ ಪೈಪೋಟಿಯಾಗಿ ಕಿಯಾ ಸೆಲ್ಟೊಸ್ ಕಾರು ಮಾರುಕಟ್ಟೆ ಪ್ರವೇಶಿಸುತ್ತಿದೆ. ಜುಲೈ 15 ರಿಂದ ಕಿಯಾ ಸೆಲ್ಟೊಸ್ ಕಾರಿನ ಆನ್‌ಲೈನ್ ಬುಕಿಂಗ್ ಆರಂಭಗೊಳ್ಳಲಿದೆ.

ಕಿಯಾ ಸೆಲ್ಟೊಸ್ ಪೆಟ್ರೊಲ್ ಹಾಗೂ ಡೀಸೆಲ್ ವೇರಿಯೆಂಟ್ ಲಭ್ಯವಿದೆ.   1.5-ಲೀಟರ್ ಪೆಟ್ರೋಲ್ ಎಂಜಿನ್, 6-ಸ್ಪೀಡ್ ಮ್ಯಾನ್ಯುಯೆಲ್ ಹಾಗೂ CVT ಆಯ್ಕೆ ನೀಡಿದರೆ, 1.5-ಡೀಸೆಲ್ ಎಂಜಿನ್, 6-ಸ್ಪೀಡ್ ಮ್ಯಾನ್ಯುಯೆಲ್ ಹಾಗೂ 6-ಸ್ಪೀಡ್ ಟಾರ್ಕ್ ಕನ್‌ವರ್ಟರ್ ಆಯ್ಕೆ ನೀಡಲಿದೆ. ಇನ್ನು 1.4-ಲೀಟರ್ ಟರ್ಬೋ ಪೆಟ್ರೋಲ್  ಎಂಜಿನ್, ಡೈರೆಕ್ಟ್ ಇಂಜೆಕ್ಷನ್ ಮೇಟೆಡ್  6-ಮ್ಯಾನ್ಯುಯೆಲ್ ಅಥವಾ  7-ಸ್ಪೀಡ್ ಡ್ಯುಯೆಲ್ ಕ್ಲಚ್ ಅಟೋಮ್ಯಾಟಿಕ್ ಆಯ್ಕೆ ಹೊಂದಿದೆ.

ಗರಿಷ್ಠ ಸುರಕ್ಷತೆ, ಸನ್‌ರೂಪ್, ರೇರ್ ಸೆನ್ಸಾರ್ ಕ್ಯಾಮರ, 10.2 ಇಂಚಿನ ಇನ್ಫೋಟೈನ್‌ಮೆಂಟ್ ಟಚ್ ಸ್ಕ್ರೀನ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ. ಕಿಯಾ ಸೆಲ್ಟೊಸ್ ಕಾರಿನ ಬೆಲೆ 11 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳಲಿದೆ. ಗರಿಷ್ಠ ಬೆಲೆ 17 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಈ ತಿಂಗಳ(ಜುಲೈ) ಅಂತ್ಯದಲ್ಲಿ ಕಿಯಾ ಸೆಲ್ಟೊಸ್ ಬಿಡುಗಡೆಯಾಗಲಿದೆ. 

click me!