ಆಗಸ್ಟ್‌ನಲ್ಲಿ ಆಟೋಮೊಬೈಲ್ ಸ್ಥಿತಿಗತಿ; ದಾಖಲೆ ಕುಸಿತ ಕಂಡ ಟಾಟಾ, ಮಾರುತಿ!

By Web DeskFirst Published Sep 1, 2019, 9:11 PM IST
Highlights

ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿನ ಮಾರಾಟ ಕುಸಿತ ಚೇತರಿಕೆ ಕಾಣುತ್ತಿಲ್ಲ. ಆಗಸ್ಟ್ ತಿಂಗಳಲ್ಲಿ ಟಾಟಾ ಮೋಟಾರ್ಸ್ ದಾಖಲೆಯ ಕುಸಿತ  ಕಂಡಿದೆ. ಇನ್ನು ಮಾರುತಿ, ಹ್ಯುಂಡೈ ಕೂಡ ಇದೇ ಹಾದಿ ಹಿಡಿದಿದೆ. ಆಗಸ್ಟ್ ತಿಂಗಳ ವಾಹನ ಮಾರಾಟ ವಿವರ ಇಲ್ಲಿದೆ.

ನವದೆಹಲಿ(ಸೆ.01): ಕಾರು, ಬೈಕ್ ಸೇರಿದಂತೆ ವಾಹನ ಮಾರಾಟ ಕುಸಿತ ಕಾಣುತ್ತಿರುವ ಬೆನ್ನಲ್ಲೇ ಭಾರತದ ಆರ್ಥಿಕತೆಗೆ ಹೊಡೆತ ಬೀಳುತ್ತಿದೆ. ಪ್ರತಿ ತಿಂಗಳು ಆಟೋಮೊಬೈಲ್ ಕಂಪನಿಗಳ ಮಾರಾಟ ಪಾತಾಳಕ್ಕಿಳಿಯುತ್ತಿದೆ.  ಆಗಸ್ಟ್ ತಿಂಗಲ್ಲಿ ಎಲ್ಲಾ ಆಟೋಮೊಬೈಲ್ ಕಂಪನಿಗಳು ಕುಸಿತ ಕಂಡಿದೆ. ವಾಹನ ಮಾರಾಟದಲ್ಲಿ ಒಟ್ಟು ಶೇಕಡಾ 30 ರಷ್ಟು ಕುಸಿತ ಕಂಡಿದೆ.

ಇದನ್ನೂ ಓದಿ: ಕುಸಿದ ಆಟೋಮೊಬೈಲ್‌ಗೆ ಜೀವಜಲ; GST ಕಡಿತಕ್ಕೆ ಮುಂದಾದ ಕೇಂದ್ರ!

ಟಾಟಾ ಮೋಟಾರ್ಸ್ ಆರಂಭವಾದ ದಿನದಿಂದ ಇಲ್ಲೀವರೆಗೆ ಈ ಮಟ್ಟಕ್ಕೆ ಇಳಿದಿಲ್ಲ. ಇದೀಗ ಟಾಟಾ ಮೋಟಾರ್ಸ್ ವಾಹನಗಳು ಮಾರಾಟದಲ್ಲಿ 60% ಕುಸಿತ ಕಂಡಿದೆ. ಇನ್ನು ಮಾರುತಿ ಸುಜುಕಿ 33% ಕುಸಿತ ಕಂಡಿದೆ. ಹ್ಯುಂಡೈ, ನಿಸ್ಸಾನ್ ಸೇರದಂತೆ ಎಲ್ಲಾ ಆಟೋಮೊಬೈಲ್ ಕಂಪನಿ ತಲೆ ಮೇಲೆ ಕೈಹೊತ್ತು ಕೂತಿದೆ. 

ಇದನ್ನೂ ಓದಿ: ವಾಹನ ಮಾರಾಟ ಕುಸಿತ: 19 ವರ್ಷಗಳ ದಾಖಲೆ!

2018ರ ಆಗಸ್ಟ್ ತಿಂಗಳಲ್ಲಿ ಟಾಟಾದ 17,351 ವಾಹನಗಳು ಮಾರಾಟವಾಗಿತ್ತು. ಆದರೆ 2019ರ ಆಗಸ್ಟ್ ತಿಂಗಳಲ್ಲಿ ಟಾಟಾದ 7,316 ವಾಹನಗಳು ಮಾರಾಟವಾಗಿದೆ. ಈ ಮೂಲಕ ಬರೋಬ್ಬರಿ 58% ಕುಸಿತ ಕಂಡಿದೆ. ಮಾರುತಿ ಸುಜುಕಿ 2018ರ ಆಗಸ್ಟ್ ತಿಂಗಳಲ್ಲಿ 1,06,413 ವಾಹನ ಮಾರಾಟ ಮಾಡಿತ್ತು. ಆದರೆ 2019ರ ಆಗಸ್ಟ್ ತಿಂಗಳಲ್ಲಿ 1,06,413 ವಾಹನಗಳು ಮಾರಾಟವಾಗಿದೆ. ಈ ಮೂಲಕ 32.7% ಮಾರಾಟ ಕುಸಿತಗೊಂಡಿದೆ.

ಇದನ್ನೂ ಓದಿ: ಆಟೋಮೊಬೈಲ್‌ ಕ್ಷೇತ್ರದಲ್ಲಿ 3.5 ಲಕ್ಷ ಉದ್ಯೋಗ ಕಟ್!

ಟೊಯೊಟಾ ಕಂಪನಿ 24 %, ಮಹೀಂದ್ರ 26% ಕುಸಿತ ಕಂಡಿದೆ. ದ್ವಿಚಕ್ರ ವಾಹನಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹೀರೋ ಮೋಟಾರ್ ಕಂಪನಿ 26% ಮಾರಾಟದಲ್ಲಿ ಕುಸಿತ ಅನುಭವಿಸಿದೆ. ಟಿವಿಎಸ್ 20%, ಬಜಾಜ್ ಮೋಟಾರ್ಸ್ 13% ಕುಸಿತ ಕಂಡಿದೆ. 

click me!