ಭಾರತದಿಂದ 200 ಕಾರು ಖರೀದಿಸಿದ ಬಾಂಗ್ಲಾದೇಶ ಸೇನೆ!

By Web Desk  |  First Published Jul 8, 2019, 6:36 PM IST

ಬಾಂಗ್ಲಾದೇಶ ಸೇನೆ ಇದೀಗ ಭಾರತೀಯ ಕಾರನ್ನು ಬುಕ್ ಮಾಡಿದೆ. ಬರೊಬ್ಬರಿ 200 ಕಾರುಗಳನ್ನು ಬುಕ್ ಮಾಡಿಕೊಂಡಿದೆ. ಶೀಘ್ರದಲ್ಲೇ ಬಾಂಗ್ಲಾದೇಶ ಸೇನೆ ಸೇರಿಕೊಳ್ಳಲಿರುವ ಭಾರತದ ಕಾರು ಯಾವುದು? ಇಲ್ಲಿದೆ ವಿವರ.


ನವದೆಹಲಿ(ಜು.08): ಭಾರತದ ಕಾರು ಕಂಪನಿಗಳು ಸದ್ಯ ಏಷ್ಯಾದಲ್ಲಿ ಗರಿಷ್ಠ ಮಾರುಕಟ್ಟೆ ಹೊಂದಿಗೆ. ಈ ಮೂಲಕ ವಿದೇಶಿ ಆಟೋಮೊಬೈಲ್ ಕಂಪನಿಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಇದೀಗ ಬಾಂಗ್ಲಾದೇಶ ಸೇನೆ ಭಾರತದ ಟಾಟಾ ಹೆಕ್ಸಾ ಕಾರನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಬರೊಬ್ಬರಿ 200 ಕಾರುಗಳನ್ನು ಬಾಂಗ್ಲಾದೇಶ ಸೇನೆ ಬುಕ್ ಮಾಡಿದೆ.

Tap to resize

Latest Videos

undefined

ಇದನ್ನೂ ಓದಿ: ಜುಲೈ 9ಕ್ಕೆ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆ; 452ಕಿ.ಮೀ ಮೈಲೇಜ್!

ಟಾಟಾ ಹೆಕ್ಸಾ ಭಾರತದಲ್ಲಿ ನಿರ್ಮಾಣವಾದ ಬಲಿಷ್ಠ 4×4 SUV ಕಾರು. ಆಫ್ ರೋಡ್‌ನಲ್ಲಿ ಹೆಕ್ಸಾ ಕಾರು ಸಲೀಸಾಗಿ ಚಲಿಸುತ್ತದೆ. ಟಾಟಾ ಮೋಟಾರ್ಸ್ ನಿರ್ಮಾಣ ಹೆಕ್ಸಾ ಕಾರು ಈಗಾಗಲೇ ಭಾರತದಲ್ಲಿ ಗ್ರಾಹಕರ ಮನಗೆದ್ದಿದೆ. ಹೆಕ್ಸಾ ಪರೀಕ್ಷೆ ನಡೆಸಿದ ಬಾಂಗ್ಲಾದೇಶ ಸೇನೆ ಇದೀಗ 200 ಕಾರುಗಳನ್ನು ಬುಕ್ ಮಾಡಿದೆ.

ಇದನ್ನೂ ಓದಿ: ಟೊಯೊಟಾ ಫಾರ್ಚುನರ್ ಪ್ರತಿಸ್ಪರ್ಧಿ, ಬರುತ್ತಿದೆ ಜೀಪ್ ಕಂಪಾಸ್ 7 ಸೀಟರ್!

2012ರಿಂದ ಬಾಂಗ್ಲಾದೇಶ ಸೇನೆ ಜೊತೆ ವ್ಯವಹಾರ ಮಾಡುತ್ತಿರುವ ಟಾಟಾ ಮೋಟಾರ್ಸ್ ಇದೀಗ ಗರಿಷ್ಠ ಪ್ರಮಾಣದ ಒಪ್ಪಂದಕ್ಕೆ ಸಹಿ ಹಾಕಿದೆ. ಸೇನೆ ಹೆಕ್ಸಾ ಕಾರು ಬುಕ್ ಮಾಡಿದ ಕಾರಣ ಟಾಟಾ ಹೆಕ್ಸಾ ಕಾರು ಬಾಂಗ್ಲಾದೇಶದಲ್ಲಿ ಮಾರಾಟವಿಲ್ಲ.  ಭಾರತದಲ್ಲಿ ಟಾಟಾ ಹ್ಯಾರಿಯರ್ ಕಾರು ಯಶಸ್ಸಿನ ಬೆನ್ನಲ್ಲೇ ಇದೀಗ 7 ಸೀಟಿನ ಹ್ಯಾರಿಯರ್ ಬಿಡುಗಡೆಗೆ ಸಜ್ಜಾಗಿದೆ. ಟಾಟಾ ಬುಝಾರ್ಡ್ ಹೆಸರಿನ ಈ ಕಾರು ಬಿಡುಗಡೆ ಬಳಿಕ ಹೆಕ್ಸಾ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
 

click me!